ಚಿಕ್ಕಮಗಳೂರು: 5 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಬರ್ಬರ ಕೊಲೆ ಮಾಡಿದ ಅಮಾನುಷ ಘಟನೆ ಜಿಲ್ಲೆಯ ಅಜ್ಜಂಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಜ್ವರ ಬಂದ ಹಿನ್ನೆಲೆ ಅಂಗನವಾಡಿಗೆ ಹೋಗದೇ ಬಾಲಕಿ ಮನೆಯಲ್ಲೇ ಇದ್ದಳು. ಇದನ್ನು ತಿಳಿದುಕೊಂಡು ಮನೆಗೆ ನುಗ್ಗಿದ ದುರುಳರು, ಅತ್ಯಾಚಾರಕ್ಕೆ ಯತ್ನಿಸಿ ಕೊಲೆಗೈದಿದ್ದಾರೆ. ನಂತರ ಬಾಲಕಿಯ ಮೃತದೇಹವನ್ನು ಬೆಡ್ಶೀಟ್ನಲ್ಲಿ ಸುತ್ತಿಟ್ಟು ಪರಾರಿಯಾಗಿದ್ದಾರೆ.
ಜ್ವರ ಎಂದು ಮಗು ಅಂಗನವಾಡಿಗೆ ಹೋಗಿರಲಿಲ್ಲ. ಇತ್ತ ತಾಯಿ ಜಮೀನು ಕೆಲಸಕ್ಕೆ ತೆರಳಿದ್ದರು. ಇದನ್ನೇ ಕಾಯುತ್ತಿದ್ದ ಕಾಮಾಂಧರು ಏಕಾಂಗಿಯಾಗಿದ್ದ ಮಗು ಮೇಲೆ ಅಮಾನುಷವಾಗಿ ಹಿಂಸೆಗೈದು, ಹತ್ಯೆ ಮಾಡಿದ್ದಾರೆ. ಇತ್ತ ತಾಯಿ ಕೆಲಸ ಮುಗಿಸಿ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಅಜ್ಜಂಪುರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Ad