Bengaluru 27°C

ಮಗನನ್ನೇ ಕ್ರೂರವಾಗಿ ಥಳಿಸಿ ಕೊಂದು, ಸುಟ್ಟು ಹಾಕಿ ಕೊಳಕ್ಕೆ ಎಸೆದ ದುಷ್ಟ ಪೋಷಕರು

ಕರೀಂಗಂಜ್:  ಇಲ್ಲೊಂದು ಕುಟುಂಬ ಮಾನಸಿಕ ಅಸ್ವಸ್ಥನಾದ ಮಗನನ್ನು ತಮಗೆ ಹೊರೆಯಾದ ಎಂದು ಕೊಂದು ಹಾಕಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ಆಗಿದೆ.


ಮಾನಸಿಕ ಅಸ್ವಸ್ಥ ಯುವಕನನ್ನು ಪೋಷಕರು ಹಾಡಹಗಲೇ ನಿರ್ದಯವಾಗಿ ಕೊಂದ ಆಘಾತಕಾರಿ ಘಟನೆ ಅಸ್ಸಾಂನ ಕರೀಂಗಂಜ್ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ. ಈ ಘಟನೆಯನ್ನು ನೋಡುಗರು ವಿಡಿಯೊದಲ್ಲಿ ಸೆರೆಹಿಡಿದಿದ್ದಾರೆ. ಅದರಲ್ಲಿ ಯುವಕನ ತಾಯಿ ಅವನನ್ನು ಕೋಲುಗಳಿಂದ ಹೊಡೆಯುತ್ತಿದ್ದಾರೆ.


ಖುದ್ ಪುರಹುರಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, 32 ವರ್ಷದ ಸುಹೈಲ್ ಅಹಮ್ಮದ್ ಚೌಧರಿ ಬಲಿಪಶುವಾಗಿದ್ದು, ತಾಯಿ ದಿಲುವಾರಾ ಬೇಗಂ, ಚಿಕ್ಕಮ್ಮ ಹಸ್ನಾ ಬೇಗಂ ಮತ್ತು ತಂದೆ ಅಬ್ದುಲ್ ಶಾಹಿದ್ ಎಂಬುವವರು ಆತನನ್ನು ಕೋಲುಗಳಿಂದ ಹೊಡೆಯುತ್ತಿದ್ದಾರೆ ಎನ್ನಲಾಗಿದೆ. ನಂತರ ಇಷ್ಟಕ್ಕೆ ಸುಮ್ಮನಾಗದ ಪೋಷಕರು ಅವನನ್ನು ಒಂದು ಕೋಣೆಯಲ್ಲಿ ಬಂಧಿಸಿ ಸುಟ್ಟು ಹಾಕಿ ಶವವನ್ನು ಸ್ಥಳೀಯ ಕೊಳದಲ್ಲಿ ಎಸೆದಿದ್ದಾರೆ ಎನ್ನಲಾಗಿದೆ.


ಕುಟುಂಬಕ್ಕೆ ಆತ ಹೊರೆಯಾದ ಕಾರಣ ಕುಟುಂಬವು ಈ ರೀತಿ ಯುವಕನನ್ನು ಕೊಂದಿದೆ ಮತ್ತು ಸಂತ್ರಸ್ತ ಸಣ್ಣ ಕಳ್ಳತನ ಮತ್ತು ಇತರ ಅಪರಾಧಗಳಲ್ಲಿ ಭಾಗಿಯಾಗಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಮೃತ ಯುವಕನ ಶವ ಕೊಳದಲ್ಲಿ ತೇಲುತ್ತಿದ್ದ ಹಿನ್ನಲೆಯಲ್ಲಿ ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಕೊಳದಿಂದ ಶವವನ್ನು ವಶಪಡಿಸಿಕೊಂಡಿದ್ದಾರೆ.


Nk Channel Final 21 09 2023