ಚೆನ್ನೈ: ಇತ್ತೀಚೆಗೆ ಅತ್ಯಾಚಾರದ ಪ್ರಕರಣ ಹೆಚ್ಚಾಗಿ ಕೇಳಿಬರುತ್ತಿದೆ. ಇದೀಗ ಇಂತಹದ್ದೇ ಒಂದು ಘಟನೆ ಕೇಳಿ ಬಂದಿದ್ದು ನೀಚ 60 ವರ್ಷದ ಅರ್ಚಕನೋರ್ವ 5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದಾನೆ. ತಮಿಳುನಾಡಿನ ಥೇಣಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಪ್ರಸಾದ ನೀಡುವ ನೆಪದಲ್ಲಿ ಅರ್ಚಕ 5 ವರ್ಷದ ಮಗು ಹಾಗೂ ಆಕೆಯ ಸ್ನೇಹಿತರನ್ನು ದೇವಸ್ಥಾನಕ್ಕೆ ಕರೆದೊಯ್ದಿದ್ದರು.
ತಿಲಗರ್ ಎಂಬ ಅರ್ಚಕ ದೇವಸ್ಥಾನದ ಹೊರಗೆ ಆಟವಾಡುತ್ತಿದ್ದ ಮಕ್ಕಳಿಗೆ ಪ್ರಸಾದ ನೀಡುವುದಾಗಿ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದಾರೆ. ಆಗ ಅವರು 5 ವರ್ಷದ ಬಾಲಕಿಯ ಮೇಲೆ ಹಲ್ಲೆ ನಡೆಸಿ, ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ವರದಿಯಾಗಿದೆ. ಮನೆಗೆ ಹಿಂದಿರುಗಿದ ನಂತರ, ಆ ಹುಡುಗಿ ಧೈರ್ಯದಿಂದ ತನ್ನ ಹೆತ್ತವರಿಗೆ ಈ ಭಯಾನಕ ಘಟನೆಯನ್ನು ಹೇಳಿದಳು. ಬಳಿಕ ಊರಿನವರು ಆ ಅರ್ಚಕನನ್ನು ಹೊಡೆಯಲು ದೇವಸ್ಥಾನದ ಬಳಿ ಜಮಾಯಿಸಿದರು.
ಇದರಿಂದ ಆತಂಕಗೊಂಡ ಅರ್ಚಕ ತನ್ನನ್ನು ರಕ್ಷಿಸಿಕೊಳ್ಳಲು ದೇವಸ್ಥಾನದ ಒಳಗಿನಿಂದ ಬಾಗಿಲನ್ನು ಲಾಕ್ ಮಾಡಿಕೊಂಡಿದ್ದಾರೆ. ಈ ವಿಚಾರ ತಿಳಿದ ಗ್ರಾಮಸ್ಥರು ಒಗ್ಗಟ್ಟಾಗಿ ಬಂದು ಆತನಿಗೆ ಥಳಿಸಲು ಸಜ್ಜಾಗಿದ್ದಾರೆ. ಬಳಿಕ ಪೊಲೀಸರು ಬಂದು ಆ ಅರ್ಚಕನನ್ನು ವಶಕ್ಕೆ ಪಡೆದಿದ್ದಾರೆ.
तमिलनाडु में 70 वर्षीय पुजारी ने 5 साल की मासूम बच्ची को मिठाई के बहाने मंदिर मंदिर में बुलाकर यौन उत्पीड़न किया।
Hello झूठा, दलाल @AmanChopra_ इस खबर को दिखाओ अपने चैनल पर । pic.twitter.com/emRKBkzuBy
— Kavish Aziz (@azizkavish) September 27, 2024