Bengaluru 20°C

ಹೋಟೆಲ್, ಬೇಕರಿ ಉದ್ಯಮದ ಮೇಲೆ ಹೆಚ್ಚುತ್ತಿರುವ ಅಪರಾಧ ಕೃತ್ಯಗಳ ಕುರಿತು ಜಿ ಕೆ ಶೆಟ್ಟಿ ಕಳವಳ

ರಾಜ್ಯದ ಎಲ್ಲೆಡೆ ಹೋಟೆಲ್ ಹಾಗೂ ಬೇಕರಿ ಉದ್ಯಮಿಗಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ, ಕೊಲೆ, ಹಲ್ಲೆ ಮತ್ತಿತರ ಅಪರಾಧಿ ಕೃತ್ಯಗಳ ಬಗ್ಗೆ ಕರ್ನಾಟಕ ರಾಜ್ಯ ಹೋಟೆಲುಗಳ ಸಂಘ ಕಳವಳ ವ್ಯಕ್ತಪಡಿಸಿದೆ

ರಾಜ್ಯದ ಎಲ್ಲೆಡೆ ಹೋಟೆಲ್ ಹಾಗೂ ಬೇಕರಿ ಉದ್ಯಮಿಗಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ, ಕೊಲೆ, ಹಲ್ಲೆ ಮತ್ತಿತರ ಅಪರಾಧಿ ಕೃತ್ಯಗಳ ಬಗ್ಗೆ ಕರ್ನಾಟಕ ರಾಜ್ಯ ಹೋಟೆಲುಗಳ ಸಂಘ ಕಳವಳ ವ್ಯಕ್ತಪಡಿಸಿದೆ. ಇಂತಹ ಅಪರಾಧಿ ಕೃತ್ಯಗಳನ್ನು ತಡೆಗಟ್ಟಲು ರಾಜ್ಯ ಸರಕಾರ ಹಾಗೂ ಪೊಲೀಸ್ ಇಲಾಖೆ ತಕ್ಷಣ ಕಠಿಣ ಕ್ರಮ ಕೈಗೊಳ್ಳುವಂತೆ ಸಂಘದ ಅಧ್ಯಕ್ಷ ಶ್ರೀ ಜಿ ಕೆ ಶೆಟ್ಟಿ ಆಗ್ರಹಿಸಿದ್ದಾರೆ.


ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಮಂಡ್ಯ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಕೆಆರ್‌ಎಸ್ ಪೊಲೀಸ್ ಠಾಣೆಯ ಕೂಗಳತೆಯ ದೂರದಲ್ಲಿ ಬೇಕರಿ ಮಾಲೀಕ ಚೇತನ್ ಅವರನ್ನು ಇತ್ತೀಚಿಗೆ ಹಾಡುಹಗಲೇ ರೌಡಿಗಳ ಗುಂಪೊಂದು ಮಾರಕಾಸ್ತçಗಳಿಂದ ಇರಿದು ಕೊಲೆ ಮಾಡಿರುವ ಘಟನೆ ಹೋಟೆಲ್ ಮಾಲೀಕರಲ್ಲಿ ಭೀತಿಯ ವಾತಾವರಣ ಸೃಷ್ಟಿಸಿದೆ ಎಂದು ತಿಳಿಸಿದ್ದಾರೆ.


