Ad

ಪುಣೆಯಲ್ಲಿ ಎನ್​ಸಿಪಿಯ ಮಾಜಿ ಕೌನ್ಸಿಲರ್​ನ ಗುಂಡಿಕ್ಕಿ ಹತ್ಯೆ

ಪುಣೆ: ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್ಸಿಪಿ) ಯೊಂದಿಗೆ ಸಂಯೋಜಿತವಾಗಿರುವ ಪುಣೆ ಮುನ್ಸಿಪಲ್ ಕಾರ್ಪೊರೇಷನ್ (ಪಿಎಂಸಿ) ಮಾಜಿ ಕಾರ್ಪೊರೇಟರ್ ವನರಾಜ್ ಸುರಯಕಾಂತ್ ಅಂಡೇಕರ್ ಅವರನ್ನು ಭಾನುವಾರ ರಾತ್ರಿ ಇಮಾಂದಾರ್ ಚೌಕ ಪ್ರದೇಶದಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ. ವನರಾಜ್ ಅಂಡೇಕರ್ ಗ್ಯಾಂಗ್ನ ಪ್ರಮುಖ ಸದಸ್ಯ ಬಂಡು ಅಲಿಯಾಸ್ ಸೂರ್ಯಕಾಂತ್ ಅಂಡೇಕರ್ ಅವರ ಮಗ.

ಪುಣೆ ಪೊಲೀಸರ ಪ್ರಕಾರ, ಆತನ ಮೇಲೆ ಹರಿತವಾದ ಆಯುಧಗಳಿಂದ ಕೂಡ ದಾಳಿ ನಡೆಸಲಾಗಿದೆ. ನಗರದ ನಾನಾ ಪೇಠ ಪ್ರದೇಶದಲ್ಲಿ ಮಾಜಿ ಕೌನ್ಸಿಲರ್‌ನನ್ನು ಹತ್ಯೆ ಮಾಡಲಾಗಿದೆ. ರಾತ್ರಿ 9.30ರ ಸುಮಾರಿಗೆ ತಮ್ಮ ಸಂಬಂಧಿಯೊಂದಿಗೆ ಇಮಾಂದಾರ್ ಚೌಕದಲ್ಲಿ ನಿಂತಿದ್ದರು. ಆಗ ಅವರ ಮೇಲೆ ದಾಳಿ ನಡೆದಿದೆ.

ದಾಳಿಕೋರರು ಮೊದಲು ಮಾಜಿ ಕೌನ್ಸಿಲರ್ ವನರಾಜ್ ಮೇಲೆ ಹಲ್ಲೆ ನಡೆಸಿ ನಂತರ ಗುಂಡು ಹಾರಿಸಿದ್ದಾರೆ. ವನರಾಜ್ ಅಂದೇಕರ್ ​​ರಕ್ತದಲ್ಲಿ ತೊಯ್ದು ಬಿದ್ದಿದ್ದಾಗ ದಾಳಿಕೋರರು ಅಲ್ಲಿಂದ ಓಡಿ ಹೋಗಿದ್ದಾರೆ.ಕೌಟುಂಬಿಕ ಕಲಹ ಹಾಗೂ ಹಣದ ಕಾರಣದಿಂದ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಪೊಲೀಸರು ವಶಕ್ಕೆ ಪಡೆದಿರುವ ಮೂವರ ವಿಚಾರಣೆ ನಡೆಯುತ್ತಿದೆ.

Ad
Ad
Nk Channel Final 21 09 2023