Ad

ಇಂದು ನಟ ದರ್ಶನ್ ಗೆ ಕಸ್ಟಡಿ ಅಂತ್ಯ, ಕೋರ್ಟ್​​ಗೆ ಹಾಜರು

ರೇಣುಕಾಸ್ವಾಮಿ ಹತ್ಯೆ ಕೇಸ್​​ನಲ್ಲಿ ಪೊಲೀಸ್ ಕಸ್ಟಡಿಯಲ್ಲಿರುವ ನಟ ದರ್ಶನ್ ಅಂಡ್ ಗ್ಯಾಂಗ್​ಗೆ ಇವತ್ತು ಕಸ್ಟಡಿ ಅಂತ್ಯವಾಗಲಿದ್ದು ಪೊಲೀಸರು ಕೋರ್ಟ್​​ಗೆ ಹಾಜರುಪಡಿಸಲಿದ್ದಾರೆ.

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಕೇಸ್​​ನಲ್ಲಿ ಪೊಲೀಸ್ ಕಸ್ಟಡಿಯಲ್ಲಿರುವ ನಟ ದರ್ಶನ್ ಅಂಡ್ ಗ್ಯಾಂಗ್​ಗೆ ಇವತ್ತು ಕಸ್ಟಡಿ ಅಂತ್ಯವಾಗಲಿದ್ದು ಪೊಲೀಸರು ಕೋರ್ಟ್​​ಗೆ ಹಾಜರುಪಡಿಸಲಿದ್ದಾರೆ.

Ad
300x250 2

ಪವಿತ್ರಾಗೌಡಗೆ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ ಕಳುಹಿಸಿದ್ದಕ್ಕೆ ಕೆರಳಿದ್ದ ದರ್ಶನ್ ಅಂಡ್ ಗ್ಯಾಂಗ್ ಹಲ್ಲೆ ಮಾಡಿ ಹತ್ಯೆ ಮಾಡಿರುವ ಆರೋಪವಿದ್ದು ಸಂಕಷ್ಟ ಎದುರಾಗಿದೆ. ಪ್ರಕರಣದ ತನಿಖೆ ಬಹುತೇಕ ಮುಗಿದಿದ್ದು ಇಂದು ನ್ಯಾಯಾಲಯ ತೀರ್ಪಿನ ಮೇಲೆ ನಿಂತಿದೆ.

ರೇಣುಕಾಸ್ವಾಮಿ ಭೀಕರ ಕೊಲೆ ಪ್ರಕರಣದಲ್ಲಿ ಡೆವಿಲ್ ಗ್ಯಾಂಗ್ ಅಂದರ್ ಆಗಿದ್ದು ತನಿಖೆ ಎದುರಿಸುತ್ತಿದೆ. ಕಳೆದ ಜೂನ್ 11ರಂದು ಅರೆಸ್ಟ್ ಆಗಿದ್ದ ಡಿ ಗ್ಯಾಂಗ್​​​  ಅನ್ನಪೂರ್ಣೇಶ್ವರಿ ನಗರ ಪೊಲೀಸರ ಕಸ್ಟಡಿಯಲ್ಲಿದ್ದಾರೆ. ಈಗಾಗಲೇ ನಟ ದರ್ಶನ್ ಅಂಡ್ ಗ್ಯಾಂಗ್​​ಗೆ ಎರಡು ಬಾರಿ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗಿದೆ.

ಕಳೆದ 10 ದಿನಗಳಿಂದ ಕಸ್ಟಡಿಯಲ್ಲಿ ಇರುವ ಎಲ್ಲಾ 19 ಮಂದಿ ಆರೋಪಿಗಳ ಪೊಲೀಸ್ ಕಸ್ಟಡಿ ಅಂತ್ಯ ಆಗಲಿದ್ದು ಇವತ್ತು ಪೊಲೀಸರು ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

ಇವತ್ತು ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದರೆ ದರ್ಶನ್ ಅಂಡ್​​ ಗ್ಯಾಂಗ್​​ಗೆ ಜೈಲಾಗಲಿದೆ. ನಟ ದರ್ಶನ್ ಮತ್ತೆ ಪರಪ್ಪನ ಅಗ್ರಹಾರ ಜೈಲು ಸೇರಲಿದ್ದಾರೆ. 2011ರಲ್ಲಿ ಪತ್ನಿ ವಿಜಯಲಕ್ಷ್ಮಿ ಮೇಲೆ ಹಲ್ಲೆ ಮಾಡಿ ಜೈಲು ಸೇರಿದ್ದ ನಟ ದರ್ಶನ್ ಮತ್ತೆ ಪರಪ್ಪನ ಅಗ್ರಹಾರ ಜೈಲು ಸೇರಲಿದ್ದಾರೆ.

ದರ್ಶನ್ ಅಂಡ್ ಗ್ಯಾಂಗ್ ಕಸ್ಟಡಿ ಭವಿಷ್ಯ ಇಂದು ನಿರ್ಧಾರ ಆಗಲಿದೆ. ಕಳೆದ 10 ದಿನಗಳಿಂದ ಕಸ್ಟಡಿಯಲ್ಲಿರುವ ದರ್ಶನ್​ನನ್ನು ಪೊಲೀಸರು ಒಂದು ಪ್ರಕರಣದಲ್ಲಿ 14 ದಿನ ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ. ಈಗಾಗಲೇ 10 ದಿನಗಳನ್ನು ಕಸ್ಟಡಿಯಲ್ಲಿ ಕಳೆದಿರುವ ಹಿನ್ನೆಲೆ ಇನ್ನೂ 4 ದಿನಗಳ ಕಾಲ ಪೊಲೀಸರು ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ. ಆದರೆ ಇದಕ್ಕೆ ದರ್ಶನ್ ಪರ ವಕೀಲರು ಆಕ್ಷೇಪಣೆ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

 

 

Ad
Ad
Nk Channel Final 21 09 2023
Ad