ಮೈಸೂರು: ಪತಿಯ ಅನೈತಿಕ ಸಂಬಂಧದ ವಿಚಾರದಲ್ಲಿ ಗಲಾಟೆ ಮಾಡಿಕೊಂಡು ಮನೆ ಬಿಟ್ಟ ಗೃಹಿಣಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಮೈಸೂರು ತಾಲ್ಲೂಕಿನ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ದೂರ ಗ್ರಾಮದಲ್ಲಿ ನಡೆದಿದೆ.
ಗೃಹಿಣಿಯ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ಸಂಬಂಧಿಕರು ಪತಿ, ಪ್ರಿಯತಮೆ ಹಾಗೂ ಇಬ್ಬರು ಸಂಬಂಧಿಕರ ಬಗ್ಗೆ ಅನುಮಾನ ವ್ಯಕ್ತವಾಗಿದೆ. ನಂಜನಗೂಡು ತಾಲ್ಲೂಕಿನ ಗೌಡರಹುಂಡಿ ಗ್ರಾಮದ ಸರೋಜಮ್ಮ (35) ಮೃತ ಮಹಿಳೆ. ಅನೈತಿಕ ಸಂಬಂಧದಲ್ಲಿ ಸರೋಜಮ್ಮ ಸಂಸಾರದಲ್ಲಿ ಬಿರುಕು ಕಾಣಿಸಿಕೊಂಡಿತು. ಆಗಾಗ್ಗೆ ಜಗಳಗಳು ನಡೆಯುತ್ತಿತ್ತು.
ಹಿರಿಯರ ಸಮ್ಮುಖದಲ್ಲಿ ರಾಜಿ ಪಂಚಾಯಿತಿಗಳು ನಡೆದಿದ್ದವು. ಡಿ.10 ರಂದು ಸರೋಜಮ್ಮಳನ್ನ ದೇವಣ್ಣ ಎಂಬಾತ ಪ್ರೇಮಾ ಮನೆಗೆ ಕರೆದೊಯ್ದಿದ್ದಾನೆ. ಅಲ್ಲಿಯೂ ಸಹ ಇದೇ ವಿಚಾರದಲ್ಲಿ ಜಗಳ ನಡೆದಿದೆ. ಗಂಡನ ವರ್ತನೆಯಿಂದ ಬೇಸತ್ತ ಸರೋಜಮ್ಮ ಮನೆ ಬಿಟ್ಟಿದ್ದಳು. ಗೌಡರಹುಂಡಿ ಗ್ರಾಮಕ್ಕೆ ಆಕೆ ಹಿಂತಿರುಗಿಲ್ಲವೆಂದು ಸರೋಜಮ್ಮ ಮನೆಯವರು ಜಯಪುರ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಿಸಿದ್ದಾರೆ.
ಮರುದಿನ ದೂರ ಗ್ರಾಮದ ಜಮೀನಿನ ಮರವೊಂದರಲ್ಲಿ ಸರೋಜಮ್ಮ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದು ಆತ್ಮಹತ್ಯೆ ಅಲ್ಲ ಕೊಲೆ ಎಂಬ ಶಂಕೆ ಸರೋಜಮ್ಮ ಸಂಬಂಧಿಕರ ಆರೋಪವಾಗಿದೆ. ಈ ಸಂಬಂಧ ಜಯಪುರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.