ಮೈಸೂರು : ಪತಿಯಿಂದಲೇ ಪತ್ನಿಯ ಕೊಲೆಯಾಗಿರುವ ಘಟನೆ ಮೈಸೂರಿನ ಹೆಬ್ಬಾಳದ ಲಕ್ಷ್ಮಿಕಾಂತ ನಗರದಲ್ಲಿ ನಡೆದಿದೆ. ಕತ್ತು ಕೊಯ್ದು ಪತ್ನಿಯನ್ನು ಪಾಪಿ ಪತಿ ಕೊಲೆ ಮಾಡಿದ್ದಾನೆ. ಶೃತಿ ಕೊಲೆಯಾದ ಗೃಹಿಣಿ.
4 ವರ್ಷದ ಹಿಂದೆ ಪ್ರೀತಿಸಿ ದಂಪತಿ ಅಂತರ್ಜಾತಿ ವಿವಾಹವಾಗಿದ್ದರು. ಪತ್ನಿಯನ್ನ ಕೊಲೆ ಮಾಡಿ ಪತಿ ಅರುಣ್ ಪೊಲೀಸ್‌ರಿಗೆ ಶರಣಾಗಿದ್ದಾನೆ. ಜಾತಿ ವಿಚಾರಕ್ಕೆ ಆಗಾಗ ಅರುಣ್ ಹಾಗೂ ಕುಟುಂಬಸ್ಥರು ಜಗಳವಾಡುತಿದ್ದರು ಎಂದು ಶೃತಿ ಪೋಷಕರು ಆರೋಪ ಮಾಡಿದ್ದಾರೆ. ಘಟನೆ ಸ್ಥಳಕ್ಕೆ ಹೆಬ್ಬಾಳ ಪೊಲೀಸ್ ಭೇಟಿ ಪರಿಶೀಲನೆ ನಡೆಸಿದ್ದಾರೆ.