Bengaluru 22°C
Ad

ಇಂದಿರಾ ಗಾಂಧಿ ಸೆಂಟರ್ ಫಾರ್ ಅಟಾಮಿಕ್ ರಿಸರ್ಚ್‌ನಲ್ಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಭಾರತ ಸರ್ಕಾರದ ಪರಮಾಣು ಶಕ್ತಿ ಇಲಾಖೆಯ ಅಡಿಯಲ್ಲಿ ಬರುವ ಇಂದಿರಾ ಗಾಂಧಿ ಸೆಂಟರ್ ಫಾರ್ ಅಟಾಮಿಕ್ ರಿಸರ್ಚ್ ದೇಶಾದ್ಯಂತ ಖಾಲಿ ಇರುವ ವಿವಿಧ ವೈದ್ಯಕೀಯ ಮತ್ತು ತಾಂತ್ರಿಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ.

ನವದೆಹಲಿ: ಭಾರತ ಸರ್ಕಾರದ ಪರಮಾಣು ಶಕ್ತಿ ಇಲಾಖೆಯ ಅಡಿಯಲ್ಲಿ ಬರುವ ಇಂದಿರಾ ಗಾಂಧಿ ಸೆಂಟರ್ ಫಾರ್ ಅಟಾಮಿಕ್ ರಿಸರ್ಚ್ ದೇಶಾದ್ಯಂತ ಖಾಲಿ ಇರುವ ವಿವಿಧ ವೈದ್ಯಕೀಯ ಮತ್ತು ತಾಂತ್ರಿಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ.

ಸೈಂಟಿಫಿಕ್ ಆಫೀಸರ್, ಟೆಕ್ನಿಕಲ್ ಆಫೀಸರ್, ನರ್ಸ್ ಮತ್ತು ಟೆಕ್ನಿಷಿಯನ್ ಸೇರಿದಂತೆ ಒಟ್ಟು 91 ಹುದ್ದೆಗಳಿವೆ. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಜೂನ್ 30 ಕೊನೆಯ ದಿನವಾಗಿದೆ.

ಸೈಂಟಿಫಿಕ್‌ ಆಫೀಸರ್‌- 15 ಹುದ್ದೆ, ವಿದ್ಯಾರ್ಹತೆ: ಸಂಬಂಧಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ, ಟೆಕ್ನಿಕಲ್‌ ಆಫೀಸರ್‌- 20 ಹುದ್ದೆ, ವಿದ್ಯಾರ್ಹತೆ: ಸಂಬಂಧಿತ ವಿಷಯದಲ್ಲಿ ಪದವಿ, ನರ್ಸ್‌- 25 ಹುದ್ದೆ, ವಿದ್ಯಾರ್ಹತೆ: ನರ್ಸಿಂಗ್‌ನಲ್ಲಿ ಡಿಪ್ಲೋಮಾ / ಪದವಿ, ಟೆಕ್ನೀಷಿಯನ್‌- 30 ಹುದ್ದೆ, ವಿದ್ಯಾರ್ಹತೆ: ಡಿಪ್ಲೋಮಾ + ಸರ್ಟಿಫಿಕೇಷನ್‌.

ಸೈಂಟಿಫಿಕ್‌ ಆಫೀಸರ್‌: ಗರಿಷ್ಠ ವಯಸ್ಸು 35 ವರ್ಷ, ಟೆಕ್ನಿಕಲ್‌ ಆಫೀಸರ್‌: ಗರಿಷ್ಠ ವಯಸ್ಸು 30 ವರ್ಷ, ನರ್ಸ್‌: ಗರಿಷ್ಠ ವಯಸ್ಸು 32 ವರ್ಷ ಮತ್ತು ಟೆಕ್ನೀಷಿಯನ್‌: ಗರಿಷ್ಠ ವಯಸ್ಸು 28 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳ ರಿಯಾಯಿತಿ ಇದೆ.

ಸಾಮಾನ್ಯ ಮತ್ತು ಒಬಿಸಿ ವರ್ಗದ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 500 ರೂ. ಪಾವತಿಸಬೇಕು. ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇಲ್ಲ. ಆನ್‌ಲೈನ್‌ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.

ದೇಶಾದ್ಯಂತ 25 ಕೇಂದ್ರಗಳಲ್ಲಿ ಪರೀಕ್ಷೆ ಬರೆಯಬಹುದು. ಕರ್ನಾಟಕದಲ್ಲಿ ಬೆಂಗಳೂರು ಮತ್ತು ಮಂಗಳೂರಿನಲ್ಲಿ ಪರೀಕ್ಷಾ ಕೇಂದ್ರಗಳಿವೆ. ಎರಡು ಹಂತಗಳಲ್ಲಿ ಪರೀಕ್ಷೆ ನಡೆಯಲಿದ್ದು ಗಣಿತ, ವಿಜ್ಞಾನ ಮತ್ತು ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳಿರುತ್ತವೆ.

 

 

Ad
Ad
Nk Channel Final 21 09 2023
Ad