Bengaluru 26°C
Ad

ಜೆಇಇ ಅಡ್ವಾನ್ಸ್ಡ್‌ ಫಲಿತಾಂಶ ಪ್ರಕಟ: ರಿಸಲ್ಟ್‌ ನೋಡಲು ಹೀಗೆ ಮಾಡಿ

ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಅಡ್ವಾನ್ಸ್ಡ್ ಫಲಿತಾಂಶಗಳನ್ನು ಇಂದು ಪ್ರಕಟಿಸಲಾಗಿದೆ. ಐಐಟಿ ದೆಹಲಿ ವಲಯದ ವೇದ್‌ ಲಹೋಟಿ 360 ಅಂಕಗಳಲ್ಲಿ 355 ಅಂಕ ಗಳಿಸುವ ಮೂಲಕ ಟಾಪರ್‌ ಆಗಿ ಹೊರ ಹೊಮ್ಮಿದ್ದಾರೆ.

ನವದೆಹಲಿ: ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಅಡ್ವಾನ್ಸ್ಡ್ ಫಲಿತಾಂಶಗಳನ್ನು ಇಂದು ಪ್ರಕಟಿಸಲಾಗಿದೆ. ಐಐಟಿ ದೆಹಲಿ ವಲಯದ ವೇದ್‌ ಲಹೋಟಿ 360 ಅಂಕಗಳಲ್ಲಿ 355 ಅಂಕ ಗಳಿಸುವ ಮೂಲಕ ಟಾಪರ್‌ ಆಗಿ ಹೊರ ಹೊಮ್ಮಿದ್ದಾರೆ.

ಐಐಟಿ ಪ್ರವೇಶಕ್ಕಾಗಿ ಒಟ್ಟು 48,248 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದು, ಅವರಲ್ಲಿ 7,964 ಮಹಿಳೆಯರು. ಮೇ 26ರಂದು ಪರೀಕ್ಷೆ ನಡೆಸಲಾಗಿತ್ತು. ಎರಡು ಪತ್ರಿಕೆಗಳಲ್ಲಿ ನಡೆದ ಪರೀಕ್ಷೆಯಲ್ಲಿ 1,80,200 ಮಂದಿ ಭಾಗವಹಿಸಿದ್ದರು.

ಐಐಟಿ ಬಾಂಬೆ ವಲಯದ ದ್ವಿಜಾ ಧರ್ಮೇಶ್‌ ಕುಮಾರ್‌ ಪಟೇಲ್‌ 360 ಅಂಕಗಳಲ್ಲಿ 322 ಅಂಕ ಪಡೆದು ಮಹಿಳಾ ಅಭ್ಯರ್ಥಿಗಳ ಪೈಕಿ ಅಗ್ರಸ್ಥಾನ ಪಡೆದಿದ್ದಾರೆ. ಅವರಿಗೆ ಅಖಿಲ ಭಾರತದಲ್ಲಿ 7ನೇ ರ‍್ಯಾಂಕ್‌ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

1,43,637 ಪುರುಷ ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದು, ಈ ಪೈಕಿ 1,39,180 ಮಂದಿ ಎರಡೂ ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ 40,284 ಮಂದಿ ಐಐಟಿ ಪ್ರವೇಶಕ್ಕಾಗಿ ಅರ್ಹತೆ ಪಡೆದಿದ್ದಾರೆ.

ಇನ್ನು ಹೆಸರು ನೋಂದಾಯಿಸಿದ 42,947 ಮಹಿಳಾ ಅಭ್ಯರ್ಥಿಗಳ ಪೈಕಿ 41,020 ಮಂದಿ ಎರಡು ಪತ್ರಿಕೆಗಳನ್ನು ಎದುರಿಸಿದ್ದಾರೆ. ಅವರ ಪೈಕಿ 7,964 ಮಂದಿ ಐಐಟಿ ಪ್ರವೇಶಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ. ಒಟ್ಟಾರೆಯಾಗಿ ಪರೀಕ್ಷೆ ಬರೆದ 1,86,584 ಅಭ್ಯರ್ಥಿಗಳ ಪೈಕಿ 48,248 ಮಂದಿ ಐಐಟಿ ಪ್ರವೇಶಿಸಲು ಅರ್ಹರಾಗಿದ್ದಾರೆ.

ಫಲಿತಾಂಶವನ್ನು ಪರಿಶೀಲಿಸುವ ವಿಧಾನ
ಜೆಇಇ ಅಡ್ವಾನ್ಸ್ಡ್‌ ಫಲಿತಾಂಶ 2024 ಅನ್ನು ಪರಿಶೀಲಿಸಲು, ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕದ ಅಗತ್ಯ.

ʼJEE Advanced 2024 Resultʼ ಆಯ್ಕೆಯನ್ನು ಕ್ಲಿಕ್‌ ಮಾಡಿ.
ನಿಮ್ಮ ನೋಂದಣಿ ವಿವರಗಳನ್ನು ನಮೂದಿಸಿ.
Submit ಬಟನ್‌ ಕ್ಲಿಕ್‌ ಮಾಡಿ.
ಜೆಇಇ-ಅಡ್ವಾನ್ಸ್ಡ್‌ ಫಲಿತಾಂಶ ತೆರೆ ಮೇಲೆ ಮೂಡುತ್ತದೆ.
ಇದನ್ನು ಡೌನ್‌ಲೋಡ್‌ ಮಾಡಿ, ಪ್ರಿಂಟ್‌ ಔಟ್‌ ತೆಗೆದಿಡಿ.
ಡೈರೆಕ್ಟ್‌ ಲಿಂಕ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ.
ಜೆಇಇ-ಮೇನ್‌‍, ಇದು ದೇಶಾದ್ಯಂತ ಎಂಜಿನಿಯರಿಂಗ್‌ ಕಾಲೇಜುಗಳಿಗೆ ಪ್ರವೇಶ ಪರೀಕ್ಷೆಯಾಗಿದ್ದು, ಜೆಇಇ-ಅಡ್ವಾನ್ಸ್ಡ್‌ ಅರ್ಹತಾ ಪರೀಕ್ಷೆಯಾಗಿದೆ.

Ad
Ad
Nk Channel Final 21 09 2023
Ad