Bengaluru 24°C
Ad

ಇಸ್ರೋದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ!

ಈ ವರ್ಷ ಖಾಲಿ ಇರುವ ಹುದ್ದೆಗಳ ಭರ್ತಿಗೆ ಇಸ್ರೋ ಅಧಿಸೂಚನೆ ಹೊರಡಿಸಿದೆ. ಇಸ್ರೋದಲ್ಲಿ ಕೆಲಸ ಮಾಡಲು ಆಸಕ್ತಿ ಇರೋರು ಕೂಡಲೇ ಅರ್ಜಿ ಸಲ್ಲಿಸಬಹುದು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ 103 ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

ಬೆಂಗಳೂರು: ಈ ವರ್ಷ ಖಾಲಿ ಇರುವ ಹುದ್ದೆಗಳ ಭರ್ತಿಗೆ ಇಸ್ರೋ ಅಧಿಸೂಚನೆ ಹೊರಡಿಸಿದೆ. ಇಸ್ರೋದಲ್ಲಿ ಕೆಲಸ ಮಾಡಲು ಆಸಕ್ತಿ ಇರೋರು ಕೂಡಲೇ ಅರ್ಜಿ ಸಲ್ಲಿಸಬಹುದು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ 103 ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

ನೇಮಕಾತಿ ಪ್ರಕ್ರಿಯೆ ಇಸ್ರೋದ ಹೂಮನ್ ಸ್ಪೇಸ್ ಸ್ಟೈಟ್ ಸೆಂಟರ್ ವ್ಯಾಪ್ತಿಗೆ ಬರಲಿದೆ. ಇದು ಬೆಂಗಳೂರಿನಲ್ಲೇ ಕಾರ್ಯನಿರ್ವಹಿಸಲಿದೆ. ತಾತ್ಕಾಲಿಕ ಹುದ್ದೆಗಳಾದ್ರೂ ಅವಧಿ ಮುಂದುವರೆಯಲಿದೆ. ವೈದ್ಯಕೀಯ ಅಧಿಕಾರಿ- SC, ವೈದ್ಯಕೀಯ ಅಧಿಕಾರಿ-SD, ಸೈಂಟಿಸ್ಟ್ ಇಂಜಿನಿಯರ್-SC, ತಾಂತ್ರಿಕ ಸಹಾಯಕ, ವೈಜ್ಞಾನಿಕ ಸಹಾಯಕ, ತಂತ್ರಜ್ಞ-B, ಡ್ರಾಫ್ಟ್ ಮನ್-B, ಸಹಾಯಕ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ವೇತನ ತಿಂಗಳಿಗೆ ₹21,700 ರಿಂದ ₹2,08,700 ರಷ್ಟಿದೆ.

ಇನ್ನು, ವೈದ್ಯಕೀಯ ಅಧಿಕಾರಿ-ಎಸ್‌ಡಿ ಮತ್ತು -ಎಸ್‌ಸಿ, ತಾಂತ್ರಿಕ ಸಹಾಯಕ, ವೈಜ್ಞಾನಿಕ ಸಹಾಯಕ, ತಂತ್ರಜ್ಞ-ಬಿ, ಡ್ರಾಫ್ಟ್ ಮನ್-ಬಿ ವಯೋಮಿತಿ 35 ವರ್ಷ ಇರಲಿದೆ. ಸೈಂಟಿಸ್ಟ್ ಇಂಜಿನಿಯರ್-ಎಸ್ಸಿ ಹುದ್ದೆಗೆ 18 ರಿಂದ 30 ವರ್ಷಗಳು, ಸಹಾಯಕ ಹುದ್ದೆಗೆ 18 ರಿಂದ 28 ವರ್ಷಗಳು ಇರಲಿದೆ.

ವೈದ್ಯಕೀಯ ಅಧಿಕಾರಿಗೆ ಎಂಬಿಬಿಎಸ್, ಎಂಡಿ, ಸೈಂಟಿಸ್ಟ್ ಇಂಜಿನಿಯರ್​ಗೆ ಎಂಇ/ಎಂಟೆಕ್, ಬಿಇ/ಬಿಟೆಕ್, ತಾಂತ್ರಿಕ ಸಹಾಯಕ ಹುದ್ದೆಗೆ ಇಂಜಿನಿಯರಿಂಗ್ ಡಿಪ್ಲೋಮಾ, ತಂತ್ರಜ್ಞ ಮತ್ತು ಡ್ರಾಫ್ಟ್ ಮನ್ ಆಗಲು ಐಟಿಐ, ವೈಜ್ಞಾನಿಕ ಸಹಾಯಕ ಪೋಸ್ಟ್​ಗೆ ಬಿಎಸ್‌ಸಿ ಆಗಿರಬೇಕು.

ಅಭ್ಯರ್ಥಿಗಳು ಲಿಖಿತ ಪರೀಕ್ಷೆಯಲ್ಲಿ ಭಾಗವಹಿಸಬೇಕು. ಪರೀಕ್ಷೆಯಲ್ಲಿ ಉತ್ತಮ ಶ್ರೇಣಿ ಪಡೆಯುವ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುವುದು. ಸಂದರ್ಶನದ ನಂತರ ಆಯ್ಕೆಯಾದ ಅಭ್ಯರ್ಥಿಗಳನ್ನು ವೈದ್ಯಕೀಯ ಪರೀಕ್ಷೆ ಮತ್ತು ದಾಖಲೆ ಪರಿಶೀಲನೆಗೆ ಕರೆದೊಯ್ಯಲಾಗುವುದು. ಅಧಿಕೃತ ವೆಬ್‌ಸೈಟ್‌ https://www.isro.gov.in ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ಅಕ್ಟೋಬರ್​​ 17 ಕೊನೆಯ ದಿನಾಂಕವಾಗಿದೆ.

Ad
Ad
Nk Channel Final 21 09 2023