ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್ಸಿ)ವು ಕೃಷಿ ಇಲಾಖೆಯ ಹುದ್ದೆಗಳನ್ನು ಭರ್ತಿ ಮಾಡುತ್ತಿದ್ದು, ಈ ಸಂಬಂಧ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನ ಮಾಡಿದೆ. 20/09/2024ರಂದು ಕೃಷಿ ಇಲಾಖೆ ಈ ಹುದ್ದೆಗಳಿಗೆ ಸಂಬಂಧಿಸಿದಂತೆ ನೋಟಿಫಿಕೇಶನ್ ಹೊರಡಿಸಿದೆ. ಹೊಸ ವಿಧಾನದಂತೆ ಇಲಾಖೆಯು 945 ಗ್ರೂಪ್ ಬಿ ಹುದ್ದೆಗಳು ಎಒ (ಅಗ್ರಿಕಲ್ಚರಲ್ ಆಫೀಸರ್) ಎಎಒ (ಅಸಿಸ್ಟೆಂಟ್ ಅಗ್ರಿಕಲ್ಚರಲ್ ಆಫೀಸರ್) ಹುದ್ದೆಗಳನ್ನ ತುಂಬುತ್ತಿದೆ.
ಗ್ರೂಪ್ ಬಿ ಹುದ್ದೆಗಳು (ಉಳಿಕೆ ಮೂಲವೃಂದ), ಅಗ್ರಿಕಲ್ಚರಲ್ ಆಫೀಸರ್- 86, ಅಸಿಸ್ಟೆಂಟ್ ಅಗ್ರಿಕಲ್ಚರಲ್ ಆಫೀಸರ್- 586. ಹೈದರಾಬಾದ್ ಕರ್ನಾಟಕ ವೃಂದ ಅಗ್ರಿಕಲ್ಚರಲ್ ಆಫೀಸರ್ 42, ಅಸಿಸ್ಟೆಂಟ್ ಅಗ್ರಿಕಲ್ಚರಲ್ ಆಫೀಸರ್- 231. ವೇತನ ಶ್ರೇಣಿ 43,100 ರಿಂದ 83,900 ರೂಪಾಯಿಗಳು. ವಿದ್ಯಾರ್ಹತೆ ಬಿಎಸ್ಸಿ, ಬಿಎಸ್ಸಿ ಆನರ್ಸ್, ಬಿಟೆಕ್ . ವಯೋಮಿತಿ 18 ರಿಂದ 43 ವರ್ಷಗಳು,
ಸಾಮಾನ್ಯ ಅರ್ಹತೆ ಅಭ್ಯರ್ಥಿಗಳು 38 ವರ್ಷಗಳು, ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು 41 ವರ್ಷಗಳು, ಎಸ್ಸಿ, ಎಸ್ಟಿ, ಪ್ರವರ್ಗ 1, ವಿಶೇಷ ಚೇತನರು 43 ವರ್ಷಗಳು. ಅರ್ಜಿ ಶುಲ್ಕ ಇರುತ್ತದೆ. ಸಾಮಾನ್ಯ ಅರ್ಹತೆ ಅಭ್ಯರ್ಥಿಗಳಿಗೆ- 600 ರೂ.ಗಳು ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು- 300 ರೂ.ಗಳು, ಮಾಜಿ ಸೈನಿಕರಿಗೆ- 50 ರೂಪಾಯಿಗಳು, ಎಸ್ಸಿ, ಎಸ್ಟಿ, ಪ್ರವರ್ಗ-1, ವಿಶೇಷ ಚೇತನರು- ಶುಲ್ಕ ವಿನಾಯತಿ ಇದೆ.
ಆಯ್ಕೆ ಪ್ರಕ್ರಿಯೆ : 300 ಅಂಕಗಳಿಗೆ ಪೇಪರ್-1 ಸಾಮಾನ್ಯ ಪರೀಕ್ಷೆ- ಒಂದೂವರೆ ಗಂಟೆ, 300 ಅಂಕಗಳಿಗೆ ಪೇಪರ್-2 ನಿರ್ದಿಷ್ಟ ಪರೀಕ್ಷೆ- 2 ಗಂಟೆ, 4 ಉತ್ತರ ತಪ್ಪು ಆದ್ರೆ 1 ಅಂಕ ಕಡಿತ ಇರುತ್ತದೆ. ಸಂದರ್ಶನ ಇರುವುದಿಲ್ಲ. ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಕನ್ನಡ ಭಾಷಾ ಪರೀಕ್ಷೆ ಇರುತ್ತದೆ- 450 ಅಂಕಗಳು, ಅರ್ಜಿ ಸಲ್ಲಿಕೆ ಮಾಡಲು ಆರಂಭದ ದಿನಾಂಕ- 7-10-2024. ಅರ್ಜಿ ಸಲ್ಲಿಕೆ ಮಾಡಲು 7-11-2024 ಕೊನೆ ದಿನಾಂಕವಾಗಿದೆ.