Bengaluru 29°C
Ad

ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ : ನಾಲ್ವರ ವಿರುದ್ದ ಪೋಕ್ಸೊ‌‌ ಪ್ರಕರಣ

ಅಪ್ರಾಪ್ತಳ‌ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪ‌ ಹಿನ್ನೆಲೆ ನಾಲ್ವರ ವಿರುದ್ದ ಲೋಕಾಪುರ ಪೊಲೀಸ್ ಠಾಣೆಯಲ್ಲಿ ಪೋಕ್ಸೊ‌ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ತಾಲೂಕಿನ ಗ್ರಾಮವೊಂದರ ಅಪ್ರಾಪ್ತೆ ಶೌಚಕ್ಕೆ ತೆರಳಿದ ವೇಳೆ ಆರೋಪಿಗಳು ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ತಿಳಿದುಬಂದಿದೆ.

ಮುಧೋಳ : ಅಪ್ರಾಪ್ತಳ‌ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪ‌ ಹಿನ್ನೆಲೆ ನಾಲ್ವರ ವಿರುದ್ದ ಲೋಕಾಪುರ ಪೊಲೀಸ್ ಠಾಣೆಯಲ್ಲಿ ಪೋಕ್ಸೊ‌ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ತಾಲೂಕಿನ ಗ್ರಾಮವೊಂದರ ಅಪ್ರಾಪ್ತೆ ಶೌಚಕ್ಕೆ ತೆರಳಿದ ವೇಳೆ ಆರೋಪಿಗಳು ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ತಿಳಿದುಬಂದಿದೆ.

ಬಾಲಕಿಯನ್ನು ಅದೇ ಗ್ರಾಮದ ಯುವಕ ಪ್ರೀತಿಸು ಎಂದು ಬೆನ್ನುಬಿದ್ದಿದ್ದ. ಬಾಲಕಿ ಆತನ ಪ್ರೀತಿ ನಿರಾಕರಿಸಿದ್ದಳು. ಯುವಕನ ಉಪಟಳದಿಂದ ಬಾಲಕಿ ತನ್ನ ಚಿಕ್ಕಮ್ಮನ ಮನೆಯಲ್ಲಿ ವಾಸವಾಗಿದ್ದಳು. ಅಲ್ಲಿಗೂ ತೆರಳಿದ ಯುವಕ ತನ್ನ ಸ್ನಹೀತರ ನೆರವಿನಿಂದ ಬಾಲಕಿ ಶೌಚಕ್ಕೆ ತೆರಳಿದಾಗ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ಸಂಬಂಧ ಸುನೀಲ ಜಾನಪ್ಪಗೋಳ(23), ಮಂಜುನಾಥ ಮ್ಯಾಗೇರಿ(32), ಸಚೀನ ಮ್ಯಾಗೇರಿ (24), ರವಿಚಂದ್ರ ತಳಗೇರಿ (23) ಇವರ ವಿರುದ್ದ ಬಾಲಕಿ ದೂರು ದಾಖಲಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪಿಎಸ್ಐ ಕಾಡಪ್ಪ ಜಕ್ಕನ್ನವರ ತನಿಖೆ ಕೈಗೊಂಡು ಮೂವರನ್ನು ಬಂಧಿಸಿದ್ದಾರೆ. ಓರ್ವ ಆರೋಪಿ ತಲೆಮರೆಸಿಕೊಂಡಿದ್ದು, ಬಂಧನಕ್ಕಾಗಿ ಪೊಲೀಸರು ಜಾಲ ಬೀಸಿದ್ದಾರೆ.

 

 

 

 

Ad
Ad
Nk Channel Final 21 09 2023