Ad

ಕಾಲೇಜಿನ ಸೆಕ್ಯೂರಿಟಿ ಗಾರ್ಡ್‌ನನ್ನು ಇರಿದು ಕೊಂದ ವಿದ್ಯಾರ್ಥಿ ಅರೆಸ್ಟ್‌

ಈಗ ಕೊಲೆ ಎಂಬುದು ಒಂದು ರೀತಿ ಸಾಮನ್ಯವಾಗಿ ಬಿಟ್ಟಿದೆ. ಮಕ್ಕಳಿಂದ ಹಿಡಿದು ವಯಸ್ಸಾದವರ ವರೆಗೂ ಕೊಲೆ ಎಸಗಿ ಜೈಲು ಪಾಲಾಗಿದ್ದಾರೆ. ಇದೀಗ ವಿದ್ಯಾರ್ಥಿಯೋರ್ವ ಕಾಲೇಜಿನ ಸೆಕ್ಯೂರಿಟಿ ಗಾರ್ಡ್‌ನನ್ನೇ ಚಾಕುವಿನಿಂದ ಇರಿದು ಕೊಂದಿದ್ದಾನೆ. ಯಲಹಂಕ ನಿವಾಸಿ ಜೈ ಕಿಶೋರ್ ರೈ (45) ಮೃತ ದುರ್ದೈವಿ.

ಬೆಂಗಳೂರು: ಈಗ ಕೊಲೆ ಎಂಬುದು ಒಂದು ರೀತಿ ಸಾಮನ್ಯವಾಗಿ ಬಿಟ್ಟಿದೆ. ಮಕ್ಕಳಿಂದ ಹಿಡಿದು ವಯಸ್ಸಾದವರ ವರೆಗೂ ಕೊಲೆ ಎಸಗಿ ಜೈಲು ಪಾಲಾಗಿದ್ದಾರೆ. ಇದೀಗ ವಿದ್ಯಾರ್ಥಿಯೋರ್ವ ಕಾಲೇಜಿನ ಸೆಕ್ಯೂರಿಟಿ ಗಾರ್ಡ್‌ನನ್ನೇ ಚಾಕುವಿನಿಂದ ಇರಿದು ಕೊಂದಿದ್ದಾನೆ. ಯಲಹಂಕ ನಿವಾಸಿ ಜೈ ಕಿಶೋರ್ ರೈ (45) ಮೃತ ದುರ್ದೈವಿ.

Ad
300x250 2

ಹೆಬ್ಬಾಳದ ಕೆಂಪಾಪುರ ಸಮೀಪದ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದ ಭಾರ್ಗವ್‌, ಕಾಲೇಜಿನ ಸಮೀಪದಲ್ಲಿ ಪಿಜಿಯಲ್ಲಿ ನೆಲೆಸಿದ್ದ. ಕಾಲೇಜಿನಲ್ಲಿ ಬುಧವಾರ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.ಈ ಸಮಾರಂಭದ ಜೋಶ್‌ನಲ್ಲಿ ಮದ್ಯ ಸೇವಿಸಿ ಕಾಲೇಜಿಗೆ ಭಾರ್ಗವ್ ಬಂದಿದ್ದಾನೆ.ಆದ್ದರಿಂದ ಸೆಕ್ಯೂರಿಟಿ ಗಾರ್ಡ್ ಕಿಶೋರ್ ತಡೆದು ಮದ್ಯ ಸೇವಿಸಿ ಕಾಲೇಜಿನೊಳಗೆ ಹೋಗಲು ಅ‍ವಕಾಶ ಕೊಡುವುದಿಲ್ಲವೆಂದು ಹೇಳಿದ್ದಾರೆ.

ನಂತರ ಅಂಗಡಿಯಲ್ಲಿ ಚಾಕು ಖರೀದಿಸಿ ಮತ್ತೆ ಕಾಲೇಜಿಗೆ ಬಂದು ಗೇಟ್ ಬಳಿ ನಿಂತಿದ್ದ ಸೆಕ್ಯೂರಿಟಿ ಗಾರ್ಡ್‌ ಕಿಶೋರ್ಗೆ ಏಕಾಏಕಿ ಎದೆಗೆ ಎರಡ್ಮೂರು ಬಾರಿ ಚಾಕುವಿನಿಂದ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡ ಸೆಕ್ಯೂರಿಟಿ ಸ್ಥಳದಲ್ಲೇ ಸಾವನಪ್ಪಿದ್ದಾನೆ.ಹತ್ಯೆ ಸಂಬಂಧ ಅಂತಿಮ ವರ್ಷದ ಬಿಎ ವಿದ್ಯಾರ್ಥಿ ಅಸ್ಸಾಂ ಮೂಲದ ಭಾರ್ಗವ್ ಬರ್ಬನ್‌ನನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

 

Ad
Ad
Nk Channel Final 21 09 2023
Ad