Bengaluru 22°C
Ad

ಕುಖ್ಯಾತ ರೌಡಿಶೀಟರ್‌ನನ್ನು ಬಂಧಿಸಿದ ಪೊಲೀಸರು; ಕಾರ್ಯಚರಣೆ ವೇಳೆ ಮಚ್ಚಿನಿಂದ ಹಲ್ಲೆಗೈದ ದಾವೂದ್

ಕೊಲೆ ಸೇರಿದಂತೆ ಹಲವು ಅಪರಾಧಗಳಲ್ಲಿ ಭಾಗಿಯಾದ ಕುಖ್ಯಾತ ರೌಡಿಶೀಟರ್‌ನನ್ನು ಸಿಸಿಬಿ ಪೊಲೀಸರು ಹೆಡೆಮುರಿಕಟ್ಟಿದ್ದಾರೆ.

ಉಳ್ಳಾಲ: ಕೊಲೆ ಸೇರಿದಂತೆ ಹಲವು ಅಪರಾಧಗಳಲ್ಲಿ ಭಾಗಿಯಾದ ಕುಖ್ಯಾತ ರೌಡಿಶೀಟರ್‌ನನ್ನು ಸಿಸಿಬಿ ಪೊಲೀಸರು ಹೆಡೆಮುರಿಕಟ್ಟಿದ್ದಾರೆ. ಉಳ್ಳಾಲದ ಧರ್ಮನಗರ ನಿವಾಸಿ ದಾವೂದ್ (43)ನನ್ನು ಮಂಗಳೂರು ಸಿಸಿಬಿ ಪೊಲೀಸರ ತಂಡವು ನ.22ರ ಸಂಜೆ ಬಂಧಿಸಿದ್ದಾರೆ.

Ad

ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಶೀಟರ್, ತಲಪಾಡಿ-ದೇವಿಪುರ ರಸ್ತೆ ಬಳಿ ಪ್ರತಿಸ್ಪರ್ಧಿ ಗ್ಯಾಂಗ್ ಸದಸ್ಯರ ವಿರುದ್ಧ ಅಪರಾಧ ಎಸಗಲು ಸಂಚು ರೂಪಿಸುತ್ತಿದ್ದ ವೇಳೆ ಬಂಧಿಸಲಾಗಿದೆ.  ಖಚಿತ ಮಾಹಿತಿ ಮೇರೆಗೆ ಪಿಎಸ್ ಐ ನರೇಂದ್ರ ನೇತೃತ್ವದ ಸಿಸಿಬಿ ತಂಡ ದಾವೂದ್ ನನ್ನು ಬಂಧಿಸಲು ಮುಂದಾಗಿದೆ. ಬಂಧನ ಕಾರ್ಯಾಚರಣೆ ವೇಳೆ ದಾವೂದ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.

Ad

ಅಧಿಕಾರಿಗಳ ಮೇಲೆಯೇ ಮಚ್ಚಿನಿಂದ ಹಲ್ಲೆ ನಡೆಸಿ ಎಸ್ಕೇಪ್ ಆಗಲು ಮುಂದಾಗಿದ್ದಾನೆ. ಹಲ್ಲೆಯಿಂದ ಪಿಎಸ್ ಐ ನರೇಂದ್ರ ಮತ್ತು ಇತರ ಸಿಬ್ಬಂದಿಗೆ ಗಾಯಗಳಾಗಿವೆ. ದಾಳಿಯ ಹೊರತಾಗಿಯೂ ಪೊಲೀಸ್ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಮುಂದಿನ ಕ್ರಮಕ್ಕಾಗಿ ದಾವುದ್‌ನನ್ನು ಉಳ್ಳಾಲ ಪೊಲೀಸ್ ಠಾಣೆಗೆ ಹಸ್ತಾಂತರಿಸಿದೆ.

Ad

ದಾವೂದ್ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಎಸ್ ಐ ನರೇಂದ್ರ ಅವರ ದೂರಿನ ಮೇರೆಗೆ ಆರೋಪಿ ದಾವುದ್ ವಿರುದ್ಧ ಸೆಕ್ಷನ್ 352, 109(1), 121(1), 121(2), 115(2), 132, 3(5), ಮತ್ತು 351(1) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

Ad

ದಾವೂದ್ ಕೊಲೆ ಸೇರಿದಂತೆ ಹಲವು ಅಪರಾಧಗಳಲ್ಲಿ ಭಾಗಿಯಾಗಿರುತ್ತಾನೆ. ದಾವೂದ್ ಉಳ್ಳಾಲ, ಮಂಗಳೂರು ದಕ್ಷಿಣ ಮತ್ತು ಬಜ್ಪೆ ಸೇರಿದಂತೆ ಇತರ ಸ್ಥಳಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾನೆ.

Ad
Ad
Ad
Nk Channel Final 21 09 2023