ಗಾಜಿಯಾಬಾದ್ : 10 ವರ್ಷದ ಬಾಲಕ ಮನೆಯಲ್ಲಿ ₹500 ಕಳ್ಳತನ ಮಾಡಿದ ಎಂದು ಶಂಕಿಸಿ ಸ್ವಂತ ಮಗನನ್ನೇ ಆತನ ತಂದೆ ಹೊಡೆದು ಕೊಂದಿರುವ ಘಟನೆ ಗಾಜಿಯಾಬಾದ್‌ನಲ್ಲಿ ನಡೆದಿದೆ.
ಮನೆಯಲ್ಲಿ ಇಟ್ಟಿದ್ದ ₹ 500 ಪತ್ತೆಯಾಗದ ಹಿನ್ನೆಲೆಯಲ್ಲಿ ಶನಿವಾರ ತಂದೆ ನೌಶಾದ್ ಆದ್‌ಗೆ ಪೈಪ್‌ನಿಂದ ಮನಸೋಯಿಚ್ಛೆ ಥಳಿಸಿರುವ ಪರಿಣಾಮ ಬಾಲಕ ಸಾವನ್ನಪ್ಪಿದ್ದಾನೆ. ಈ ಘಟನೆಯ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
10 ವರ್ಷದ ಬಾಲಕ ಆದ್ ತನ್ನ ತಂದೆ ನೌಶಾದ್ ಮತ್ತು ಮಲತಾಯಿ ರಜಿಯಾ ಜೊತೆ ವಾಸಿಸುತ್ತಿದ್ದ.ತಂದೆ ತಾಯಿ ಇಬ್ಬರೂ ಆಗಾಗ್ಗೆ ಅವನನ್ನು ಥಳಿಸುತ್ತಿದ್ದರು ಎಂದು ಹೇಳಿದ್ದಾರೆ. ಬಾಲಕನ ಮೇಲೆ ಪೈಪ್ ನಿಂದ ತೀವ್ರ ಹಲ್ಲೆ ನಡೆಸಲಾಗಿದ್ದು, ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
Ad