Bengaluru 22°C
Ad

ಬಿಹಾರದ ಮೋಸ್ಟ್​ ವಾಂಟೆಡ್ ಗ್ಯಾಂಗ್​ಸ್ಟರ್​ ನೀಲೇಶ್​ ರೈ ಹತ್ಯೆ

ಬಿಹಾರದ ಮೋಸ್ಟ್​ ವಾಂಟೆಡ್ ಗ್ಯಾಂಗ್​ಸ್ಟರ್​ ನೀಲೇಶ್​ ರೈ ಎಂಬಾತನನ್ನು ಉತ್ತರ ಪ್ರದೇಶದಲ್ಲಿ ಪೊಲೀಸರು ಎನ್​ಕೌಂಟರ್​ನಲ್ಲಿ ಹತ್ಯೆ ಮಾಡಿದ್ದಾರೆ. 

ಉತ್ತರ ಪ್ರದೇಶ: ಬಿಹಾರದ ಮೋಸ್ಟ್​ ವಾಂಟೆಡ್ ಗ್ಯಾಂಗ್​ಸ್ಟರ್​ ನೀಲೇಶ್​ ರೈ ಎಂಬಾತನನ್ನು ಉತ್ತರ ಪ್ರದೇಶದಲ್ಲಿ ಪೊಲೀಸರು ಎನ್​ಕೌಂಟರ್​ನಲ್ಲಿ ಹತ್ಯೆ ಮಾಡಿದ್ದಾರೆ.

ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆಗಳ (ಎಸ್‌ಟಿಎಫ್) ಜಂಟಿ ತಂಡ ಬುಧವಾರ ರಾತ್ರಿ ಎನ್‌ಕೌಂಟರ್ ನಡೆಸಿದೆ.

ಯುಪಿ ಎಸ್‌ಟಿಎಫ್‌ನ ನೋಯ್ಡಾ ಘಟಕ ಮತ್ತು ಬಿಹಾರ ಎಸ್‌ಟಿಎಫ್ ಜಂಟಿ ಕಾರ್ಯಾಚರಣೆಯಲ್ಲಿ, ಮುಜಾಫರ್‌ನಗರದ ರತನ್‌ಪುರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎನ್‌ಕೌಂಟರ್ ನಡೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಯಶ್ ಹೇಳಿದರು.

ಬಿಹಾರದ ಬೇಗುಸರಾಯ್ ಜಿಲ್ಲೆಗೆ ಸೇರಿದ ನೀಲೇಶ್ ರೈ ವಿರುದ್ಧ ಕೊಲೆ, ಲೂಟಿ ಮತ್ತು ಸುಲಿಗೆ ಸೇರಿದಂತೆ 16 ಪ್ರಕರಣಗಳು ದಾಖಲಾಗಿತ್ತು. ಪೊಲೀಸರು  ಆತನನ್ನು ಹಿಡಿದುಕೊಟ್ಟವರಿಗೆ 2.5 ಲಕ್ಷ ಬಹುಮಾನವನ್ನು ಕೂಡ ಘೋಷಿಸಲಾಗಿತ್ತು.

ಫೆಬ್ರವರಿ 24 ರಂದು, ಪೊಲೀಸ್ ತಂಡವು ಬೇಗುಸರಾಯ್‌ನಲ್ಲಿರುವ ರೈ ಅವರ ಅಡಗುತಾಣದ ಮೇಲೆ ದಾಳಿ ನಡೆಸಿತ್ತು, ಆಗ ಆತ ಸಹಚರರೊಂದಿಗೆ ಪೊಲೀಸರ ಮೇಲೆ ಮನಬಂದಂತೆ ಗುಂಡು ಹಾರಿಸಿ ಪರಾರಿಯಾಗಿದ್ದ.

Ad
Ad
Nk Channel Final 21 09 2023
Ad