Ad

ಪುತ್ತೂರು ಕೋರ್ಟ್ ರಸ್ತೆಯಲ್ಲಿ ಅನುಷ್ಕಾ ಶೆಟ್ಟಿಯ ಮಾವನಿಂದ ಸದಾಶಿವ ಪೈ ಅವರಿಗೆ ಚೂರಿ ಇರಿತ !

Puttur

ಪುತ್ತೂರು: ಪುತ್ತೂರಿನ ಕೋರ್ಟ್ ರಸ್ತೆಯಲ್ಲಿ ಪಾರ್ಕಿಂಗ್ ವಿಷಯದಲ್ಲಿ ಗಲಾಟೆ ನಡೆದು ಸದಾಶಿವ ಪೈ ಗೆ ಖ್ಯಾತ ನಟಿ ಅನುಷ್ಕಾ ಶೆಟ್ಟಿಯ ಮಾವ ಉರಮಾಲು ಗುಣಶೇಖ‌ರ್ ಶೆಟ್ಟಿಯವರು ಚೂರಿ ಇರಿದಿರುವ ಘಟನೆ ಇಂದು ನಡೆದಿದೆ.

Ad
300x250 2

ಸದಾಶಿವ ಪೈ ಅವರ ಕೈ ಗೆ ಚೂರಿ ತಾಗಿದ್ದು, ಅವರು ಪುತ್ತೂರಿನ ಸರಕಾರಿ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಗುಣಶೇಖ‌ರ್ ಶೆಟ್ಟಿ ಮೇಲೂ ಹಲ್ಲೆಯಾಗಿದ್ದು ಇವರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗುಣಶೇಖ‌ರ್ ಶೆಟ್ಟಿ ಹಾಗೂ ಸದಾಶಿವ ಪೈ ಎಂಬವರ ಮಧ್ಯೆ ಈ ಗಲಾಟೆ ನಡೆದಿದ್ದು, ಜಗಳ ತಾರಕಕ್ಕೇರಿ ಅನುಷ್ಕಾ ಶೆಟ್ಟಿಯ ಮಾವ ಗುಣಶೇಖ‌ರ್ ಶೆಟ್ಟಿ ಸದಾಶಿವ ಪೈ ಅವರಿಗೆ ಚಾಕುವಿನಿಂದ ಇರಿದಿದ್ದಾರೆ. ಪುತ್ತೂರು ನಗರಠಾಣಾ ಪೊಲೀಸರು ಆಸ್ಪತ್ರೆಗೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.

Ad
Ad
Nk Channel Final 21 09 2023
Ad