Bengaluru 23°C
Ad

ನ್ಯೂ ಇಂಡಿಯಾ ಅಶ್ಯೂರೆನ್ಸ್ ಇಲಾಖೆ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಭಾರತ ಸರ್ಕಾರದ ಸಂಸ್ಥೆಯಾದ ನ್ಯೂ ಇಂಡಿಯಾ ಅಶ್ಯೂರೆನ್ಸ್ ಇಲಾಖೆ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಈಗಾಗಲೇ ಹೊರಡಿಸಿದೆ. 

ಭಾರತ ಸರ್ಕಾರದ ಸಂಸ್ಥೆಯಾದ ನ್ಯೂ ಇಂಡಿಯಾ ಅಶ್ಯೂರೆನ್ಸ್ ಇಲಾಖೆ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಈಗಾಗಲೇ ಹೊರಡಿಸಿದೆ. ನ್ಯೂ ಇಂಡಿಯಾ ಅಶ್ಯೂರೆನ್ಸ್ ಇಲಾಖೆ ಈ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಸೆಪ್ಟೆಂಬರ್ 6 ರಂದು ನೋಟಿಫಿಕೇಶನ್ ರಿಲೀಸ್ ಮಾಡಿತ್ತು.

ಆಡಳಿತ ಅಧಿಕಾರಿ ಸ್ಕೇಲ್-1, ಅಕೌಂಟ್​ ಪೋಸ್ಟ್​ಗಳನ್ನು ಭರ್ತಿ ಮಾಡಲು ಈ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಆನ್​ಲೈನ್ ಮೂಲಕವೇ ಅಪ್ಲೇ ಮಾಡಬೇಕು. ಸಂಬಳ ಹಾಗೂ ಒಟ್ಟು ಹುದ್ದೆಗಳು: ಸ್ಯಾಲರಿ- 80,000 ರೂಪಾಯಿಗಳು, ಎನ್​​ಎಐಸಿಎಲ್​ನಲ್ಲಿ ಒಟ್ಟು 170 ಹುದ್ದೆಗಳು ಖಾಲಿ ಇವೆ

ವಯೋಮಿತಿ: 21 ವರ್ಷದಿಂದ 30 ವರ್ಷದ ಒಳಗಿನವರಿಗೆ ಅವಕಾಶವಿದೆ. ವಿದ್ಯಾರ್ಹತೆ: ಅಭ್ಯರ್ಥಿಗಳು ಪದವಿ ಅಥವಾ ಸ್ನಾತ್ತಕೋತರ ಪದವಿಯನ್ನ ಪೂರ್ಣಗೊಳಿಸಿರಬೇಕು. ಜನರಲ್ ಅಭ್ಯರ್ಥಿಗಳು ಶೇಕಡಾ 60 ರಷ್ಟು ಅಂಕಗಳನ್ನು ಪಡೆದಿರಬೇಕು. ಎಸ್​​ಸಿ, ಎಸ್​​ಟಿ, ವಿಶೇಷ ಚೇತನರು ಶೇಕಡಾ 55 ರಷ್ಟು ಅಂಕಗಳನ್ನು ಹೊಂದಿರಲೇಬೇಕು. ಅಕೌಂಟ್​ ಹುದ್ದೆಗೆ ಐಸಿಐಎ, ಎಂಬಿಎ ಫೈನಾನ್ಸ್​/ ಪಿಜಿಡಿಎಂ ಪೈನಾನ್ಸ್/ಎಂಕಾಮ್

ಆಯ್ಕೆ ಪ್ರಕ್ರಿಯೆ: ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ಸಂದರ್ಶನ. ಅರ್ಜಿ ಶುಲ್ಕ:  ಎಲ್ಲ ಜನರಲ್ ಅಭ್ಯರ್ಥಿಗಳಿಗೆ- 850 ರೂಪಾಯಿ, ಎಸ್​​ಸಿ, ಎಸ್​​ಟಿ, ವಿಶೇಷ ಚೇತನರು- 100 ರೂಪಾಯಿ.

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ- 10 ಸೆಪ್ಟೆಂಬರ್ 2024, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- 29 ಸೆಪ್ಟೆಂಬರ್ 2024,
ಅಡ್ಮಿಟ್ ಕಾರ್ಡ್ (ಪ್ರವೇಶ ಪತ್ರ)- ಅಕ್ಟೋಬರ್ 1ನೇ ವಾರ, ಮೊದಲ ಹಂತದ ಆನ್​ಲೈನ್ ಪರೀಕ್ಷೆ- 13 ಅಕ್ಟೋಬರ್, 2ನೇ ಹಂತದ ಆನ್​ಲೈನ್ ಪರೀಕ್ಷೆ- 17 ನವೆಂಬರ್. ಆಸಕ್ತ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್‌ newindia.co.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

Ad
Ad
Nk Channel Final 21 09 2023