Bengaluru 21°C
Ad

ಆರೋಗ್ಯ ಇಲಾಖೆಯಿಂದ ಹಲವು ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ

ಆರೋಗ್ಯ ಇಲಾಖೆಯಿಂದ ಹಲವು ಹುದ್ದೆಗಳನ್ನು ನೇಮಕ ಮಾಡಲಾಗುತ್ತಿದೆ. ತೆಲಂಗಾಣ ವೈದ್ಯಕೀಯ ಮತ್ತು ಆರೋಗ್ಯ ಸೇವೆಗಳ ನೇಮಕಾತಿ ಮಂಡಳಿ (ಎಂಹೆಚ್​​ಎಸ್​ಆರ್​ಬಿ) ನೋಟಿಫಿಕೇಶನ್ ಬಿಡುಗಡೆ ಮಾಡಿತ್ತು. ಇದೀಗ ಅರ್ಜಿಗಳನ್ನು ಆಹ್ವಾನ ಮಾಡಿದೆ.

ಆರೋಗ್ಯ ಇಲಾಖೆಯಿಂದ ಹಲವು ಹುದ್ದೆಗಳನ್ನು ನೇಮಕ ಮಾಡಲಾಗುತ್ತಿದೆ. ತೆಲಂಗಾಣ ವೈದ್ಯಕೀಯ ಮತ್ತು ಆರೋಗ್ಯ ಸೇವೆಗಳ ನೇಮಕಾತಿ ಮಂಡಳಿ (ಎಂಹೆಚ್​​ಎಸ್​ಆರ್​ಬಿ) ನೋಟಿಫಿಕೇಶನ್ ಬಿಡುಗಡೆ ಮಾಡಿತ್ತು. ಇದೀಗ ಅರ್ಜಿಗಳನ್ನು ಆಹ್ವಾನ ಮಾಡಿದೆ.

ಈ ಹುದ್ದೆಗೆ ಸಂಬಂಧಿಸಿದ ವಯೋಮಿತಿ, ವಿದ್ಯಾರ್ಹತೆ, ಆಯ್ಕೆ ಪ್ರಕ್ರಿಯೆ, ಅರ್ಜಿ ಶುಲ್ಕ ಸೇರಿದಂತೆ ಇತರೆ ಎಲ್ಲ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಆನ್​ಲೈನ್ ಮೂಲಕ ಮಾತ್ರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಬೇಕು. ಆಫ್​​ಲೈನ್ ಇರುವುದಿಲ್ಲ ಎಂದು ಇಲಾಖೆ ತಿಳಿಸಿದೆ.

1,284 ಲ್ಯಾಬ್ ಟೆಕ್ನಿಷಿಯನ್ ಹುದ್ದೆಗಳು, 31,040 ರೂಪಾಯಿಯಿಂದ 96,890 ರೂಪಾಯಿಗಳು. ಶೈಕ್ಷಣಿಕೆ ಅರ್ಹತೆ ಬಿಎಸ್​ಸಿ, ಎಂಎಸ್​ಸಿ, ಡಿಪ್ಲೋಮಾ, ಪದವಿ, ಪಿಜಿ ಡಿಪ್ಲೋಮಾ, ವಯೋಮಿತಿ 18 ರಿಂದ 46 ವರ್ಷಗಳು, ವಯೋಮಿತಿ ಸಡಿಲಿಕೆ ಮಾಜಿ ಸೈನಿಕ, ಎನ್​ಸಿಸಿ- 3 ವರ್ಷಗಳು, ಎಸ್​​ಸಿ, ಎಸ್​ಟಿ, ಬಿಸಿ, ಇಡಬ್ಲುಎಸ್- 10 ವರ್ಷಗಳು.

ಅರ್ಜಿ ಶುಲ್ಕ ಎಲ್ಲ ಅಭ್ಯರ್ಥಿಗಳಿಗೆ ಆನ್​​ಲೈನ್ ಅರ್ಜಿ ಶುಲ್ಕ- 500 ರೂ., ಎಸ್​​ಸಿ, ಎಸ್​ಟಿ, ಬಿಸಿ, ಇಡಬ್ಲುಎಸ್, ಮಾಜಿ ಸೈನಿಕ ಬಿಟ್ಟು ಉಳಿದವರು ಪ್ರೊಸೆಸಿಂಗ್ ಶುಲ್ಕ 200 ರೂಪಾಯಿ ಪಾವತಿ ಮಾಡಬೇಕು. ಪರೀಕ್ಷೆ ವಿಧಾನ 100 ಅಂಕಗಳಿಗೆ ಪರೀಕ್ಷೆ ಇದ್ದು ಇದರಲ್ಲಿ 80 ಅಂಕಗಳು ಕಂಪ್ಯೂಟರ್​ಗೆ ಸಂಬಂಧಿಸಿರುತ್ತವೆ. ಉಳಿದ 20 ಅಂಕಗಳು ಈ ಹಿಂದೆ ಅಭ್ಯರ್ಥಿ ಕಾಟ್ರ್ಯಾಕ್ಟ್ ಆಧಾರದ ಮೇಲೆ ಮಾಡಿದ ಕೆಲಸಕ್ಕೆ ನೀಡಲಾಗುತ್ತದೆ. ಅಕ್ಟೋಬರ್ 05, 2024 ಅರ್ಜಿ ಹಾಕಲು ಕೊನೆ ದಿನವಾಗಿದೆ.

 

Ad
Ad
Nk Channel Final 21 09 2023