ಮಾಧ್ಯಮಗಳಲ್ಲಿ ವರದಿಯಾಗುತ್ತಿರುವಂತೆ ಹೋಟೆಲ್ ಮತ್ತು ಬೇಕರಿ ಮಾಲೀಕರು ಹಫ್ತಾ ವಸೂಲಿಗೆ ಸುಲಭ ಬಲಿಪಶುಗಳಾಗುತ್ತಿದ್ದಾರೆ. ಒಂದೊಮ್ಮೆ ಹಫ್ತಾ ನೀಡದಿದ್ದರೆ ಅವರ ಮೇಲೆ ದೈಹಿಕ ಹಲ್ಲೆ, ಕೊಲೆ ಬೆದರಿಕೆ ಒಡ್ಡಲಾಗುತ್ತಿದೆ. ಕೊಲೆಯಂತಹ ಹೀನ ಕೃತ್ಯಗಳ ಮೂಲಕ ಹೋಟೆಲ್ ಮತ್ತು ಬೇಕರಿ ಮಾಲೀಕರಲ್ಲಿ ಭಯದ ವಾತಾವರಣ ಸೃಷ್ಟಿಸಲಾಗುತ್ತಿದೆ. ಇದು ಶಾಂತಿಯ ತೋಟ ಎಂದೇ ಮಹಾಕವಿ-ರಾಷ್ಟ್ರ ಕವಿ ಕುವೆಂಪು ಅವರಿಂದ ಕರೆಯಲ್ಪಟ್ಟಿರುವ ಕರ್ನಾಟಕಕ್ಕೆ ಕಳಂಕ ಎಂದು ಅವರು ಬಣ್ಣಿಸಿದ್ದಾರೆ.


ಹೋಟೆಲ್ ಮತ್ತು ಬೇಕರಿ ಮಾಲೀಕರು ಸ್ಥಳೀಯ ಸಂಸ್ಥೆಗಳಿಗೆ, ರಾಜ್ಯ ಸರಕಾರಕ್ಕೆ, ಕೇಂದ್ರ ಸರಕಾರಕ್ಕೆ ಟ್ರೇಡ್ ಲೈಸೆನ್ಸ್, ಜಿಎಸ್‌ಟಿ ಹೀಗೆ ನಾನಾ ರೂಪದಲ್ಲಿ ಪ್ರತಿವರ್ಷ ಕೋಟ್ಯಂತರ ರೂಪಾಯಿ ತೆರಿಗೆ ಕಟ್ಟುತ್ತಿದ್ದಾರೆ. ಆ ಮೂಲಕ ದೇಶ ಕಟ್ಟುವ ಕಾಯಕದಲ್ಲಿ ತೊಡಗಿದ್ದಾರೆ. ಸ್ಥಳೀಯವಾಗಿ ಪ್ರವಾಸೋದ್ಯಮ, ಉದ್ಯೋಗ ಸೃಷ್ಟಿ ಮೂಲಕ ದೇಶದ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ. ಆದರೂ ಅವರ ಜೀವಕ್ಕೆ ರಕ್ಷಣೆ ಇಲ್ಲದಿರುವುದು ನೋವಿನ ಸಂಗತಿ ಎಂದು ಅವರು ಬಣ್ಣಿಸಿದ್ದಾರೆ.


ಈ ಸಂಬಂಧ ರಾಜ್ಯದ ಗೌರವಾನ್ವಿತ ಗೃಹ ಸಚಿವರಾದ ಶ್ರೀ ಡಾ. ಜಿ ಪರಮೇಶ್ವರ ಆವರಿಗೆ ಅವರು ಮನವಿಯನ್ನು ಕೂಡಾ ಸಲ್ಲಿಸಲಿದ್ದಾರೆ. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ಖಾತರಿ ಪಡಿಸಬೇಕು. ಇನ್ನು ಮುಂದೆ ಇಂತಹ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಸಂಘದ ಎಲ್ಲಾ ಸದಸ್ಯರು ಕಪುö್ಪ ಪಟ್ಟಿ ಧರಿಸಿ ಪ್ರತಿಭಟಿಸಲಿದ್ದಾರೆ ಎಂದು ಶ್ರೀ ಶೆಟ್ಟಿಯವರು ತಿಳಿಸಿರುತ್ತಾರೆ. ಅಪರಾಧ ಕೃತ್ಯಕ್ಕೆ ಬಲಿಯಾದ ಬೇಕರಿ ಉದ್ಯಮಿಯ ನೆರವಿಗೆ ಸರಕಾರ ಧಾವಿಸಬೇಕು ಎಂದೂ ಅವರು ಸರಕಾರವನ್ನು ಕೋರಿದ್ದಾರೆ.


Nk Channel Final 21 09 2023