Ad

ಕರ್ನಾಟಕ 10ನೇ ತರಗತಿ ಪೂರಕ ಫಲಿತಾಂಶ ಶೀಘ್ರದಲ್ಲೇ ಬಿಡುಗಡೆ

Sslc

ಬೆಂಗಳೂರು:  ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಶೀಘ್ರದಲ್ಲೇ ಎಸ್​​ಎಸ್​ಎಲ್​​ಸಿ  ಪೂರಕ ಫಲಿತಾಂಶ  ಬಿಡುಗಡೆ ಮಾಡಲಿದೆ. ಕೆಎಸ್​ಇಎಬಿ ಇಂದೇ (ಜು.05) ಫಲಿತಾಂಶವನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳಿಂದ ಮಾಹಿತಿ ದೊರೆತಿದೆ.

Ad
300x250 2

ವಿದ್ಯಾರ್ಥಿಗಳು ಫಲಿತಾಂಶವನ್ನು ಪರಿಶೀಲಿಸಲು ಮತ್ತು ಫಲಿತಾಂಶ ಪಟ್ಟಿ ಡೌನ್​ಲೋಡ್​ ಮಾಡಲು ತಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ಬಳಸಿಕೊಂಡು ಕೆಎಸ್​ಇಎಬಿ ಅಧಿಕೃತ ವೆಬ್​​ಸೈಟ್​ kseab.karnataka.gov.in ಅಥವಾ  karresults.nic.inಗೆ ಭೇಟಿ ನೀಡಿ.

ಎಸ್​ಎಸ್​ಎಲ್​ಸಿ ಪೂರಕ ಪರೀಕ್ಷೆಗಳು ಜೂನ್​ 14 ರಿಂದ 21ರವರಗೆ ನಡೆದವು. ಕೆಎಸ್​​ಇಎಬಿ ಮೇ 9 ರಂದು ಕರ್ನಾಟಕ ಎಸ್​ಎಸ್​ಎಲ್​ಸಿ ವಾರ್ಷಿಕ ಫಲಿತಾಂಶವನ್ನು ಪ್ರಕಟಿಸಿತ್ತು. ವಾರ್ಷಿಕ ಪರೀಕ್ಷೆಯಲ್ಲಿ ಉತ್ತೀರ್ಣವಾಗದ ಅಥವಾ ಇನ್ನೂ ಹೆಚ್ಚಿನ ಅಂಕಗಳನ್ನು ಬಯಸಿದ ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗಿದ್ದರು.

Ad
Ad
Nk Channel Final 21 09 2023
Ad