Bengaluru 24°C
Ad

ಭಾರತೀಯ ಪ್ರಾದೇಶಿಕ ಸೇನೆಯಲ್ಲಿರುವ ಹುದ್ದೆಗೆ ಅರ್ಜಿ ಆಹ್ವಾನ

ಭಾರತೀಯ ಪ್ರಾದೇಶಿಕ ಸೇನೆಯಲ್ಲಿ ಖಾಲಿ ಇರುವಂತ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಈ ಸಂಬಂಧ ಇಲಾಖೆಯು ಯುವಕರಿಂದ ಅರ್ಜಿಗಳನ್ನು ಆಹ್ವಾನ ಮಾಡಿದೆ.

ಭಾರತೀಯ ಪ್ರಾದೇಶಿಕ ಸೇನೆಯಲ್ಲಿ ಖಾಲಿ ಇರುವಂತ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಈ ಸಂಬಂಧ ಇಲಾಖೆಯು ಯುವಕರಿಂದ ಅರ್ಜಿಗಳನ್ನು ಆಹ್ವಾನ ಮಾಡಿದೆ. ಈ ಹುದ್ದೆಯ ಇನ್ನೊಂದು ವಿಶೇಷ ಎಂದರೆ ಈ ಕೆಲಸಗಳಿಗೆ ಆನ್​ಲೈನ್ ಅಥವಾ ಆಫ್​ಲೈನ್ ಮೂಲಕ ಆಗಲಿ ಅಪ್ಲೇ ಮಾಡುವುದು ಬೇಕಿಲ್ಲ. ಇದರ ಬದಲಿಗೆ ಮೂಲ ದಾಖಲೆಗಳೊಂದಿಗೆ ಭಾರತಿ ರ್ಯಾಲಿಯಲ್ಲಿ ಅಭ್ಯರ್ಥಿಗಳು ಪಾಲ್ಗೊಳ್ಳಬೇಕು.

ದೇಶದ ಹಲವಾರು ರಾಜ್ಯಗಳಲ್ಲಿ ಈ ರ್ಯಾಲಿಯನ್ನು ಪ್ರಾದೇಶಿಕ ಸೇನೆ ಅಧಿಕಾರಿಗಳು ಆಯೋಜನೆ ಮಾಡುತ್ತಾರೆ. ಈ ಸ್ಥಳಗಳಿಗೆ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕತೆಗೆ ಸಂಬಂಧಿಸಿದ ಮೂಲ ದಾಖಲೆಗಳೊಂದಿಗೆ ಹಾಜರಾಗಬೇಕು. ಇನ್ನುಳಿದಂತೆ ಈ ಎಲ್ಲ ಕೆಲಸಗಳಿಗೆ ಬೇಕಾದ ಅರ್ಹತೆ, ಶುಲ್ಕ, ವಯೋಮಿತಿ, ರ್ಯಾಲಿ ನಡೆಯುವ ಸ್ಥಳ ಇತ್ಯಾದಿಗಳನ್ನು ಇಲ್ಲಿ ನೀಡಲಾಗಿರುತ್ತದೆ.

ಕರ್ನಾಟಕದಲ್ಲೂ ರ್ಯಾಲಿ ಆಯೋಜನೆ ಮಾಡಲಾಗುತ್ತದೆ. ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಈ ರ್ಯಾಲಿ ನಡೆಯುತ್ತದೆ. ಇಡೀ ದೇಶದ್ಯಾಂತ ರ್ಯಾಲಿ ಮೂಲಕವೇ 2 ಸಾವಿರಕ್ಕೂ ಅಧಿಕ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದರಲ್ಲಿ ಪಾಲ್ಗೊಂಡು ಯಶಸ್ವಿ ಆಗಬೇಕು.

ವಿದ್ಯಾರ್ಹತೆ- 8ನೇ ತರಗತಿ, SSLC ಹಾಗೂ PUC ಯಾವ್ಯಾವ ಹುದ್ದೆಗಳು: ಸೋಲ್ಜರ್ (ಜಿಡಿ), ಸೋಲ್ಜರ್ (ಗುಮಾಸ್ತ), ಚೆಫ್, ಕುಕ್ ಮೆಸ್, ಚೆಫ್ ಸ್ಪೆಷಲ್, ಸ್ಟೀವರ್ಡ್​, ಕುಶಲಕರ್ಮಿ, ವುಡ್​ವರ್ಕ್​, ಡ್ರೆಸೆರ್, ಮಸೈಚಿ (Masaichi), ಹೌಸ್ ಕೀಪರ್, ವಾಶ್​ಮ್ಯಾನ್ ಸೇರಿದಂತೆ ಇನ್ನು ಹಲವಾರು ಹುದ್ದೆಗಳನ್ನ ಭರ್ತಿ ಮಾಡಲಾಗುತ್ತಿದೆ.

ಒಟ್ಟು ಹುದ್ದೆಗಳು ಎಷ್ಟು ಇವೆ– 2,847, ವಯೋಮಿತಿ– 18 ರಿಂದ 42 ವರ್ಷಗಳು. ಆಯ್ಕೆ ಪ್ರಕ್ರಿಯೆ : ದೈಹಿಕ ಸಾಮರ್ಥ್ಯ ಪರೀಕ್ಷೆ (ಪಿಎಸ್​ಟಿ)/ ದೈಹಿಕ ದಕ್ಷತೆ ಪರೀಕ್ಷೆ (ಪಿಇಟಿ), ವೈದ್ಯಕೀಯ ಪರೀಕ್ಷೆ, ಟ್ರೇಡ್ ಟೆಸ್ಟ್ (ಹುದ್ದೆಗಳ ಅನುಸಾರ ಇರುತ್ತೆ), ಲಿಖಿತ ಪರೀಕ್ಷೆ, ದಾಖಲೆ ಪರಿಶೀಲನೆ.

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ನವೆಂಬರ್ 04 ರಿಂದ 16ರವರೆಗೆ ರ್ಯಾಲಿ ನಡೆಯಲಿದೆ. ಇನ್ನು ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ದಿನಾಂಕಗಳಲ್ಲಿ ರ್ಯಾಲಿ ನಡೆಯಲಿದೆ. ನವೆಂಬರ್ 16 ರಂದು ದಾಖಲೆ ಪರಿಶೀಲನೆ, ಮೆಡಿಕಲ್ ಟೆಸ್ಟ್, ಟ್ರೇಡ್ ಟೆಸ್ಟ್ ಸೇರಿದಂತೆ ಪೆಂಡಿಂಗ್ ಉಳಿದ ಇತರೆ ಎಲ್ಲ ಕೆಲಸಗಳನ್ನು ಪೂರ್ಣಗೊಳಿಸಲಾಗುತ್ತದೆ.

Ad
Ad
Nk Channel Final 21 09 2023