Bengaluru 28°C
Ad

ಆದಾಯ ತೆರಿಗೆ ಇಲಾಖೆಯಲ್ಲಿನ ಹುದ್ದೆಗೆ ಅರ್ಜಿ ಆಹ್ವಾನ

ಆದಾಯ ತೆರಿಗೆ ಇಲಾಖೆಯಲ್ಲಿ ಖಾಲಿ ಇರುವಂತ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಇನ್​​ಕಮ್ ಟ್ಯಾಕ್ಸ್​ ಇಲಾಖೆಯಲ್ಲಿ ಖಾಲಿ ಇರುವಂತ ಕ್ಯಾಂಟೀನ್ ಅಟೆಂಡೆಂಟ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಆದಾಯ ತೆರಿಗೆ ಇಲಾಖೆಯಲ್ಲಿ ಖಾಲಿ ಇರುವಂತ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಇನ್​​ಕಮ್ ಟ್ಯಾಕ್ಸ್​ ಇಲಾಖೆಯಲ್ಲಿ ಖಾಲಿ ಇರುವಂತ ಕ್ಯಾಂಟೀನ್ ಅಟೆಂಡೆಂಟ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಇಲಾಖೆಯ ಗ್ರೂಪ್ ಸಿ ಹುದ್ದೆಗಳು ಆಗಿದ್ದು ಈಗಾಗಲೇ ನೋಟಿಫಿಕೇಶನ್ ಅನ್ನು ರಿಲೀಸ್ ಮಾಡಲಾಗಿದೆ. ಅರ್ಜಿಗಳನ್ನು ಕೂಡ ಹಾಕಲಾಗುತ್ತಿದೆ. ಆಸಕ್ತರು ತಕ್ಷಣದಿಂದ ಆನ್​​ಲೈನ್​ ಮೂಲಕ ಅಪ್ಲೇ ಮಾಡಬಹುದು.

ತಿಂಗಳ ಸ್ಯಾಲರಿ- ₹18,000 ರಿಂದ ₹56,900, ಅರ್ಜಿ ಶುಲ್ಕ ಇರುವುದಿಲ್ಲ. ವಿದ್ಯಾರ್ಹತೆ- ಮೆಟ್ರಿಕ್ಯುಲೇಷನ್ (10ನೇ ತರಗತಿ) ಪೂರ್ಣಗೊಳಿಸಿರಬೇಕು, ವಯಸ್ಸಿನ ಮಿತಿ 18 ರಿಂದ 25 ವರ್ಷದ ಒಳಗಿನ ಅಭ್ಯರ್ಥಿಗಳಿಗೆ ಆದ್ಯತೆ. ವಯೋಮಿತಿ ಸಡಿಲಿಕೆ ಎಸ್​​ಸಿ, ಎಸ್​ಟಿ 5 ವರ್ಷ, ಒಬಿಸಿ 3 ವರ್ಷ, ವಿಶೇಷ ಚೇತರಿಗೆ 10 ವರ್ಷ.

ಉದ್ಯೋಗ ಮಾಡುವ ಸ್ಥಳ ತಮಿಳು ನಾಡು ಮತ್ತು ಪುದುಚೇರಿ. ಒಟ್ಟು ಹುದ್ದೆಗಳು- 25, ಅರ್ಜಿಯನ್ನು ಸಲ್ಲಿಕೆ ಮಾಡಲು ಕೊನೆ ದಿನಾಂಕ- ಸೆಪ್ಟೆಂಬರ್ 22, 2024 ಲಿಖಿತ ಪರೀಕ್ಷೆ ಬರೆಯಲು ಶಾರ್ಟ್​ ಲಿಸ್ಟ್​- ಅಕ್ಟೋಬರ್ 01, 2024. ಅಭ್ಯರ್ಥಿಗಳ ಹಾಲ್​ಟಿಕೆಟ್​ ಡೌನ್​​ಲೋಡ್ ಅಕ್ಟೋಬರ್ 01 ರಿಂದ 05.  ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದವರಿಗೆ ಹುದ್ದೆಗೆ ಅವಕಾಶ.

Ad
Ad
Nk Channel Final 21 09 2023