Bengaluru 22°C
Ad

ಮಹಾಲಕ್ಷ್ಮೀ ಕೊಲೆ : ಬರ್ಬರ ಕೊಲೆಗೆ ಕಾರಣ ಆಕೆ ಸ್ನೇಹಿತ​ ! ಸ್ಫೋಟಕ ಮಾಹಿತಿ ಬಹಿರಂಗ

ನಿನ್ನೆ ವೈಯಾಲಿಕಾವಲ್ ಮನೆಯ ಫಸ್ಟ್ ಫ್ಲೋರ್‌ನಲ್ಲಿ ಮರ್ಡ*ರ್ ವಾಸನೆ ಅಕ್ಕಪಕ್ಕದ ಮನೆಯವರ ಮೂಗಿಗೆ ಬಡಿದಿತ್ತು. ನೆರೆಮನೆಯವರು ಮಹಾಲಕ್ಷ್ಮೀ ಸಂಬಂಧಿಕರಿಗೆ ವಿಷಯ ಮುಟ್ಟಿಸಿದ್ದರು. ಇದಾದ ಬಳಿಕ ಸ್ಥಳಕ್ಕೆ ಬಂದ ಪೊಲೀಸರಿಗೆ ಇಂತಹದೊಂದು ಮರ್ಡ*ರ್ ಊಹಿಸಿಕೊಳ್ಳೋದು ಸಾಧ್ಯವಿರಲಿಲ್ಲ.

ಬೆಂಗಳೂರು;  ನಿನ್ನೆ ವೈಯಾಲಿಕಾವಲ್ ಮನೆಯ ಫಸ್ಟ್ ಫ್ಲೋರ್‌ನಲ್ಲಿ ಮರ್ಡ*ರ್ ವಾಸನೆ ಅಕ್ಕಪಕ್ಕದ ಮನೆಯವರ ಮೂಗಿಗೆ ಬಡಿದಿತ್ತು. ನೆರೆಮನೆಯವರು ಮಹಾಲಕ್ಷ್ಮೀ ಸಂಬಂಧಿಕರಿಗೆ ವಿಷಯ ಮುಟ್ಟಿಸಿದ್ದರು. ಇದಾದ ಬಳಿಕ ಸ್ಥಳಕ್ಕೆ ಬಂದ ಪೊಲೀಸರಿಗೆ ಇಂತಹದೊಂದು ಮರ್ಡ*ರ್ ಊಹಿಸಿಕೊಳ್ಳೋದು ಸಾಧ್ಯವಿರಲಿಲ್ಲ.

ಇದೀಗ ಈ ಪ್ರಕರಣದ ಬೆನ್ನತ್ತಿರುವ ಪೊಲೀಸರು ಕುಟುಂಬಸ್ಥರು ನಾಲ್ವರ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಮುಕ್ತ, ಶಶಿಧರ್, ಸುನೀಲ್ ಮತ್ತು ಅಶ್ರಫ್ ಎಂಬುವರ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ​​ಮುಕ್ತ, ಶಶಿಧರ್ ಮತ್ತು ಸುನೀಲ್ ಮೃತ ಮಹಾಲಕ್ಷ್ಮಿಯ ಸಹೋದ್ಯೋಗಿಗಳು. ಉತ್ತರಾಖಂಡ್ ಮೂಲದ ಅಶ್ರಫ್ ಮಹಾಲಕ್ಷ್ಮಿ ಜೊತೆ ಸಲುಗೆಯಿಂದ ಇದ್ದನು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಮಹಾಲಕ್ಷ್ಮಿ ತಾನು ಕೆಲಸ ಮಾಡುವ ಕಂಪನಿಯಲ್ಲಿ ಜಗಳ ಮಾಡಿಕೊಂಡಿದ್ದಳು ಎಂದು ಮಾಹಿತಿ ನೀಡಿದ್ದಾರೆ.

ಮಹಾಲಕ್ಷ್ಮೀ ಸ್ನೇಹಿತ ಅಶ್ರಫ್‌ ಮೇಲೆ ನನಗೆ ಅನುಮಾನ ಇದೆ. ಈ ಹಿಂದೆ ನಾನು ನೆಲಮಂಗಲದಲ್ಲಿ ಅಶ್ರಫ್‌ ವಿರುದ್ಧ ದೂರು ಕೊಟ್ಟಿದ್ದೆ. ಅಶ್ರಫ್ ಉತ್ತರಾಖಂಡ್ ಮೂಲದವನು. ಒಂದು ದಿನ ಮಹಾಲಕ್ಷ್ಮೀ ಮೊಬೈಲ್​ ಚೆಕ್ ಮಾಡಿದಾಗ ಅಶ್ರಫ್‌ ಜೊತೆ ಸಂಪರ್ಕದಲ್ಲಿರುವುದು ತಿಳಿಯಿತು ಎಂದು ಕೊಲೆಯಾದ ಮಹಾಲಕ್ಷ್ಮೀ ಪತಿ ಹೇಮಂತ್ ದಾಸ್ ಹೇಳಿದ್ದಾರೆ.

Ad
Ad
Nk Channel Final 21 09 2023