Bengaluru 22°C
Ad

ಐಫೋನ್‌ಗಾಗಿ ಫ್ಲಿಪ್‌ಕಾರ್ಟ್‌ ಡೆಲಿವರಿ ಏಜೆಂಟ್‌ನ ಹತ್ಯೆ!

ಆನ್‌ಲೈನ್‌ ಮಾರುಕಟ್ಟೆ ಫ್ಲಿಪ್‌ಕಾರ್ಟ್‌ನಲ್ಲಿ ಐಫೋನನ್ನು ಕ್ಯಾಶ್ ಆನ್‌ ಡೆಲಿವರಿ ಹೆಸರಿನಲ್ಲಿ ಆರ್ಡರ್ ಮಾಡಿದ ಯುವಕನೋರ್ವ ಇದನ್ನು ನೀಡಲು ಬಂದ ಡೆಲಿವರಿ ಬಾಯನ್ನು ಹತ್ಯೆ ಮಾಡಿದ್ದಾನೆ. ಒಂದೂವರೆ ಲಕ್ಷ ಮೌಲ್ಯದ ಈ ಐಫೋನ್ ಅನ್ನು ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿದ ಪಾಪಿ, ಈ ಐಫೋನ್‌ನ್ನು ಮನೆಗೆ ಪೂರೈಸಿದ ಡೆಲಿವರಿ ಬಾಯ್‌ ಜೀವ ತೆಗೆದಿದ್ದಾನೆ. ಆತನನ್ನು ಹತ್ಯೆ ಮಾಡಿ ಬಳಿಕ ಶವವನ್ನು ಸಮೀಪದ ಇಂದಿರಾ ಕಾಲುವೆಗೆ ಹಾಕಿದ್ದಾನೆ. ಕಾಲುವೆಗೆ ಹಾಕಿದ ಆತನ ಶವಕ್ಕಾಗಿ ಪೊಲೀಸರು ಈಗ ಶೋಧ ನಡೆಸುತ್ತಿದ್ದಾರೆ. 

ಈ ಬಗ್ಗೆ ಮಾತನಾಡಿದ ಡೆಪ್ಯುಟಿ ಪೊಲೀಸ್ ಕಮೀಷನರ್‌ ಶಶಾಂಕ್ ಸಿಂಗ್, ಗಜಾನನ್ ಎಂಬ ಆರೋಪಿ ಒಂದೂವರೆ ಲಕ್ಷ ಮೌಲ್ಯದ ಐಫೋನ್ ಅನ್ನು ಸಿಒಡಿ ಆಪ್ಷನ್ ಮೂಲಕ ಫ್ಲಿಪ್‌ಕಾರ್ಟ್‌ನಲ್ಲಿ ಆರ್ಡರ್ ಮಾಡಿದ್ದ. ಹೀಗೆ ಬಂದ ಐಫೋನ್‌ ಅನ್ನು ಡೆಲಿವರಿ ಮಾಡುವ ಕೆಲಸ ಮಾಡುತ್ತಿದ್ದ ಭರತ್ ಸಾಹು ಎಂಬುವವರು ಗಜಾನನ ಎಂಬಾತನ ಮನೆಗೆ ತಲುಪಿಸುವುದಕ್ಕಾಗಿ ತೆಗೆದುಕೊಂಡು ಹೋಗಿದ್ದರು.  ಈ ವೇಳೆ ಡೆಲಿವರಿ ಏಜೆಂಟ್ ಭರತ್ ಸಾಹು ಅವರ ಮೇಲೆ ಹಲ್ಲೆ ಮಾಡಿದ ಗಜಾನನ ಹಾಗೂ ಆತನ ಗ್ಯಾಂಗ್ ಭರತ್ ಅವರನ್ನು ಕೊಂದು ಶವವನ್ನು ಇಂದಿರಾ ಕಾಲುವೆಗೆ ಎಸೆದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಸೆಪ್ಟೆಂಬರ್ 23ರಂದು ನಿಶಾಂತ್‌ಗಂಜ್ ನಿವಾಸಿಯಾದ ಭರತ್ ಸಾಹು ಅವರು ಈ ಐ ಫೋನ್ ಡೆಲಿವರಿಗೆ ತೆರಳಿದ್ದರು. ಈ ವೇಳೆ ಆತನನ್ನು ಉಸಿರುಕಟ್ಟಿಸಿ ಕೊಂದ ದುಷ್ಕರ್ಮಿಗಳು ಶವವನ್ನು ಚೀಲದಲ್ಲಿ ತುಂಬಿಸಿ ಕಾಲುವೆಗೆ ಎಸೆದಿದ್ದಾರೆ. ಇತ್ತ ಭರತ್ ಸಾಹು ಅವರು ಎರಡು ದಿನವಾದರೂ ಮನೆಗೆ ಬಾರದ ಹಿನ್ನೆಲೆ ಸೆಪ್ಟೆಂಬರ್ 25ರಂದು ಭರತ್ ಸಾಹು ಅವರ ಕುಟುಂಬದವರು ನಾಪತ್ತೆ ಪ್ರಕರಣ ದಾಖಲಿಸಿದ್ದರು.

Ad
Ad
Nk Channel Final 21 09 2023