Bengaluru 23°C

ಪರ ಪುರಷನೊಂದಿಗೆ ಓಡಿಹೋಗಿದ್ದ ಹೆಂಡ್ತಿಯ ಶಿರಚ್ಛೇದ ಮಾಡಿದ ಪತಿ

ಪರಪುರಷನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಪತ್ನಿಯನ್ನು ಪತಿ ಬರ್ಬರವಾಗಿ ಹತ್ಯೆಗೈದು ಪೊಲೀಸರಿಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲ್ಲೂಕಿನ ಕಣಿಯನಹುಂಡಿಯಲ್ಲಿ ನಡೆದಿದೆ.

ಮೈಸೂರು: ಪರಪುರಷನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಪತ್ನಿಯನ್ನು ಪತಿ ಬರ್ಬರವಾಗಿ ಹತ್ಯೆಗೈದು ಪೊಲೀಸರಿಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲ್ಲೂಕಿನ ಕಣಿಯನಹುಂಡಿಯಲ್ಲಿ ನಡೆದಿದೆ.


ತೇಜು (26) ಪತಿಯಿಂದಲೇ ಕೊಲೆಯಾದ ಪತ್ನಿ. ಕಳೆದ ಏಳು ವರ್ಷಗಳ ಹಿಂದೆ ದೇವರಾಜ್ ಎನ್ನುವಾತ ಸಂಬಂಧಿಯಾಗಿದ್ದ ತೇಜಳನ್ನು ಮದುವೆಯಾಗಿದ್ದ. ಇಬ್ಬರಿಗೆ ಎರಡು ಮಕ್ಕಳು ಸಹ ಇವೆ. ಆದರೂ ತೇಜ ಪರ ಪುರಷನೊಂದಿಗೆ ಸಂಬಂಧ ಇಟ್ಟುಕೊಂಡಿದ್ದಳು. ಸಾಲದಕ್ಕೆ ಗಂಡ ಮಕ್ಕಳನ್ನು ಬಿಟ್ಟು ಪ್ರಿಯಕರನ ಜತೆ ಮನೆ ಬಿಟ್ಟು ಓಡಿಹೋಗಿದ್ದಳು.


ಬಳಿಕ ರಾಜೀ ಸಂದಾನ ಮಾಡಿ ವಾರದ ಹಿಂದೆ ಅಷ್ಟೇ ಪತಿ ದೇವರಾಜ್ ಪತ್ನಿಯನ್ನು ಮನೆ ಸೇರಿಸಿಕೊಂಡಿದ್ದ. ಆದರೂ ದೇವರಾಜ್ಗೆ ಊರಿನಲ್ಲಿ ತಲೆ ಎತ್ತಿ ಓಡಾಡದಂತಾಗಿದ್ದು, ಇದೇ ಕೋಪದಲ್ಲಿ ಹೆಂಡ್ತಿ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ಬಳಿಕ ತಾನೇ ಪೊಲೀಸರಿಗೆ ಶರಣಾಗಿದ್ದಾನೆ.


26 ವರ್ಷದ ತೇಜು ಹಾಗೂ ದೇವರಾಜ್ ಸಂಬಂಧಿಗಳಾಗಿದ್ದು, ಏಳು ವರ್ಷದ ಹಿಂದೆ ಅಷ್ಟೇ ಮದುವೆಯಾಗಿದ್ದರು. ದೇವರಾಜು ತೇಜು ದಂಪತಿಗೆ ಇಬ್ಬರು ಮಕ್ಕಳು ಸಹ ಇದ್ದರು. ಆದ್ರೆ, ತೇಜು ಬೇರೆ ವ್ಯಕ್ತಿ ಜೊತೆ ಲವ್ವಿಡವ್ವಿ ಇಟ್ಟುಕೊಂಡಿದ್ದು, ಬಳಿಕ ಗಂಡ ಹಾಗೂ ಮಕ್ಕಳನ್ನು ಬಿಟ್ಟು ಪ್ರಿಯಕರನೊಂದಿಗೆ ಮನೆ ಬಿಟ್ಟು ಓಡಿಹೋಗಿದ್ದಳು. ಇದರಿಂದ ಪತಿ ದೇವರಾಜ್ಗೆ ಊರಿನಲ್ಲಿ ಒಂದು ತರ ಮರ್ಯಾದೆ ಹೋದಂತಾಗಿತ್ತು.


ಕೊಲೆ ಮಾಡಿದ ದೇವರಾಜ್ ತಾನೇ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಈ ಸಂಬಂಧ ಹೆಚ್‌ಡಿ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಾಯಿ ಮಸಣ ಸೇರಿದ್ದರೆ, ತಂದೆ ಜೈಲು ಪಾಲಾಗಿದ್ದರಿಂದ ಎರಡು ಮಕ್ಕಳು ಅನಾಥವಾಗಿವೆ. ವಿಷಯ ತಿಳಿದು ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.


Nk Channel Final 21 09 2023