Ad

ಚಾಕು ಇರಿದು ಸೆಕ್ಯುರಿಟಿ ಗಾರ್ಡ್​ನನ್ನು ಕೊಲೆ ಮಾಡಿದ ವಿದ್ಯಾರ್ಥಿ

ಸೆಕ್ಯುರಿಟಿ ಗಾರ್ಡ್​ ಕಾಲೇಜಿನ​ ಒಳಗೆ ಬಿಟ್ಟಿಲ್ಲವೆಂದು ವಿದ್ಯಾರ್ಥಿಯೋರ್ವ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಅಮೃತಹಳ್ಳಿಯ ಸಿಂಧಿ ಕಾಲೇಜಿನಲ್ಲಿ ನಡೆದಿದೆ.

ಬೆಂಗಳೂರು: ಸೆಕ್ಯುರಿಟಿ ಗಾರ್ಡ್​ ಕಾಲೇಜಿನ​ ಒಳಗೆ ಬಿಟ್ಟಿಲ್ಲವೆಂದು ವಿದ್ಯಾರ್ಥಿಯೋರ್ವ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಅಮೃತಹಳ್ಳಿಯ ಸಿಂಧಿ ಕಾಲೇಜಿನಲ್ಲಿ ನಡೆದಿದೆ.

Ad
300x250 2

ಜೈ ಕಿಶೋರ್ ರಾಯ್ ಮೃತ ಸೆಕ್ಯುರಿಟಿ ಗಾರ್ಡ್. ಭಾರ್ಗವ್ ಎನ್ನುವ ವಿದ್ಯಾರ್ಥಿ ಈ ಕೃತ್ಯ ಎಸಗಿದ್ದಾನೆ. ಸೆಕ್ಯುರಿಟಿ ಗಾರ್ಡ್​, ವಿದ್ಯಾರ್ಥಿಯನ್ನು ಕಾಲೇಜಿನ ಒಳಗೆ ಬಿಟ್ಟಿಲ್ಲ. ಹೀಗಾಗಿ ಕೋಪಗೊಂಡ ವಿದ್ಯಾರ್ಥಿ ಸೆಕ್ಯುರಿಟಿ ಮೇಲೆ ಹಲ್ಲೆ ನಡೆಸಿ ಚಾಕು ತೆಗೆದುಕೊಂಡು ಇರಿದಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಸೆಕ್ಯುರಿಟಿ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾನೆ.

ಸ್ಥಳಕ್ಕೆ ಅಮೃತಹಳ್ಳಿ ಪೊಲೀಸರು ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ. ವಿದ್ಯಾರ್ಥಿ ಕಾಲೇಜಿಗೆ ಮದ್ಯಪಾನ ಮಾಡಿ ಬಂದಿರುವ ಶಂಕೆ ಇದೆ. ಈ ವೇಳೆ ಕಾಲೇಜಿನ ಒಳಗೆ ಬಿಡದಿದ್ದಕ್ಕೆ ಚಾಕು ಇರಿದು ಹತ್ಯೆ ಮಾಡಿದ್ದಾನೆ. ಸದ್ಯ ಅಮೃತಹಳ್ಳಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Ad
Ad
Nk Channel Final 21 09 2023
Ad