ಚಾಮರಾಜನಗರ: ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಕರ್ನಾಟಕ ಗ್ರಾಮ ಸ್ವರಾಜ್ ಹಾಗೂ ಪಂಚಾಯತ್ ರಾಜ್ (ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಮೇಲ್ವಿಚಾರಕ ಸೇವಾ) ನಿಯಮಗಳು 2022ರ ಅನ್ವಯ ಹುದ್ದೆಗಳಿವೆ.
ಚಾಮರಾಜನಗರ ಜಿಲ್ಲಾ ಪಂಚಾಯತಿಯ 5 ತಾಲೂಕು ಪಂಚಾಯತಿ ವ್ಯಾಪ್ತಿಯ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ. ವಯೋಮಿತಿ; 18 ರಿಂದ 40 ವರ್ಷಗಳು (ಜಾತಿಗೆ ತಕ್ಕಂತೆ ಗರಿಷ್ಠ ವಯೋಮಿತಿ ಇರುತ್ತೆ).
ವೇತನ ಸರ್ಕಾರ ಕಾಲ ಕಾಲಕ್ಕೆ ನಿಗದಿ ಪಡಿಸಿದ ಗೌರವ ಸಂಭಾವನೆಗೆ ಅರ್ಹರಾಗಿರತಕ್ಕದ್ದು. ಹುದ್ದೆಗಳ ಹೆಸರು: ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಮೇಲ್ವಿಚಾರಕ, ಖಾಲಿ ಇರುವ ಒಟ್ಟು ಹುದ್ದೆಗಳು; 15, ವಿದ್ಯಾರ್ಹತೆ; ದ್ವಿತೀಯ ಪಿಯುಸಿ ಪಾಸ್ ಆಗಿರಬೇಕು, ಲೈಬ್ರರಿ ಸೈನ್ಸ್ ಕೋರ್ಸ್ ಮಾಡಿರಬೇಕು,
3 ತಿಂಗಳ ಕಂಪ್ಯೂಟರ್ ಕೋರ್ಸ್ ಮಾಡಿರಬೇಕು.
ಅರ್ಜಿ ಶುಲ್ಕ; ಸಾಮಾನ್ಯ ಅರ್ಹತೆ ಅಭ್ಯರ್ಥಿಗಳಿಗೆ- 200 ರೂ.ಗಳು, ಒಬಿಸಿ ಅಭ್ಯರ್ಥಿಗಳಿಗೆ- 100 ರೂ.ಗಳು, ಎಸ್ಸಿ, ಎಸ್ಟಿ, ವಿಶೇಷ ಚೇತನರು, ಮಾಜಿ ಸೈನಿಕ- 50 ರೂ.ಗಳು, ಶುಲ್ಕ ಪಾವತಿ- ಕೆನರಾ ಬ್ಯಾಂಕ್ ಬ್ರ್ಯಾಂಚ್ ನಂಬರ್- 170621700000797, IFSC CODE NO-CNRB0000797, ಪಾವತಿ ಮಾಡಿರುವ ಚಲನ್ ಅನ್ನು ಅರ್ಜಿ ಸಲ್ಲಿಸುವಾಗ ಅಪ್ಲೋಡ್ ಮಾಡಿ, ಅಭ್ಯರ್ಥಿಗಳು ಈ ವೆಬ್ಸೈಟ್ಗೆ ಭೇಟಿ ನೀಡಿ- http://chamrajnagar.nic.in.
ಆಯ್ಕೆ ಪ್ರಕ್ರಿಯೆ; ಯಾವುದೇ ಪರೀಕ್ಷೆ ಇರುವುದಿಲ್ಲ. ಬದಲಾಗಿ ದ್ವಿತೀಯ ಪಿಯುಸಿನಲ್ಲಿ ಗಳಿಸಿದ ಅಂಕಗಳನ್ನು ಆಧರಿಸಿ ಮೆರಿಟ್ ಲಿಸ್ಟ್ ಮೂಲಕ ಆಯ್ಕೆ ಮಾಡಲಾಗುತ್ತದೆ. ಸಂದರ್ಶನ್ ಇರುತ್ತದೆ. ಬಳಿಕ ದಾಖಲಾತಿ ಪರಿಶೀಲನೆ ಮಾಡಲಾಗುತ್ತದೆ. ಅಪ್ಲೇ ಮಾಡಲು ಅಕ್ಟೋಬರ್ 12, 2024 ಕೊನೆ ದಿನಾಂಕವಾಗಿದೆ.