ಮಂಗಳೂರು: ಸ್ವಿಮ್ಮಿಂಗ್ ಪೂಲ್ ನಲ್ಲಿ ಮೂವರು ಯುವತಿಯರು ದುರ್ಮರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ನಡೆದ ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.
Ad
ತಡ ರಾತ್ರಿಯೇ ಮೃತ ದೇಹ ಗಳೊಂದಿಗೆ ಕುಟುಂಬಸ್ಥರು ಮೈಸೂರಿಗೆ ತೆರಳಿದ್ದಾರೆ. ಈ ಬೀಚ್ ರೆಸಾರ್ಟ್ ನ ಪರ್ಮಿಶನ್ ನನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ. ತನಿಖೆ ಮುಗಿಯುವವರೆಗೂ ಸೀಲ್ ಡೌನ್ ಮಾಡಲಾಗಿದೆ.
Ad
ರೆಸಾರ್ಟ್ ನಲ್ಲಿ ನ್ಯೂನ್ಯತೆಗಳು ಇರೋ ಕಾರಣ ಸೀಲ್ ಡೌನ್ ಮಾಡಲಾಗಿದ್ದು, ರೆಸಾರ್ಟ್ ನ ಉದ್ದಿಮೆ ಪರವಾನಿಗೆಯನ್ನು ಉಳ್ಳಾಲ ಪುರಸಭೆ ರದ್ದು ಪಡಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಆರ್ ಸಂಖ್ಯೆ 206/24 ಯು /ಎಸ್ 106 ಬಿಎನ್ ನಲ್ಲಿ ಎಫ್ ಐಆರ್ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ. 1) ಮನೋಹರ್ (ಮಾಲೀಕ) 2) ಭರತ್ (ಮ್ಯಾನೇಜರ್) ಬಂಧಿತ ಆರೋಪಿಗಳು. ಹೆಚ್ಚಿನ ತನಿಖೆಯನ್ನು ಕೈಗೆತ್ತಿಕೊಳ್ಳಲಾಗಿದೆ.
Ad
Ad