Ad

ಪಿಜಿ ಸಿಇಟಿ ಪರೀಕ್ಷಾ ಕೇಂದ್ರ ಆಯ್ಕೆ; ಶುಲ್ಕ ಪಾವತಿಗೆ ನಾಳೆ ಕೊನೆ ದಿನ

Kea (1)

ಬೆಂಗಳೂರು: ಪ್ರಸಕ್ತ 2024 -25 ನೇ ಸಾಲಿನ ಪಿಜಿ ಸಿಇಟಿ ಪರೀಕ್ಷಾ ಕೇಂದ್ರ ಆಯ್ಕೆಗೆ ನಾಳೆ ಕೊನೆ ದಿನವಾಗಿದೆ. ಎಂಬಿಎ, ಎಂಸಿಎ, ಎಂ ಆರ್ಕಿಟೆಕ್ಚರ್ ಕೋರ್ಸ್ ಗಳ ಪ್ರವೇಶಕ್ಕಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಶುಲ್ಕ ಪಾವತಿ, ಪರೀಕ್ಷಾ ಕೇಂದ್ರ ನಮೂದು ಹಾಗೂ ಅಗತ್ಯವಿದ್ದಲ್ಲಿ ಅರ್ಜಿಯಲ್ಲಿನ ಯಾವುದೇ ಮಾಹಿತಿ ತಿದ್ದುಪಡಿಗೆ ಜೂನ್ 24ರ ಸಂಜೆ 6 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ.

Ad
300x250 2

ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಾಧಿಕಾರದ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿದೆ. ಶುಲ್ಕ ಪಾವತಿಸದವರು ಸೇರಿದಂತೆ ಅರ್ಜಿ ತಿದ್ದುಪಡಿ ಬಯಸುವವರ ಅನುಕೂಲಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪೋರ್ಟಲ್ ತೆರೆದಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಲಾಗಿದೆ.

Ad
Ad
Nk Channel Final 21 09 2023
Ad