Ad

ಯುಜಿಸಿಇಟಿ 2024ರ ದಾಖಲೆಗಳ ಆಫ್ ಲೈನ್ ಪರಿಶೀಲನೆ ಆರಂಭ

ಯುಜಿಸಿಇಟಿ ದಾಖಲೆಗಳ ಆಫ್ ಲೈನ್ ಪರಿಶೀಲನೆ ಆರಂಭ ಮಾಡಲಾಗಿದೆ.

ಬೆಂಗಳೂರು: ಯುಜಿಸಿಇಟಿ ದಾಖಲೆಗಳ ಆಫ್ ಲೈನ್ ಪರಿಶೀಲನೆ ಆರಂಭ ಮಾಡಲಾಗಿದೆ. ಎಂಜಿನಿಯರಿಂಗ್, ಆರ್ಕಿಟೆಕ್ಚರ್, ಯೋಗ & ನ್ಯಾಚುರೋಪತಿ, ಪಶು ವೈದ್ಯಕೀಯ ಮತ್ತು ಪಶುಸಂಗೋಪನೆ, ಕೃಷಿ ವಿಜ್ಞಾನ ಕೋರ್ಸುಗಳು, ಬಿ.ಎಸ್ಸಿ ಆನರ್ಸ್ ಕೃಷಿ, ಬಿ.ಎಸ್ಸಿ ಆನರ್ಸ್ ರೇಷ್ಮೆ ಕೃಷಿ ಮುಂತಾದವು, ಬಿ.ಎಸ್ಸಿ ನರ್ಸಿಂಗ್, ಬಿ.ಫಾರ್ಮಾ, 2ನೇ ವರ್ಷದ ಬಿ-ಫಾರ್ಮಾ ಮತ್ತು ಫಾರ್ಮಾ-ಡಿ ಕೋರ್ಸುಗಳ ಪ್ರವೇಶಕ್ಕೆ ಜೂನ್ 25ರಿಂದ ಜೂನ್ 29ರವರೆಗೆ ದಾಖಲೆಗಳ ಆಫ್ ಲೈನ್ ಪರಿಶೀಲನೆ ನಡೆಯಲಿದೆ.

Ad
300x250 2

ಯುಜಿಸಿಇಟಿ-2024ರ ಆನ್‌ಲೈನ್ ಅರ್ಜಿಯಲ್ಲಿ ಅರ್ಹತಾ ಕಂಡಿಕೆಗಳಾದ ಬಿ. ಸಿ. ಡಿ, ಐ, ಜೆ. ಕೆ. ಎಲ್. ಎಂ. ಎನ್, ಜೆಡ್- ಈ ಕ್ಲಾಸ್ ಗಳನ್ನು ಕ್ಷೇಮ್ ಮಾಡಿರುವ ಹಾಗೂ ರಾಂಕ್ ಪಡೆದಿರುವ ಅಭ್ಯರ್ಥಿಗಳಿಗೆ ಆಫ್ ಲೈನ್ ದಾಖಲಾತಿ ಪರಿಶೀಲನೆಯು ಜೂನ್ 25ರಿಂದ 29 ರವರೆಗೆ ಮಲ್ಲೇಶ್ವರದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿ ನಡೆಯಲಿದೆ.

ಅಭ್ಯರ್ಥಿಗಳಿಗೆ ಖುದ್ದು ಹಾಜರಾಗಲು ಕೆಇಎ ಸೂಚಿಸಿದೆ. ಇನ್ನು ವೈ ಅರ್ಹತಾ ಕಂಡಿಕೆಯನ್ನು ಕ್ಲೇಮ್ ಮಾಡಿರುವ ಅಭ್ಯರ್ಥಿಗಳು ದಾಖಲೆಗಳ ಪರಿಶೀಲನೆಗೆ ಹಾಜರಾಗುವ ಅಗತ್ಯವಿಲ್ಲ ಅಂತಾ ಸ್ಪಷ್ಟಪಡಿಸಿದೆ. ವಿದ್ಯಾರ್ಥಿಗಳ ರಾಂಕ್ ಆಧರಿಸಿ ದಾಖಲಾತಿ ಪರಿಶೀಲನೆಗೆ ಹಾಜರಾಗಬೇಕಿದ್ದು ಈಗಾಗಲೇ ಈ ವೇಳಾಪಟ್ಟಿಯನ್ನು ಕೆಇಎ ವೆಬ್ ಸೈಟಿನಲ್ಲಿ ಪ್ರಕಟಿಸಲಾಗಿದೆ.

ಪರಿಶೀಲನೆಗೆ ಸಲ್ಲಿಸಬೇಕಾದ ಮೂಲ ದಾಖಲೆಗಳ ವಿವರಗಳನ್ನು ಪ್ರಾಧಿಕಾರದ ವೆಬ್‌ಸೈಟಿನಲ್ಲಿ ಇ-ಮಾಹಿತಿ ನೀಡಲಾಗಿದೆ. ಅಭ್ಯರ್ಥಿಗಳು ತಮ್ಮ ಅರ್ಹತಾ ರ್ಯಾಂಕ್ ಗೆ ಅನುಸಾರವಾಗಿ ಅವಶ್ಯವಿರುವ ಎಲ್ಲಾ ಮೂಲ ದಾಖಲೆಗಳೊಂದಿಗೆ ಹಾಗೂ ಒಂದು ಸೆಟ್ ಜೆರಾಕ್ಸ್ ಪ್ರತಿಗಳೊಂದಿಗೆ ಹಾಜರಾಗಬೇಕಿದೆ ಅಂತಾ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿರ್ದೇಶಕ ಪ್ರಸನ್ನ ಹೇಳಿದ್ದಾರೆ.

Ad
Ad
Nk Channel Final 21 09 2023
Ad