Ad

ಅತ್ತೆಯನ್ನು 100 ಬಾರಿ ಇರಿದು ಕೊಂದಿದ್ದ ಮಹಿಳೆಗೆ ಮರಣದಂಡನೆ ಶಿಕ್ಷೆ

ಅತ್ತೆಯನ್ನು 95ಕ್ಕೂ ಹೆಚ್ಚು ಬಾರಿ ಕೊಂದಿದ್ದ ಸೊಸೆಗೆ ಇದೀಗ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. 24 ವರ್ಷದ ಸೊಸೆಗೆ ಮಧ್ಯಪ್ರದೇಶದ ರೇವಾ ಕೋರ್ಟ್‌ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿರುವುದಾಗಿ ಜಿಲ್ಲಾ ಪಬ್ಲಿಕ್‌ ಪ್ರಾಸಿಕ್ಯೂಟರ್‌ ತಿಳಿಸಿರುವುದಾಗಿ ವರದಿಯಾಗಿದೆ.

ಭೋಪಾಲ್: ಅತ್ತೆಯನ್ನು 95ಕ್ಕೂ ಹೆಚ್ಚು ಬಾರಿ ಕೊಂದಿದ್ದ ಸೊಸೆಗೆ ಇದೀಗ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. 24 ವರ್ಷದ ಸೊಸೆಗೆ ಮಧ್ಯಪ್ರದೇಶದ ರೇವಾ ಕೋರ್ಟ್‌ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿರುವುದಾಗಿ ಜಿಲ್ಲಾ ಪಬ್ಲಿಕ್‌ ಪ್ರಾಸಿಕ್ಯೂಟರ್‌ ತಿಳಿಸಿರುವುದಾಗಿ ವರದಿಯಾಗಿದೆ.

Ad
300x250 2

51 ವರ್ಷದ ಅತ್ತೆ ಸರೋಜ್‌ ಅವರನ್ನು ಹರಿತವಾದ ಕುಡುಗೋಲಿನಿಂದ ಕೊಚ್ಚಿ ಕೊಂದಿದ್ದ ಅಟ್ರಾಲಿಯಾ ಗ್ರಾಮದ ನಿವಾಸಿ ಆರೋಪಿ ಕಾಂಚನ್‌ ಕೋಲ್‌ (ಸೊಸೆ)ಗೆ ರೇವಾದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ಜಡ್ಜ್‌ ಪದ್ಮ ಜಾಟವ್‌ ಗಲ್ಲುಶಿಕ್ಷೆ ವಿಧಿಸಿರುವುದಾಗಿ ಪಬ್ಲಿಕ್‌ ಪ್ರಾಸಿಕ್ಯೂಟರ್‌ ವಿಕಾಸ್‌ ದ್ವಿವೇದಿ ತಿಳಿಸಿದ್ದಾರೆ.

ಅತ್ತೆಯ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ್ದ ಯುವತಿ ಸರೋಜ್‌ ಅವರ ತಲೆಗೆ ದೋಸೆ ಕಾವಲಿಯಿಂದ ಹೊಡೆದು ನಂತರ ಹರಿತವಾದ ಕುಡುಗೋಲಿನಿಂದ 100 ಬಾರಿ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು.ಪತಿ ಉತ್ತರಪ್ರದೇಶದ ಮೀರತ್‌ ನಲ್ಲಿ ಕಾರ್ಯನಿರ್ವಹಿಸುತ್ತಿದ್ದು.

ವಿಚಾರಣೆ ವೇಳೆ ಅತ್ತೆ ತನಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದುದ್ದಲ್ಲದೇ ಹೊಡೆಯುತ್ತಿರುವುದಾಗಿ ಪೊಲೀಸರ ವಿಚಾರಣೆ ವೇಳೆ ಕಾಂಚನ್‌ ತಿಳಿಸಿದ್ದಾಳೆ.

Ad
Ad
Nk Channel Final 21 09 2023
Ad