ಕಲಬುರಗಿ: ಅಣ್ಣನ ಪ್ರೇಮ ಪ್ರಕರಣಕ್ಕೆ ತಮ್ಮನನ್ನು ಕಲಬುರಗಿಯಲ್ಲಿ ಬರ್ಬರ ಕೊಲೆ ಮಾಡಿರುವ ಪ್ರಕರಣ ಸಂಬಂಧ ವಿಶ್ವವಿದ್ಯಾಲಯ ಪೊಲೀಸರು ಯುವತಿ ಸೇರಿ ಆರು ಮಂದಿ ಆರೋಪಿಗಳನ್ನು ಬಂಧಿಸಿರುವ ಘಟನೆ ನಡೆದಿದೆ.
ಕಳೆದ ಎರಡು ದಿನಗಳ ಹಿಂದೆ ಕಲಬುರಗಿ ಹೊರವಲಯದ ನಾಗನಹಳ್ಳಿ ಗ್ರಾಮದಲ್ಲಿ ಸುಮಿತ್ ಎಂಬ ಯುವಕನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಕುರಿತು ವಿಶ್ವವಿದ್ಯಾಲಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಅದೇ ಗ್ರಾಮದ ರಾಜಕುಮಾರ್, ವರುಣ್ ಕುಮಾರ್, ಸಿದ್ದು, ಪ್ರಜ್ವಲ್, ಜಯಮ್ಮ, ಆಕೆಯ ಮಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಾದ ರಾಜಕುಮಾರ್, ಜಯಮ್ಮ ದಂಪತಿ ಮಗಳನ್ನು ಕೊಲೆಯಾದ ಸುಮೀತ್ ಸಹೋದರ ಸಚಿನ್ ಲವ್ ಮಾಡುತ್ತಿದ್ದ. ಹೀಗಾಗಿ ಸಚಿನ್‌ಗೆ ಬೆದರಿಕೆ ಹಾಕಲು ಪ್ಲ್ಯಾನ್ ಮಾಡಿ ಸಚಿನ್ ಸಹೋದರ ಸಮೀತ್ ಜೊತೆ ನಾಗನಹಳ್ಳಿ ಗ್ರಾಮದಲ್ಲಿ ಯುವತಿಯ ಕುಟುಂಬಸ್ಥರು ಜಗಳವಾಡಿದ್ದರು. ಈ ವೇಳೆ ಸುಮಿತ್‌ಗೆ ಚಾಕುವಿನಿಂದ ಹಲ್ಲೆ ಮಾಡಿ ಕೊಲೆ ಮಾಡಲಾಗಿತ್ತು. ಸದ್ಯ ಎಲ್ಲಾ ಆರೋಪಿಗಳನ್ನು ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.