ಮಂಗಳೂರು: ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಆರ್ಟ್ಸ್ ಆಂಡ್ ಹ್ಯೂಮಾನಿಟಿಯ ಪತ್ರಿಕೋದ್ಯಮ ಹಾಗೂ ವಿಶ್ಯುವಲ್ ಕಮ್ಯೂನಿಕೇಶನ್ ವಿಭಾಗವು ರಾಷ್ಟ್ರೀಯ ಮಟ್ಟದ ಫಿಲ್ಮ್ ಮೇಕಿಂಗ್ ಫೆಸ್ಟ್ ಮತ್ತು ಸೆಮಿನಾರ್ ಶೂಟಿಂಗ್ ಸ್ಟಾರ್‌ಸ್ 2025 ಗುರುವಾರ ಜನವರಿ 30ರಂದು ಕಾಲೇಜಿನ ಎಲಸ.ಸಿ.ಆರ್.ಐ. ಸಭಾಂಗಣದಲ್ಲಿ ಆಯೋಜಿಸಲಾಯಿತು.
ಖ್ಯಾತ ಬರಹಗಾರ, ನಿರ್ದೇಶಕ, ನಟ ನಾಗತಿಹಳ್ಳಿ ಚಂದ್ರಶೇಖರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸಿನೆಮಾವೆಂಬುವುದು ಸಮೂಹ ಕಲೆ, ಎಲ್ಲಾ ರೀತಿಯ ವಿಭಿನ್ನ ಕಲಾವಿದರುಗಳು ಒಟ್ಟುಗೂಡಿಕೊಂಡು ಕಾರ್ಯ ಪ್ರವೃತ್ತರಾದಾಗ ಸಿನೆಮಾ ರಂಗದಲ್ಲಿ ಯಶಸ್ಸು ಗಳಿಸಲು ಸಾಧ್ಯ. ವಾಸ್ತವ ತಿಳಿದು ಕಥೆ ಕಟ್ಟಿದಾಗ, ಅದು ಚಿತ್ರವಾಗಲು ಆಧ್ಯ. ಅನುಭವವಗಳು, ಅವಲೋಕನಗಳನ್ನು ಆಳವಾಗಿ ತಿಳಿದುಕೊಂಡಾಗ ಅವುಗಳನ್ನು ಜನತೆಗೆ ತೋರ್ಪಡಿಸಲು ಸಾಧ್ಯ.
ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಕುಲಸಚಿವ ಡಾ. ರೊನಾಲ್ಡ್‌ನ ಝರತ್ ಮಾತನಾಡಿ, ಪತ್ರಿಕೊದ್ಯಮ ವಿಭಾಗವು ಮಾಧ್ಯಮಗಳಿಗೆ ಬೇಕಾದ ರೀತಿಯ ಪಠ್ಯ ಚಟುವಟಿಕೆಗಳನ್ನು ನೀಡುವಲ್ಲಿ ಯಶಸ್ವಿಯಾಗಿದೆ ಎಂದರು.
ಕುಲಪತಿ ವಂ. ಡಾ. ಪ್ರವೀಣ್ ಮಾರ್ಟೀಸ್ ಎಸ್. ಜೆ. ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಸಂಸ್ಥೆ ಯುವ ಮನಸ್ಸುಗಳಿಗೆ ತರಬೇತಿಯನ್ನು ನೀಡುತ್ತಿದೆ. ವಿಶ್ವವಿದ್ಯಾಲಯ ಮಾದರಿಯು ಇಂದಿನ ಸಮಾಜಕ್ಕೆ ಹಲವಾರು ಅವಕಾಶಗಲು ಮತ್ತು ಅವುಗಳನ್ನು ಸದುಪಯೋಗ ಪಡಿಸಲು ವೇದಿಕೆಯನ್ನು ನೀಡಲು ಸಹಕರಿಸುತ್ತದೆ ಎಂದರು.
ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ, ದಸ್ಕತ್‌ತುಳು ಸಿನೆಮಾದ ನಾಯಕ ನಟ ದೀಕ್ಷಿತ್‌ಕೆ ಅಂಡಿಂಜೆ ಮಾತನಾಡಿ, ಸಿನೆಮಾ ನಿರ್ಮಾಣ ಮಾಡಲು ಒಬ್ಬ ನಾಯಕನೆಷ್ಟು ಮುಖ್ಯವೋ ಅಂತೆಯೇ ನಿರ್ಮಾಪಕನ ಪ್ರೋತ್ಸಾಹದ ಮಾತುಗಳು ಮುಖ್ಯ. ಮೊದಲ ಬಾರಿಗೆ ತುಳು ಸಿನೆಮಾ ಪ್ಯಾನ್‌ಇಂಡಿಯಾ ಬಿಡುಗಡೆಗೆ ತಯಾರಾಗುತ್ತಿರುವು ತುಳುನಾಡಿಗೆ ಹೆಮ್ಮೆಯ ವಿಚಾರ ಎಂದರು.
ಅಡ್ಮಿನ್ ಬ್ಲಾಕ್ ನಿರ್ದೇಶಕ ಚಾರ್ಲ್ಸ್ ಫುಟಾರ್ಡೋ ಗೌರವ ಅತಿಥಿಯಾಗಿ ಭಾಗವಹಿಸಿ, ಸಂತ ಅಲೋಶಿಯಸ್‌ಸ್ವಾಯತ್ತ ಕಾಲೇಜಿನ ಕುಲಸಚಿವ ಡಾ. ಆಲ್ವಿನ್‌ಡೆʼಸಾ ಅಧ್ಯಕ್ಷತೆ ವಹಿಸಿದ್ದರು. ಸ್ಪರ್ಧೆಯಲ್ಲಿ ಆಳ್ವಾಸ್ ಕಾಲೇಜು ಮೂಡಬಿದಿರೆ ಪ್ರಥಮ ಸ್ಥಾನ, ಸಂತ ಆಗ್ನೆಸ್‌ಸ್ವಾಯತ್ತ ಕಾಲೇಜು ದ್ವಿತೀಯ ಸ್ಥಾನ ಗಳಿಸಿತು.