ರೈಲ್ವೆ ಇಲಾಖೆಯು ಖಾಲಿ ಹುದ್ದೆಗಳನ್ನು ಭರ್ತಿ ಮಾಡುತ್ತಿದ್ದು ಇದಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನ ಮಾಡಿದೆ. ಕೊಂಕಣ ರೈಲ್ವೆ ಕಾರ್ಪೋರೇಶನ್ ಲಿಮಿಟೆಡ್ (ಕೆಆರ್ಸಿಎಲ್) ಹುದ್ದೆಗಳನ್ನು ನೇಮಕಾತಿ ಮಾಡುತ್ತಿದೆ.ಜೂ.ಟೆಕ್ನಿಷಿಯನ್ ಅಸಿಸ್ಟೆಂಟ್ (ಮೆಕಾನಿಕಲ್)= 10 ಉದ್ಯೋಗ, ಅಸಿಸ್ಟೆಂಟ್ (ಮೆಕಾನಿಕಲ್)= 23 ಉದ್ಯೋಗ, ಮಾಸಿಕ ಸಂಭಾವನೆ- ಜೂ.ಟೆಕ್ನಿಷಿಯನ್ ಅಸಿಸ್ಟೆಂಟ್ (ಮೆಕಾನಿಕಲ್)= 35,400, ಅಸಿಸ್ಟೆಂಟ್ (ಮೆಕಾನಿಕಲ್)= 25, 500
ವಿದ್ಯಾರ್ಹತೆ- ಐಟಿಐ, ಪದವಿ, ಡಿಪ್ಲೋಮಾ ಇನ್ ಎಲೆಕ್ಟ್ರಿಕಲ್, ಮೆಕಾನಿಕಲ್ ಇಂಜಿನಯರ್, ಪದವಿ ಮುಗಿಸಿರುವ ಅಭ್ಯರ್ಥಿ 1 ವರ್ಷ, ಐಟಿಐ ಹಾಗೂ ಡಿಪ್ಲೋಮಾ ಮುಗಿಸಿದ ಅಭ್ಯರ್ಥಿ 3 ವರ್ಷ ಟೆಕ್ನಿಕಲ್ ಫೀಲ್ಡ್ನಲ್ಲಿ ಅನುಭವ ಹೊಂದಿರಬೇಕು. ಅರ್ಜಿ ಸಲ್ಲಿಕೆಗೆ 18 ರಿಂದ 35 ವರ್ಷದ ಒಳಗಿನವರಿಗೆ ಅವಕಾಶ, ಒಬಿಸಿಗೆ 5 ವರ್ಷ, ಎಸ್ಸಿ, ಎಸ್ಟಿಗೆ 5 ವರ್ಷ ಸಡಿಲಿಕೆ.
ಕೆಲಸ ಮಾಡುವ ಸ್ಥಳ- ಆರಂಭದಲ್ಲಿ ಮಡಗಾಂವ್/ವೆರ್ನಾದಲ್ಲಿ ಕೆಲಸ ಮಾಡಬೇಕು. ಬಳಿಕ ದೇಶದಲ್ಲಿ ಎಲ್ಲಿ ಅಗತ್ಯ ಇದೆಯೋ ಅಲ್ಲಿಗೆ ವರ್ಗಾವಣೆ ಮಾಡಲಾಗುತ್ತದೆ. ಆಯ್ಕೆ ಪ್ರಕ್ರಿಯೆಗೆ ಇಲ್ಲಿ ಯಾವುದೇ ಪರೀಕ್ಷೆ ಇರುವುದಿಲ್ಲ. ಅಭ್ಯರ್ಥಿಗಳು ಕೆಲಸ ಮಾಡಿದ ಪ್ರಮಾಣ ಪತ್ರದ ಕಾಪಿ ಹಾಗೂ ವಿದ್ಯಾರ್ಹತೆಗೆ ಸಂಬಂಧಿಸಿದ ದಾಖಲೆಗಳ ಸಮೇತ ಸಂದರ್ಶನಕ್ಕೆ ಬಂದರೆ ಸಾಕು.
ಜೂ.ಟೆಕ್ನಿಷಿಯನ್ ಅಸಿಸ್ಟೆಂಟ್ (ಮೆಕಾನಿಕಲ್) ಹುದ್ದೆಯ ಸಂದರ್ಶನ ದಿನಾಂಕ- 03 ಅಕ್ಟೋಬರ್ 2024 ಅಸಿಸ್ಟೆಂಟ್ (ಮೆಕಾನಿಕಲ್) ಹುದ್ದೆಯ ಸಂದರ್ಶನ ದಿನಾಂಕ- 08 ಅಕ್ಟೋಬರ್ 2024. ಸಂದರ್ಶನ ನಡೆಯುವ ಸ್ಥಳ- ಎಕ್ಸೂಕ್ಯುಟಿವ್ ಕ್ಲಬ್, ಕೊಂಕಣ ರೈಲ್ವೆ ವಿಹಾರ್, ಕೊಂಕಣ ರೈಲ್ವೆ ಕಾರ್ಪೋರೇಶನ್ ಲಿಮಿಟೆಡ್, ಸೀವುಡ್ಸ್ ರೈಲ್ವೆ ಸ್ಟೇಷನ್ ಸಮೀಪ, ಸೆಕ್ಟರ್- 40, ಸೀವುಡ್ಸ್ (ವೆಸ್ಟ್) ನವಿ ಮುಂಬೈ.