Bengaluru 22°C
Ad

ಮದುವೆ ಆಗಲ್ಲ ಎಂದ ಗೆಳೆಯನ ಖಾಸಗಿ ಅಂಗವನ್ನೇ ಕತ್ತರಿಸಿ ವಿಕೃತಿ ಮೆರೆದ ವೈದ್ಯೆ

ಪ್ರೀತಿಸಿದ್ದ ಗೆಳೆಯ ಮದುವೆ ಆಗಲ್ಲ ಎಂದಿದ್ದಕ್ಕೆ ವೈದೈಯೊಬ್ಬರು ಪ್ರಿಯಕರನ ಖಾಸಗಿ ಅಂಗವನ್ನು ಕತ್ತರಿಸಿ ವಿಕೃತಿ ಮೆರೆದಿದ್ದಾರೆ.ಈ ಘಟನೆ ಬಿಹಾರದ ಸರನ್ ಜಿಲ್ಲೆಯ ಖಾಸಗಿ ನರ್ಸಿಂಗ್ ಹೋಮ್​​ನಲ್ಲಿ ನಡೆದಿದೆ.

ಪಾಟ್ನಾ: ಪ್ರೀತಿಸಿದ್ದ ಗೆಳೆಯ ಮದುವೆಗೆ ಹಿಂಜರಿದ ಎಂದು ವೈದ್ಯೆಯೊಬ್ಬರು ಪ್ರಿಯಕರನ ಖಾಸಗಿ ಅಂಗವನ್ನು ಕತ್ತರಿಸಿ ವಿಕೃತಿ ಮೆರೆದಿದ್ದಾರೆ.ಈ ಘಟನೆ ಬಿಹಾರದ ಸರನ್ ಜಿಲ್ಲೆಯ ಖಾಸಗಿ ನರ್ಸಿಂಗ್ ಹೋಮ್​​ನಲ್ಲಿ ನಡೆದಿದೆ.

Ad
300x250 2

ವೈದ್ಯೆ ಅಭಿಲಾಷಾ ಅವರು 30 ವರ್ಷದ ಬಾಯ್‌ಫ್ರೆಂಡ್ ಜೊತೆ ಕಳೆದೆರೆಡು ವರ್ಷಗಳಿಂದ ಪರಸ್ಪರ ಸಂಪರ್ಕದಲ್ಲಿದ್ದರು. ಕಳೆದ ಜುಲೈ 1ಕ್ಕೆ ಇವರಿಬ್ಬರು ಚಪ್ರಾ ಕೋರ್ಟ್​ನಲ್ಲಿ ರಿಜಿಸ್ಟರ್ ಮದುವೆಯಾಗಬೇಕಾಗಿತ್ತು. ಆದರೆ ಮದುವೆಯಾಗಲು ಗೆಳೆಯನೇ ಬಂದಿರಲಿಲ್ಲ. ಮದುವೆಯಾಗದೆ ಮೋಸ ಮಾಡಿದ್ದಕ್ಕೆ ಸಿಟ್ಟು ಬಂದಿತ್ತು ಅದಕ್ಕೆ ಹೀಗೆ ಮಾಡಿದೆ ಎಂದು ಹೇಳಿದ್ದಾರೆ.

ನರ್ಸಿಂಗ್ ಹೋಮ್‌ಗೆ ಬಾಯ್ ಫ್ರೆಂಡ್ ಕರೆದ ವೈದ್ಯೆ ಅನಸ್ತೇಷಿಯಾ ಕೊಟ್ಟು ಖಾಸಗಿ ಅಂಗ ಕತ್ತರಿಸಿದ್ದಾರೆ. ಬಳಿಕ ಬಾಯ್ ಫ್ರೆಂಡ್‌ಗೆ ತೀವ್ರ ರಕ್ತಸ್ರಾವ ಆಗಿದ್ದು, ಪಾಟ್ನಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ರಕ್ತಸಿಕ್ತ ಚಾಕು, ವಿಕೃತ ವೈದ್ಯೆಯನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಸಂತ್ರಸ್ತ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

https://x.com/Rajmajiofficial/status/1808394308338569495

 

Ad
Ad
Nk Channel Final 21 09 2023
Ad