Bengaluru 23°C
Ad

ಮಹಾಲಕ್ಷ್ಮಿಯನ್ನು ಕೊಂದು ಸ್ಮಶಾನದ ಬಳಿಯೇ ನೇಣಿಗೆ ಶರಣಾದ ಕಿಲ್ಲರ್

Mahalakshmi

ಬೆಂಗಳೂರು: ಸೆ. 21ರಂದು ನಗರದ ವೈಯಾಲಿಕಾವಲ್ ನ ಪೈಪ್ ಲೈನ್ ರಸ್ತೆಯ ಮನೆಯೊಂದರ ಫ್ರಿಡ್ಜ್ ನಲ್ಲಿ ನೇಪಾಳ ಮೂಲದ ಮಹಾಲಕ್ಷ್ಮಿ ಎಂಬಾಕೆಯ ದೇಹ ತುಂಡು ತುಂಡು ಮಾಡಿ ಬರ್ಬರವಾಗಿ ಹತ್ಯೆ ಮಾಡಿ ಇಡಲಾಗಿತ್ತು.

ಈ ಪ್ರಕರಣ ಕೈಗೆತ್ತಿಕೊಂಡ ವೈಯಾಲಿಕಾವಲ್ ಪೊಲೀಸರು ಹಲವು ಆಯಾಮದಲ್ಲಿ ತನಿಖೆ ಆರಂಭಿಸಿದ್ದರು. ಆದರೆ ಆರೋಪಿಯ ಪತ್ತೆ ಮಾಡಲು ಹೊರ ರಾಜ್ಯಕ್ಕೆ ಹೋದ ಪೊಲೀಸರಿಗೆ ಆತ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ತಿಳಿದು ಬಂದಿದೆ. ಜೊತೆಗೆ ಡೆತ್ ನೋಟ್ ಪತ್ತೆಯಾಗಿದೆ. ಈ ಡೆತ್ ನೋಟ್​ನಲ್ಲಿ ತಾನೇ ಕೊಲೆ ಮಾಡಿರೋದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ಯಾವ ರೀತಿ ಕೊಲೆ ಮಾಡಿದ? ಏಕೆ ಕೊಲೆ ಮಾಡಿದ ಎಂಬ ವಿಚಾರಗಳ ಬಗ್ಗೆ ಮೃತ ಆರೋಪಿ ಸತ್ಯ ಬಿಚ್ಚಿಟ್ಟಿದ್ದಾನೆ.

ಮಹಿಳೆ ಕೊಲೆ ಪ್ರಕರಣದಲ್ಲಿ ಒರಿಸ್ಸಾ ಮೂಲದ ಮುಕ್ತಿ ರಂಜನ್ ರಾಯ್ ಎಂಬಾತನ ಮೇಲೆ ಪೊಲೀಸರಿಗೆ ಅನುಮಾನ ಮೂಡಿತ್ತು. ಈತನೇ ಈ ಕೃತ್ಯ ಎಸಗಿರೊ ಶಂಕೆ ವ್ಯಕ್ತವಾಗಿತ್ತು. ಆತನಿಗಾಗಿ ಹಲವು ಕಡೆ ಹುಡುಕಾಡಿದ್ದ ಪೊಲೀಸರಿಗೆ ಆತ ಓರಿಸ್ಸಾಗೆ ತೆರಳಿರೊ ಮಾಹಿತಿ ಸಿಕ್ಕಿತ್ತು. ಸಿಕ್ಕ ಮಾಹಿತಿ ಆಧರಿಸಿ ಒರಿಸ್ಸಾಗೆ ತೆರಳಿದ್ದ ಪೊಲೀಸರಿಗೆ ಈಗ ಶಾಕ್ ಆಗಿದ್ದು, ಮುಕ್ತಿ ರಂಜನ್ ರಾಯ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆರೋಪಿ ಬಳಿ ಸಿಕ್ಕಿರುವ ಡೈರಿಯಲ್ಲಿ ಡೆತ್ ನೋಟು ಪತ್ತೆಯಾಗಿದೆ. ರಂಜನ್ ಡೆತ್ ನೋಟ್ ಬರೆದಿಟ್ಟು ಸ್ಮಶಾನದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. “ವೈಯಕ್ತಿಕ ವಿಚಾರಗಳಿಗೆ ಆಕೆ ಜೊತೆ ಜಗಳವಾಯಿತು. ಆಗ ಆಕೆ ಹಲ್ಲೆ ನಡೆಸಿದಳು, ಇದರಿಂದ ಕೋಪಗೊಂಡು ಆಕೆಯನ್ನು ಕೊಂದೆ. ಆ ಬಳಿಕ 59 ಪೀಸ್ ಮಾಡಿ ಫ್ರಿಡ್ಜ್‌ನಲ್ಲಿ ಇರಿಸಿದ್ದೆ. ಆಕೆಯ ವರ್ತನೆಯಿಂದ ಬೇಸತ್ತು ಕೃತ್ಯ ಎಸಗಿದ್ದೇನೆ” ಎಂದು ಡೆತ್ ನೋಟ್​ನಲ್ಲಿ ಕೊಲೆ ಮಾಡಲು ಕಾರಣವೇನೆಂಬುದನ್ನು ರಂಜನ್ ಬಹಿರಂಗಪಡಿಸಿದ್ದಾನೆ.

ಈ ಮುಕ್ತಿ ರಂಜನ್ ರಾಯ್​ ಬೇರೆ ಯಾರು ಅಲ್ಲ. ಮಹಾಲಕ್ಷ್ಮೀ ಕೆಲಸ ಮಾಡ್ತಿದ್ದ ಮಲ್ಲೇಶ್ವರಂ ಫ್ಯಾಶನ್ ಫ್ಯಾಕ್ಟರಿಯ ಟೀಮ್ ಹೆಡ್ ಆಗಿದ್ದ. ತಮ್ಮನ ಜೊತೆಯಲ್ಲಿ ಹೆಬ್ಬಗೋಡಿಯಲ್ಲಿ ವಾಸವಾಗಿದ್ದ. ಇದೇ ವೇಳೆ ಸಹೋದ್ಯೋಗಿ ಮಹಾಲಕ್ಷ್ಮೀ ಜೊತೆ ಪ್ರೀತಿಯಾಗಿದೆ. ಸೆ. 1ರಂದು ಎಥಾಪ್ರಕಾರ ಮಹಾಲಕ್ಷ್ಮೀ ಮತ್ತು ಮುಕ್ತಿ ಇಬ್ಬರೂ ಕೆಲಸಕ್ಕೆ ಹಾಜರಾಗಿದ್ರು. ಆದ್ರೆ, ಸೆಪ್ಟೆಂಬರ್​ 2ರಂದು ಮಹಾಲಕ್ಷ್ಮಿ ವೀಕ್ ಆಫ್​ ತೆಗೆದುಕೊಂಡಿದ್ಲು. ಅವತ್ತು ನೆಲಮಂಗಲದ ತಾಯಿ ಮನೆಗೆ ಬರೋದಾಗಿ ಹೇಳಿದ್ಲಂತೆ. ಆದ್ರೆ, ಅಂದು ಮಹಾಲಕ್ಷ್ಮೀ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ. ಅಂದೇ ಮುಕ್ತಿ ರಾಯ್ ಮಹಾಲಕ್ಷ್ಮೀಯನ್ನ ಕೊಂದು ಪರಾರಿಯಾಗಿದ್ದ.

Ad
Ad
Nk Channel Final 21 09 2023