ಬೆಂಗಳೂರು: ರೌಡಿಶೀಟರ್‌ನನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಸಿದ್ಧಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಐಸಾಕ್ (30) ಮೃತಪಟ್ಟ ರೌಡಿಶೀಟರ್. ವೆಂಕಟೇಶ ಅಲಿಯಾಸ್ ಒಂಟಿ ಕೈ ವೆಂಕಟೇಶ ಎಂಬಾತನ ಗ್ಯಾಂಗ್, ಐಸಾಕ್‌ನನ್ನು ಸುತ್ತುಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಂದುಹಾಕಿದೆ.
ಡ್ರಗ್ಸ್ ಹಾವಳಿ ಹಾಗೂ ವಹಿವಾಟಿನ ಹಿನ್ನೆಲೆಯಲ್ಲಿ ಕೊಲೆ ನಡೆದಿರುವ ಶಂಕೆ ಮೂಡಿದೆ. ಮೃತ ಐಸಾಕ್ ಹಲವು ಕಡೆ ಡ್ರಗ್ಸ್, ಗಾಂಜಾ ಮಾರಾಟ ಮಾಡುತ್ತಿದ್ದನು. ಇದನ್ನು ಒಂಟಿ ಕೈ ವೆಂಕಟೇಶ ವಿರೋಧಿಸಿದ್ದನು. ವೆಂಕಟೇಶನ ಸ್ನೇಹಿತರಿಗೂ ಕೂಡ ಐಸಾಕ್ ಗಾಂಜಾ ನೀಡಿ ಅಡಿಕ್ಟ್ ಆಗುವಂತೆ ಮಾಡಿದ್ದನು. ಒಂದೇ ಏರಿಯಾ ಆದ ಕಾರಣ ಹುಡುಗರು ಗಾಂಜಾ ಚಟಕ್ಕೆ ಬಿದ್ದಿದ್ದರು.
ಈ ಹಿನ್ನೆಲೆಯಲ್ಲಿ ಐಸಾಕ್‌ಗೆ ಒಂಟಿ ಕೈ ವೆಂಕಟೇಶ್ ವಾರ್ನ್ ಮಾಡಿದ್ದನು. ಆದರೂ ಐಸಾಕ್ ಗಾಂಜಾ ಮಾರಾಟ ನಿಲ್ಲಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಬೆಳಗಿನ ಜಾವ 3-30ರ ಸಂದರ್ಭದಲ್ಲಿ ಐಸಾಕ್‌ನನ್ನು ಕೊಲೆ ಮಾಡಲಾಗಿದೆ. ಸದ್ಯ ನಿಖರ ಕಾರಣ ಹಾಗು ಆರೋಪಿಗಳಿಗಾಗಿ ಸಿದ್ದಾಪುರ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಒಂಟಿ ಕೈ ವೆಂಕಟೇಶ್ ಈ ಹಿಂದೆ ನಾಲ್ಕು ಕೊಲೆ ಕೇಸುಗಳಲ್ಲಿ ಭಾಗಿಯಾಗಿದ್ದಾನೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.