Bengaluru 22°C
Ad

5 ದಿನದ ಉಚಿತ ಆನ್‌ಲೈನ್ ಕೋರ್ಸ್ : ಇಸ್ರೋ ಅರ್ಜಿ ಆಹ್ವಾನ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ ಕುರಿತು 5 ದಿನಗಳ ಕಾಲ ಉಚಿತ ಆನ್‌ಲೈನ್ ಕೋರ್ಸ್ ನಡೆಸುತ್ತಿದ್ದು ಆಸಕ್ತ ಅಭ್ಯರ್ಥಿಗಳು ಇದರಲ್ಲಿ ಭಾಗವಹಿಸಬಹುದಾಗಿದೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ ಕುರಿತು 5 ದಿನಗಳ ಕಾಲ ಉಚಿತ ಆನ್‌ಲೈನ್ ಕೋರ್ಸ್ ನಡೆಸುತ್ತಿದ್ದು ಆಸಕ್ತ ಅಭ್ಯರ್ಥಿಗಳು ಇದರಲ್ಲಿ ಭಾಗವಹಿಸಬಹುದಾಗಿದೆ.

Ad

ಬಾಹ್ಯಾಕಾಶ ಕ್ಷೇತ್ರದಲ್ಲಿ ನಾವೀನ್ಯತೆ ಹೆಚ್ಚಿಸಲು ವಿದ್ಯಾರ್ಥಿಗಳಿಗೆ AI ಮತ್ತು ML ವಿಷಯಗಳನ್ನು ಒಳಗೊಂಡ 5 ದಿನಗಳ ಉಚಿತ ಕೋರ್ಸ್ ಅನ್ನು ಆಗಸ್ಟ್ 19 ರಿಂದ 24 ರವರೆಗೆ ಇಸ್ರೋ ನಡೆಸಿಕೊಡಲಿದೆ.

Ad

ಅಂದರೆ 5 ದಿನಗಳ ಕಾಲ ಐಐಆರ್​​ಎಸ್ ಔಟ್ರೀಚ್ ಕಾರ್ಯಕ್ರಮದ ಭಾಗವಾಗಿದೆ. ಇದು ಬಾಹ್ಯಾಕಾಶ ವಲಯದಲ್ಲಿ ಮತ್ತು ಅದರಾಚೆಗೆ ನಾವೀನ್ಯತೆ ಹೆಚ್ಚಿಸುವ ಗುರಿ ಹೊಂದಿದೆ. ​ಈ ಆನ್​ಲೈನ್​ ಕೋರ್ಸ್​ನಲ್ಲಿ ಸಂಪೂರ್ಣವಾಗಿ ಭಾಗವಹಿಸುವ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ನೀಡಲಾಗುತ್ತದೆ ಎಂದು ಹೇಳಿದೆ.

Ad

ಇಸ್ರೋದ ಈ ಆನ್​ಲೈನ್ ಕೋರ್ಸ್ ಅನ್ನು ವೃತ್ತಿಪರರು, ವಿದ್ಯಾರ್ಥಿಗಳು ಮತ್ತು ಸಿವಿಲ್ ಎಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಕ್ಷೇತ್ರಗಳ ಸಂಶೋಧಕರಿಗಾಗಿ ಸಿದ್ಧತೆ ಮಾಡಲಾಗಿದೆ. AI, ML ಕುರಿತ ಆಳವಾದ ತಿಳಿದುಕೊಳ್ಳಲು ಆಸಕ್ತಿ ಹೊಂದಿರುವವರು ಇದಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

Ad

ಐಐಆರ್​​ಎಸ್-ಇಸ್ರೋದ ಇ- ಕ್ಲಾಸ್ ಪ್ಲಾಟ್‌ಫಾರ್ಮ್ ಮೂಲಕ ಆನ್‌ಲೈನ್‌ನಲ್ಲಿ ತರಗತಿ ನಡೆಸಲಾಗುತ್ತದೆ. ಸ್ಲೈಡ್‌ಗಳು, ಓಪನ್ ಸೋರ್ಸ್ ಸಾಫ್ಟ್‌ವೇರ್, ರೆಕಾರ್ಡ್ ಮಾಡಿದ ವೀಡಿಯೊಗಳಿಂದ ಕ್ಲಾಸ್ ತೆಗೆದುಕೊಳ್ಳಲಾಗುತ್ತೆ. ನಿಮಗೆ ಉತ್ತಮ ಇಂಟರ್​ನೆಟ್ ಹಾಗೂ ಮೂಲ ಕಂಪ್ಯೂಟರ್ ಹಾರ್ಡ್‌ವೇರ್ ಅಗತ್ಯವಿರುತ್ತದೆ.

Ad

ಅರ್ಜಿ ಸಲ್ಲಿಸಲು ಈ ಲಿಂಕ್​ ಕ್ಲಿಕ್ ಮಾಡಿ- https://elearning.iirs.gov.in/edusatregistration/

Ad

ಕೋರ್ಸ್ ವೇಳಾಪಟ್ಟಿ: ಇಸ್ರೋದ ಈ ಆನ್​ಲೈನ್​ ಕ್ಲಾಸ್​ಗಳು ಆಗಸ್ಟ್ 19 ರಿಂದ 24ರವರೆಗೆ ಸಂಜೆ 4 ಗಂಟೆಯಿಂದ 5:30ರವರೆಗೆ ಇರುತ್ತವೆ. ಅಂದರೆ ಒಂದೂವರೆ ಗಂಟೆ ಕ್ಲಾಸ್ ತೆಗೆದುಕೊಳ್ಳಲಾಗುತ್ತದೆ.

Ad
Ad
Ad
Nk Channel Final 21 09 2023