Bengaluru 22°C
Ad

ಮಹಿಳಾ ಪೊಲೀಸನ್ನು ಕೊಲೆಗೈದ ಪತಿ

ಕಾಸರಗೋಡು ಚಂದೇರ ಪೊಲೀಸ್ ಠಾಣೆ ಯ ಮಹಿಳಾ ಪೊಲೀಸ್ ದಿವ್ಯಶ್ರೀ (೩೫) ಕೊಲೆ ಗೀಡಾದವರು. ಪತಿ ರಾಜೇಶ್ ಕೃತ್ಯ ನಡೆಸಿ ಪರಾರಿಯಾಗಿದ್ದಾನೆ.

ಕಾಸರಗೋಡು: ಕಾಸರಗೋಡು ಚಂದೇರ ಪೊಲೀಸ್ ಠಾಣೆ ಯ ಮಹಿಳಾ ಪೊಲೀಸ್ ದಿವ್ಯಶ್ರೀ (೩೫) ಕೊಲೆ ಗೀಡಾದವರು. ಪತಿ ರಾಜೇಶ್ ಕೃತ್ಯ ನಡೆಸಿ ಪರಾರಿಯಾಗಿದ್ದಾನೆ.

Ad

ಗಂಭೀರ ಗಾಯ ಗೊಂಡ ದಿವ್ಯ ಶ್ರೀ ರನ್ನು ಪಯ್ಯ ನ್ನೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಜೀವ ಉಳಿಸಲಾಗಲಿಲ್ಲ. ದಿವ್ಯಶ್ರೀ ಹಾಗೂ ಆಟೋ ಚಾಲಕ ನಾಗಿರುವ ರಾಜೇಶ್ ನಡುವೆ ದಾಂಪತ್ಯ ಸಮಸ್ಯೆ ಉಂಟಾಗಿತ್ತು .ಇದರಿಂದ ಕೆಲ ದಿನ ಗಳಿಂದ ಇಬ್ಬರೂ ಬೇರ್ಪಟ್ಟು ವಾಸವಾಗಿದ್ದರು ಎನ್ನಲಾಗಿದೆ.

Ad

ಸಂಜೆ ತಲವಾರು ತೆಗೆದುಕೊಂಡು ಬಂದ ರಾಜೇಶ್ ದಿವ್ಯಶ್ರೀ ಮೇಲೆ ಹಲ್ಲೆ ನಡೆಸಿದ್ದು, ಮುಖ ಹಾಗೂ ಕುತ್ತಿಗೆ ಗೆ ಗಂಭೀರ ಗಾಯ ಗೊಂಡಿದ್ದರು. ತಡೆಯಲು ಬಂದ ದಿವ್ಯಶ್ರೀ ತಂದೆ ವಾಸು ಅವರಿಗೆ ಗಾಯಗಳಾಗಿವೆ. ಬೊಬ್ಬೆ ಕೇಳಿ ಪರಿಸರ ವಾಸಿಗಳು ದಾವಿಸಿ ಬಂದಾಗ ರಾಜೇಶ್ ಪರಾರಿಯಾಗಿದ್ದನು. ಪಯ್ಯನ್ನೂರು ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Ad
Ad
Ad
Nk Channel Final 21 09 2023