Ad

ಕ್ಲಾಸ್‌ರೂಮ್‌ನಲ್ಲಿಯೇ ಟೀಚರ್‌ಗೆ ಚಾಕುವಿನಿಂದ ಇರಿದು ಕೊಂದ ವಿದ್ಯಾರ್ಥಿ

ಕೊಲೆ ಎನ್ನುವುದು ಈಗ ಸಾಮನ್ಯವಾಗಿ ಬಿಟ್ಟಿದೆ, ಯಾರೆಂದು ನೋಡದೇ ಸ್ವಂತದವರಿಗೂ ಚಾಕು ಇರಿಯುತ್ತಾರೆ. ಇದೀಗ ಅಂತಹದ್ದೇ ಘಟನೆ ನಡೆದಿದ್ದು ಕ್ಲಾಸ್‌ ರೂಮ್‌ನಲ್ಲಿಯೇ ವಿದ್ಯಾರ್ಥಿಯೋರ್ವ ಟೀಚರ್‌ಗೆ ಚಾಕುವಿನಿಂದ ಇರಿದ ಆಘಾತಕಾರಿ ಘಟನೆ ಶನಿವಾರ ನಡೆದಿದೆ.

ದಿಸ್ಪುರ: ಕೊಲೆ ಎನ್ನುವುದು ಈಗ ಸಾಮನ್ಯವಾಗಿ ಬಿಟ್ಟಿದೆ, ಯಾರೆಂದು ನೋಡದೇ ಸ್ವಂತದವರಿಗೂ ಚಾಕು ಇರಿಯುತ್ತಾರೆ. ಇದೀಗ ಅಂತಹದ್ದೇ ಘಟನೆ ನಡೆದಿದ್ದು ಕ್ಲಾಸ್‌ ರೂಮ್‌ನಲ್ಲಿಯೇ ವಿದ್ಯಾರ್ಥಿಯೋರ್ವ ಟೀಚರ್‌ಗೆ ಚಾಕುವಿನಿಂದ ಇರಿದ ಆಘಾತಕಾರಿ ಘಟನೆ ಶನಿವಾರ ನಡೆದಿದೆ.

Ad
300x250 2

ಅಸ್ಸಾಂ ರಾಜ್ಯದ ಶಿವಸಾಗರ ಜಿಲ್ಲೆಯ ಶಾಲೆಯೊಂದರಲ್ಲಿ ಘಟನೆ ನಡೆದಿದ್ದು, ಚಾಕು ಇರಿತಕ್ಕೊಳಗಾದ ಶಿಕ್ಷಕ ರಾಜೇಂದ್ರ ಬಾಬು ಮೃತರಾಗಿದ್ದಾರೆ. ಕ್ಲಾಸ್‌ರೂಮ್‌ನಲ್ಲಿ ಕ್ಯಾಸೂಲ್ ಬಟ್ಟೆ ಧರಿಸುವಂತೆ ಹೇಳಿದ್ದಕ್ಕೆ ಕೋಪಗೊಂಡ ವಿದ್ಯಾರ್ಥಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ತರಗತಿ ಕೊಠಡಿಯಲ್ಲಿ ಕೊಲೆ ಆಗಿರೋದರಿಂದ ವಿದ್ಯಾರ್ಥಿಗಳೆಲ್ಲಾ ಆತಂಕದಲ್ಲಿದ್ದಾರೆ.

ಶನಿವಾರ ಮಧ್ಯಾಹ್ನ 3.15ಕ್ಕೆ ಕೊಲೆಯಾಗಿದೆ. ಚಾಕು ಇರಿತಕ್ಕೊಳಗಾಗಿದ್ದ ಶಿಕ್ಷಕ ರಾಜೇಂದ್ರ ಬಾಬು ಅವರನ್ನು ಕೂಡಲೇ ಆಸ್ಪತ್ರೆಗೆ ರವಾನಿಸಲಾಗಿತ್ತು. ವೈದ್ಯರು ಶಿಕ್ಷಕ ಮೃತರಾಗಿರೋದನ್ನು ಘೋಷಿಸಿದ್ದಾರೆ. ಕೊಲೆ ಸಂಬಂಧ ಬಾಲಕನನ್ನು ವಶಕ್ಕೆ ಪಡೆಯಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಮೊಯಿದುಲ್ ಇಸ್ಲಾಂ ಹೇಳಿದ್ದಾರೆ. ಆರೋಪಿ ವಿದ್ಯಾರ್ಥಿ 11ನೇ ತರಗತಿ ಓದುತ್ತಿದ್ದನು.

Ad
Ad
Nk Channel Final 21 09 2023
Ad