ನವದೆಹಲಿ: ಭಾರತೀಯ ರೈಲ್ವೆಯಲ್ಲಿ ಪದವಿ ಹಾಗೂ ಪದವಿ ಪೂರ್ವ ಅರ್ಹ ಅಭ್ಯರ್ಥಿಗಳು ಖಾಲಿ ಇರುವ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ಅರ್ಜಿ ಸಲ್ಲಿಕೆ ಸೆಪ್ಟೆಂಬರ್ 14ರಿಂದ ಆರಂಭಗೊಳ್ಳುತ್ತಿದೆ.
ವಯೋಮತಿ 18 ರಿಂದ 33 ವರ್ಷದೊಳಗಿರಬೇಕು. ಈಗಾಗಲೇ ಶಾರ್ಟ್ ನೋಟಿಸ್ ಹೊರಡಿಸಲಾಗಿದೆ. ಸೆಪ್ಟೆಂಬರ್ 10 ರಂದು ವಿವರಣೆಯ ಅಧಿಸೂಚನೆ ಪ್ರಕಟಗೊಳ್ಳಲಿದೆ. ಅಧಿಕೃತ ಭಾರತೀಯ ರೈಲ್ವೇಯ RRB ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.
RRB ಶಾರ್ಟ್ ನೋಟಿಫಿಕೇಶನ್‌ನಲ್ಲಿ ಖಾಲಿ ಹುದ್ದೆಗಳ ಮಾಹಿತಿ ನೀಡಿದೆ. ಪಿಯುಸಿ(+ 2 ಸ್ಟೇಜ್) ಹಾಗೂ ಪದವಿ ಪಾಸ್ ಆದವರು ಈ ಖಾಲಿ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಪದವಿ ವಿಭಾಗದಲ್ಲಿ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ವಯೋಮತಿ 18 ರಿಂದ 30 ವರ್ಷಕ್ಕೆ ನಿಗದಿಪಡಿಸಲಾಗಿದೆ. ಇನ್ನು ಪದವಿ ವಿಭಾಗದಲ್ಲಿ ಲಭ್ಯವಿರುವ ಖಾಲಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮತಿ 18 ವರ್ಷದಿಂದ 33 ವರ್ಷಕ್ಕೆ ಸೀಮಿತಗೊಳಿಸಲಾಗಿದೆ.
ಆಯ್ಕೆ ಪ್ರಕ್ರಿಯೆ ಪರೀಕ್ಷೆ, ಕೌಶಲ್ಯ ಪರೀಕ್ಷೆ ಸೇರಿದಂತೆ ಕೆಲ ಹಂತಗಳಲ್ಲಿ ಇರಲಿದೆ. ಮೊದಲ ಹಂತದ ಕಂಪ್ಯೂಟರ್ ಬೇಸ್ಡ್ ಟೆಸ್ಟ್, ಎರಡನೇ ಹಂತದ ಕಂಪ್ಯೂಟರ್ ಬೇಸ್ಡ್ ಟೆಸ್ಟ್, ಕೌಶಲ್ಯ ಪರೀಕ್ಷೆ, ದಾಖಲೆಗಳ ಪರೀಶೀಲನೆ, ವೈದ್ಯಕೀಯ ಪರೀಕ್ಷೆಗಳ ಮೂಲಕ ನೇಮಕಾತಿ ನಡೆಯಲಿದೆ. ಆಸಕ್ತರು ಹಾಗೂ ಅರ್ಹರು ಅಧಿಕೃತ https://www.rrbbnc.gov.in/ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಕೆಗೆ ಮಾಡಬಹುದು.
ಪದವಿ ಪಾಸ್ ಆದವರಿಗೆ ಇರುವ ಖಾಲಿ ಹುದ್ದೆ: ಚೀಫ್ ಕಮರ್ಷಿಯಲ್ ಕಮ್ ಟಿಕೆಟ್ ಸೂಪರ್‌ವೈಸರ್, ಸ್ಟೇಶನ್ ಮಾಸ್ಟರ್, ಗೂಡ್ಸ್ ಟ್ರೈನ್ ಮ್ಯಾನೇಜರ್, ಜ್ಯೂನಿಯರ್ ಅಕೌಂಟೆಂಟ್ ಕಮ್ ಅಸಿಸ್ಟೆಂಟ್ ಟೈಪಿಸ್ಟ್, ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್,
ಪದವಿ ಪೂರ್ವ ಅಭ್ರರ್ಥಿಗಳ ಹುದ್ದೆ ವಿವರ: ಕಮರ್ಷಿಯಲ್ ಕಮ್ ಟಿಕೆಟ್ ಕ್ಲರ್ಕ್, ಅಕೌಂಟ್ಸ್ ಕ್ಲರ್ಕ್ ಕಮ್ ಟೈಪಿಸ್ಟ್, ಜ್ಯೂನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್, ಟ್ರೈನ್ಸ್ ಕ್ಲರ್ಕ್, ಭಾರತೀಯ ರೈಲ್ವೇ ತ್ವರಿತವಾಗಿ ಖಾಲಿ ಇರುವ ಹುದ್ದಗಳಿಗೆ ಅಭ್ಯರ್ಥಿಗಳ ಆಯ್ಕೆ ಮಾಡುತ್ತಿದೆ. ಹಂತ ಹಂತವಾಗಿ ಖಾಲಿ ಹುದ್ದೆಗಳ ನೇಮಕಾತಿಗಳು ಆರಂಭಗೊಡಿದೆ. 10ನೇ ತರಗತಿ, ಡಿಪ್ಲೋಮಾ, ಎಂಜಿನೀಯರಿಂಗ್ ಸೇರಿದಂತೆ ಹಲವು ಪದವಿದರರಿಗೆ ಉದ್ಯೋಗ ಅವಕಾಶ ಭಾರತೀಯ ರೈಲ್ವೇಯಲ್ಲಿ ಲಭ್ಯವಿದೆ.