Ad

ಮದುವೆಯಾದ ಬೆನ್ನಲ್ಲೇ ದಂಪತಿ ಮಧ್ಯೆ ಜಗಳ: ಸಾವಿನಲ್ಲಿ ಅಂತ್ಯ!

ಹೊಸದಾಗಿ ಮದುವೆಯಾದ ನವ ದಂಪತಿ ನಡುವೆ ನಡೆದ ಗಲಾಟೆ ಸಾವಿನಲ್ಲಿ ಅಂತ್ಯ ಕಂಡಿರುವ ಘಟನೆ ಕೆಜಿಎಫ್ ತಾಲೂಕಿನ ಚಂಬರಸನಹಳ್ಳಿಯಲ್ಲಿ ನಡೆದಿದೆ.

ಕೋಲಾರ: ಹೊಸದಾಗಿ ಮದುವೆಯಾದ ನವ ದಂಪತಿ ನಡುವೆ ನಡೆದ ಗಲಾಟೆ ಸಾವಿನಲ್ಲಿ ಅಂತ್ಯ ಕಂಡಿರುವ ಘಟನೆ ಕೆಜಿಎಫ್ ತಾಲೂಕಿನ ಚಂಬರಸನಹಳ್ಳಿಯಲ್ಲಿ ನಡೆದಿದೆ.

ಲಿಖಿತಶ್ರೀ (20) ಹಾಗೂ ನವೀನ್ (29) ಮೃತ ದುರ್ದೈವಿಗಳು. ಕೆಜಿಎಫ್ ತಾಲೂಕಿನ ಚಂಬರಸನಹಳ್ಳಿ ಗ್ರಾಮದ ನವೀನ್, ಬೈನಪಲ್ಲಿಯ ಲಿಖಿತಶ್ರೀ ಪ್ರೀತಿಸಿ ಎರಡೂ ಕುಟುಂಬದವರನ್ನು ಒಪ್ಪಿಸಿ ನಿನ್ನೆ ಮದುವೆಯಾಗಿದ್ದರು.

ಮದುವೆ ಮುಗಿದ ಬಳಿಕ ಇಬ್ಬರೂ ರೂಮಿಗೆ ಹೋಗಿದ್ದಾರೆ. ಅಲ್ಲಿ ಅದೇನಾಯ್ತೋ ಗೊತ್ತಿಲ್ಲ, ನವ ದಂಪತಿ ಮಧ್ಯೆ ಜಗಳ ಆರಂಭವಾಗಿದೆ. ಇದೇ ಕೋಪದಲ್ಲಿದ್ದ ಇಬ್ಬರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಪರಿಣಾಮ ಇಬ್ಬರೂ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ.

ಆ ಕೂಡಲೇ ಅವರನ್ನು ಕೋಲಾರದ ಅರ್.ಎಲ್. ಜಾಲಪ್ಪ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ವಧು ಮೃತಪಟ್ಟಿದ್ದಳು. ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆಂದು ವರನನ್ನು ರಾತ್ರಿ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ನವೀನ್ ಮೃತಪಟ್ಟಿದ್ದಾನೆ.

Ad
Ad
Nk Channel Final 21 09 2023