Bengaluru 27°C

ಇಂಡಿಯನ್ ಬ್ಯಾಂಕ್ ಖಾಲಿ ಹುದ್ದೆಗಳಿಗೆ ಆಫ್​ಲೈನ್ ಮೂಲಕ ಅರ್ಜಿ ಆಹ್ವಾನ

ಇಂಡಿಯನ್ ಬ್ಯಾಂಕ್ ಖಾಲಿ ಹುದ್ದೆಗಳಿಗೆ ಆಫ್​ಲೈನ್ ಮೂಲಕ ಅರ್ಜಿ ಆಹ್ವಾನ ಮಾಡಿದೆ. ಈಗಾಗಲೇ ಉದ್ಯೋಗದಲ್ಲಿ ಅನುಭವ ಇರುವ ಅಭ್ಯರ್ಥಿಗಳಿಗೆ ಇಲ್ಲಿ ಅವಕಾಶ ಇರುತ್ತದೆ.

ಇಂಡಿಯನ್ ಬ್ಯಾಂಕ್ ಖಾಲಿ ಹುದ್ದೆಗಳಿಗೆ ಆಫ್​ಲೈನ್ ಮೂಲಕ ಅರ್ಜಿ ಆಹ್ವಾನ ಮಾಡಿದೆ. ಈಗಾಗಲೇ ಉದ್ಯೋಗದಲ್ಲಿ ಅನುಭವ ಇರುವ ಅಭ್ಯರ್ಥಿಗಳಿಗೆ ಇಲ್ಲಿ ಅವಕಾಶ ಇರುತ್ತದೆ. ಇಂಡಿಯನ್ ಬ್ಯಾಂಕ್ ಉದ್ಯೋಗಗಳಿಗೆ ಅಭ್ಯರ್ಥಿಗಳು ಆಫ್​ಲೈನ್​ನಲ್ಲಿ ಅರ್ಜಿ ಸಲ್ಲಿಸಬೇಕು. ಯಾವುದೇ ಶುಲ್ಕ ಪಾವತಿ ಇರಲ್ಲ.


ಬ್ಯಾಂಕ್ ಈಗಾಗಲೇ ಅಧಿಕೃತವಾಗಿ ಅಧಿಸೂಚನೆ ರಿಲೀಸ್ ಮಾಡಿದ್ದು ಅರ್ಜಿ ಆರಂಭವಾಗಿವೆ. ನಾಳೆ ಕೊನೆ ದಿನವಾಗಿದೆ. ಹೀಗಾಗಿ ಮಾಹಿತಿ ತಿಳಿದ ಕೂಡಲೇ ಅಪ್ಲೇ ಮಾಡಬಹುದು. ವೈದ್ಯರು ಹುದ್ದೆಗಳಿಗೆ ಆಕಾಂಕ್ಷಿಗಳನ್ನು ಕಾಂಟ್ರಾಕ್ಟ್ ರೀತಿಯಲ್ಲಿ ಆಯ್ಕೆ ಮಾಡಲಾಗುತ್ತದೆ. ಅರ್ಜಿ ಸಲ್ಲಿಕೆ ಮಾಡಿದ ಉದ್ಯೋಗ ಆಕಾಂಕ್ಷಿಗಳ ಹೆಸರನ್ನು ಶಾರ್ಟ್​ ಲಿಸ್ಟ್ ಮಾಡಲಾಗುತ್ತದೆ. ನಂತರ ಸಂದರ್ಶನದ ದಿನಾಂಕ, ಸಮಯ ಮತ್ತು ಸ್ಥಳ ಕುರಿತು ಮಾಹಿತಿ ನೀಡಲಾಗುತ್ತದೆ.


ಅರ್ಜಿ ಸಲ್ಲಿಕೆ ಮಾಡಲು ಬಯಸುವವರು ಕೆಲಸದಲ್ಲಿ 10 ವರ್ಷಗಳ ಅನುಭವ ಪಡೆದಿರಬೇಕು. ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದಿಂದ ಮಾನ್ಯತೆ ಪಡೆದ ಅಲೋಪತಿ ವೈದ್ಯಕೀಯ ಪದ್ಧತಿಯಲ್ಲಿ ವಿಶ್ವವಿದ್ಯಾಲಯದಿಂದ ಎಂಬಿಬಿಎಸ್ ಪದವಿ ಪಡೆದಿರಬೇಕು. ಇನ್ನು ಈ ಉದ್ಯೋಗಕ್ಕೆ ಆಯ್ಕೆ ಆಗುವ ಅಭ್ಯರ್ಥಿಗಳನ್ನು ಕನಿಷ್ಠ 3 ವರ್ಷಗಳವರೆಗೆ ನೇಮಕ ಮಾಡಿಕೊಳ್ಳಲಾಗುತ್ತದೆ.


ಉದ್ಯೋಗಕ್ಕೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಇಂಡಿಯನ್ ಬ್ಯಾಂಕ್ ಒಳ್ಳೆಯ ಸ್ಯಾಲರಿ ನೀಡುತ್ತದೆ. ಅಭ್ಯರ್ಥಿಗಳು ತಮ್ಮ ಅರ್ಜಿ ನಮೂನೆಯನ್ನು ಅಗತ್ಯ ದಾಖಲೆಗಳೊಂದಿಗೆ ಈ ವಿಳಾಸಕ್ಕೆ ಕಳುಹಿಸಿಕೊಡಬೇಕು. ನಿಗದಿತ ದಿನಾಂಕದ ನಂತರ ಬರುವ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ. ಇದರಲ್ಲಿ ಆಯ್ಕೆ ಆಗುವ ಅಭ್ಯರ್ಥಿಗಳನ್ನು ವಿಶಾಖಪಟ್ಟಣಂನ ದ್ವಾರಕಾನಗರದ ಸಾಯಿ ಟ್ರೇಡ್ ಸೆಂಟರ್, 3ನೇ ಮಹಡಿ, 2ನೇ ಲೇನ್​ನಲ್ಲಿರುವ ಇಂಡಿಯನ್ ಬ್ಯಾಂಕ್​ಗೆ ನೇಮಕ ಮಾಡಲಾಗುತ್ತದೆ.


ಅರ್ಜಿ ಸಲ್ಲಿಕೆಗೆ ವಿಳಾಸ


The Chief Manager,
VISAKHAPATNAM ZONE at Indian Bank,
ZONAL OFFICE VISAKHAPATNAM,
Sai Trade Centre, 3rd Floor,
2nd Lane Dwarakanagar, Visakhapatnam- 530016


ಅಪ್ಲೇ ಮಾಡಲು ಕೊನೆ ದಿನಾಂಕ- 23 ಡಿಸೆಂಬರ್ 2024


ಅರ್ಜಿ ಪ್ರತಿ ಈ ಲಿಂಕ್​ನಲ್ಲಿದೆ-
https://www.indianbank.in/wp-content/uploads/2024/12/20241202-authorised-doctor-advertisement.pdf


Nk Channel Final 21 09 2023