ಸ್ವಿಟ್ಜರ್ಲೆಂಡ್‌ನ ಮಾಡೆಲ್ ಹಾಗೂ ಮಿಸ್ ಫೈನಲಿಸ್ಟ್ ಆಗಿದ್ದ ಸುಂದರಿಯೋರ್ವರನ್ನು ಅವರ ಪತಿಯೇ ಕತ್ತು ಹಿಸುಕಿ ಕೊಂದಿದ್ದಾರೆ. ಸುಂದರಿ ಪತ್ನಿಯ ಹತ್ಯೆಯ ಬಳಿಕ ಆರೋಪಿ ಪತಿ, ಮೃತದೇಹವನ್ನು ತುಂಡು ತುಂಡುಗಳಾಗಿ ಕತ್ತರಿಸಿ ಮಿಕ್ಸಿ ಜಾರಿಗೆ ಹಾಕಿ ಹುಡಿ ಹುಡಿ ಮಾಡಿದ್ದಾನೆ. ಕ್ರಿಶ್ಟಿನಾ ಜೊಕ್ಸಿಮೊವಿಕ್ ಕೊಲೆಯಾದ ಮಹಿಳೆ.
38 ವರ್ಷದ ಈ ಮಾಡೆಲ್ ಕ್ರಿಶ್ಟಿನಾ ಜೊಕ್ಸಿಮೊವಿಕ್ ಅವರ ಶವವು ಸ್ವಿಟ್ಚರ್ಲೆಂಡ್‌ನ ಬಿನ್ನಿನ್ಗೆನ್‌ನಲ್ಲಿರುವ ಅವರ ಮನೆಯ ಲ್ಯಾಂಡ್ರಿ ರೂಮ್‌ನಲ್ಲಿ ಫೆ.13 ರಂದು ಪತ್ತೆಯಾಗಿತ್ತು.
ಪತ್ನಿಯನ್ನು ಕೊಲೆ ಮಾಡಿದ ಪತಿ ಥಾಮಸ್ ಬಳಿಕ ಶವವನ್ನು ಗರಗಸ ಹಾಗೂ ಚಾಕುವಿನಿಂದ ಕತ್ತರಿಸಿ ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿದ್ದಾನೆ. ಬಳಿಕ ಮಿಕ್ಸಿ ಜಾರ್‌ಗೆ ಹಾಕಿ ಹುಡಿ ಮಾಡಿ ಅದಕ್ಕೆ ರಾಸಾಯನಿಕ ಸುರಿದು ಶವ ಪೂರ್ತಿಯಾಗಿ ಕರಗಿ ಹೋಗುವಂತೆ ಮಾಡಿದ್ದಾನೆ. ಈ ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರಿಗೆ ಕ್ರಿಶ್ಟಿನಾ ಅವರನ್ನು ಉಸಿರುಗಟ್ಟಿಸಿ ಹತ್ಯೆ ಮಾಡಲಾಗಿದೆ ಎಂಬುದು ಖಚಿತವಾಗಿತ್ತು.
ಆಕೆಯ 41 ವರ್ಷದ ಪತಿ ಥಾಮಸ್‌ನನ್ನು ನಂತರ ಬಂಧಿಸಿ ವಿಚಾರಣೆ ನಡೆಸಿದಾಗ ಆತ ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದ. ಆಕೆ ನನ್ನ ಮೇಲೆ ಚಾಕುವಿನಿಂದ ದಾಳಿಗೆ ಮುಂದಾದಳು ಈ ವೇಳೆ ನನ್ನನ್ನು ನಾನು ರಕ್ಷಿಸಿಕೊಳ್ಳುವ ವೇಳೆ ಆಕೆಯ ಹತ್ಯೆಯಾಗಿದೆ. ಆಕೆಯ ಸಾವಿನ ನಂತರ ಭಯಗೊಂಡ ನಾನು ಆಕೆಯ ದೇಹವನ್ನು ಛಿದ್ರಗೊಳಿಸಿದ್ದೇನೆ ಎಂದು ಆತ ಹೇಳಿಕೊಂಡಿದ್ದಾನೆ. ಹೀಗಾಗಿ ಪೊಲೀಸರು ನ್ಯಾಯಾಲಯಕ್ಕೆ ಆತನ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ್ದರು.