ಚಂಡೀಗಢ: ಪಂಜಾಬ್‌ನ ಚಂಡೀಗಢ ಕೋರ್ಟ್‌ನಲ್ಲಿ ಮಾಜಿ ಪೊಲೀಸ್ ಅಧಿಕಾರಿಯೊಬ್ಬರು ನೀರಾವರಿ ಇಲಾಖೆಯಲ್ಲಿ ಐಆರ್‌ಎಸ್ ಅಧಿಕಾರಿಯಾಗಿರುವ ವ್ಯಕ್ತಿಯೊಬ್ಬರ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ.ಮೃತರನ್ನು ಹರ್‌ಪ್ರೀತ್ ಸಿಂಗ್ ಎಂದು ಗುರುತಿಸಿದರೆ, ಕೊಲೆ ಆರೋಪಿಯನ್ನು ಮಾಲ್ವಿಂದರ್ ಸಿಂಗ್ ಸಿಧು ಎಂಬುದಾಗಿ ಗುರುತಿಸಲಾಗಿದೆ. ಮಾಲ್ವಿಂದರ್ ಸಿಂಗ್‌ಗೆ ಹರ್‌ಪ್ರೀತ್ ಸಿಂಗ್ ಅಳಿಯ (ಮಗಳ ಗಂಡ) ಆಗಬೇಕು ಎಂಬ ಸಂಗತಿಯು ಬಳಿಕ ಬಯಲಾಗಿದೆ.
ಮಾಲ್ವಿಂದರ್ ಸಿಂಗ್ ಹಾಗೂ ಹರ್‌ಪ್ರೀತ್ ಸಿಂಗ್ ಮಧ್ಯೆ ಕೌಟುಂಬಿಕ ಸಮಸ್ಯೆ, ಕಂದಕ ಉಂಟಾಗಿತ್ತು. ಹಾಗಾಗಿ, ಅವರು ನ್ಯಾಯಾಲಯ ಮೆಟ್ಟಿಲೇರಿದ್ದರು. ಹಾಗಾಗಿ, ಇಬ್ಬರೂ ಕೌಟುಂಬಿಕ ನ್ಯಾಯಾಲಯಕ್ಕೆ ತೆರಳಿದ್ದರು. ಇದೆ ವೇಳೆ ಇಬ್ಬರ ನಡುವೆ ವಾಗ್‌ವಾದ ನಡೆದಿತ್ತು. ಆಗ, ಮಾಲ್ವಿಂದರ್ ಸಿಂಗ್, ಶೌಚಾಲಯಕ್ಕೆ ಹೋಗಿಬರುತ್ತೇನೆ ಎಂದು ಕೋಣೆಯಿಂದ ಹೊರಬಂದರು. ಇದೇ ವೇಳೆ ಮಾವನಿಗೆ ದಾರಿ ತೋರಿಸುತ್ತೇನೆ ಎಂದು ಹರ್‌ಪ್ರೀತ್ ಸಿಂಗ್ ಕೂಡ ಹೊರಬಂದರು. ಇದಾದ ಬಳಿಕ ಐದು ಬಾರಿ ಗುಂಡು ಹಾರಿಸಿದ ಸದ್ದು ಕೇಳಿದ ಕಾರಣ ಇಡೀ ಕೋರ್ಟ್‌ನಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಯಿತು.