Ad

ಪ್ರೇಮಸಂಬಂಧ : ಮಗಳ ತಲೆ ಕಡಿದು ಕ್ರೂರವಾಗಿ ಕೊಂದ ತಂದೆ!

ಅಪ್ರಾಪ್ತ ವಯಸ್ಸಿನ ಮಗಳು ತನ್ನ ಮಾತು ಮೀರಿ ಪ್ರೀತಿಸಿದ್ದಕ್ಕೆ ಆಕೆಯ ಗಂಟಲು ಸೀಳಿ, ತಲೆಯನ್ನು ಕಡಿದು ಭೀಕರವಾಗಿ ಕೊಲೆಗೈದ ಘಟನೆ ಉತ್ತರಪ್ರದೇಶದ ಮೋತಿಪುರ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಉತ್ತರಪ್ರದೇಶ: ಅಪ್ರಾಪ್ತ ವಯಸ್ಸಿನ ಮಗಳು ತನ್ನ ಮಾತು ಮೀರಿ ಪ್ರೀತಿಸಿದ್ದಕ್ಕೆ ಆಕೆಯ ಗಂಟಲು ಸೀಳಿ, ತಲೆಯನ್ನು ಕಡಿದು ಭೀಕರವಾಗಿ ಕೊಲೆಗೈದ ಘಟನೆ ಉತ್ತರಪ್ರದೇಶದ ಮೋತಿಪುರ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇನ್ನು  ಕೊಲೆಯಾದ ಬಾಲಕಿ ತಾಯಿ ಸ್ವತಃ ದೂರು ನೀಡಿದ್ದು  ಪೋಲಿಸರು ಎಫ್‌ಐಆರ್‌ ದಾಖಲಿಸಿದ್ದಾರೆ. ಆರೋಪಿಯನ್ನು ತಂದೆಯನ್ನು ಬಂಧಿಸಿರುವುದಾಗಿ ವರದಿ ವಿವರಿಸಿದೆ. ಮೋತಿಪುರ್‌ ನ ಲಕ್ಷ್ಮಣ್‌ ಪುರ್‌ ಮತೇಹಿ ಗ್ರಾಮದ ನಿವಾಸಿ ನಯೀಮ್‌ ಖಾನ್‌ ಎಂಬಾತ ತನ್ನ 17 ವರ್ಷದ ಪುತ್ರಿಯನ್ನು ದಾರುಣವಾಗಿ ಹತ್ಯಗೈದಿರುವುದಾಗಿ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಪವಿತ್‌ ಮೋಹನ್‌ ತ್ರಿಪಾಠಿ ತಿಳಿಸಿದ್ದಾರೆ.

ಅಲ್ಲದೇ ಹರಿತವಾದ ಆಯುಧದಿಂದ ಆಕೆಯ ಗಂಟಲು ಸೀಳಿದ ನಂತರ, ತಲೆ, ಕೈ, ಕಾಲುಗಳನ್ನು ಕತ್ತರಿಸಿ, ಆಕೆಯ ಛಿದ್ರವಾದ ಶವದ ಬಳಿ ಕುಳಿತುಕೊಂಡಿದ್ದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿರುವುದಾಗಿ ವರದಿಯಾಗಿದೆ. ಈ ಬಾಲಕಿ ತನ್ನದೇ ಗ್ರಾಮದ ಯುವಕನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದು, ಎರಡು ಬಾರಿ ಈಕೆ ಆತನ ಜೊತೆ ಮನೆ ಬಿಟ್ಟು ಹೋಗಿದ್ದಳು ಎಂದು ತ್ರಿಪಾಠಿ ತಿಳಿಸಿದ್ದಾರೆ. ಆರೋಪಿಯನ್ನು ಬಂಧಿಸಿ, ಕೋರ್ಟ್‌ ಗೆ ಹಾಜರುಪಡಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ವರದಿ ತಿಳಿಸಿದೆ.

 

 

Ad
Ad
Nk Channel Final 21 09 2023