Ad

ತನ್ನ ಲೈಂಗಿಕ ಚಟಕ್ಕೆ ನಿರಾಕರಿಸಿದ ಮಗಳನ್ನೇ ಕೊಂದ ನೀಚ ತಂದೆ

ತಂದೆ ತಾಯಿ ಮಕ್ಕಳ ಜೀವಂತ ದೇವರು ಎನ್ನಲಾಗುತ್ತದೆ. ಮಗಳ ರಕ್ಷಣೆ ತಂದೆಯ ಮುಖ್ಯ ಗುರಿಯಾಗಿರುತ್ತದೆ. ಕೆಟ್ಟ ಜನರಿಂದ ಮಗಳ ರಕ್ಷಣೆ ಮಾಡಬೇಕಾದದ್ದು ತಂದೆಯ ಕರ್ತವ್ಯ. ಆದರೆ ಇಲ್ಲಿ ತಂದೆಯೇ ಮಗಳ ಮೇಲೆ ಕೆಟ್ಟ ದೃಷ್ಟಿ ಬೀರಿದ್ದಾನೆ.

ಹೈದರಾಬಾದ್ : ತಂದೆ ತಾಯಿ ಮಕ್ಕಳ ಜೀವಂತ ದೇವರು ಎನ್ನಲಾಗುತ್ತದೆ. ಮಗಳ ರಕ್ಷಣೆ ತಂದೆಯ ಮುಖ್ಯ ಗುರಿಯಾಗಿರುತ್ತದೆ. ಕೆಟ್ಟ ಜನರಿಂದ ಮಗಳ ರಕ್ಷಣೆ ಮಾಡಬೇಕಾದದ್ದು ತಂದೆಯ ಕರ್ತವ್ಯ. ಆದರೆ ಇಲ್ಲಿ ತಂದೆಯೇ ಮಗಳ ಮೇಲೆ ಕೆಟ್ಟ ದೃಷ್ಟಿ ಬೀರಿದ್ದಾನೆ.

Ad
300x250 2

ಹೈದರಾಬಾದ್‌ನ ನಾಡಿಗಡ್ಡ ತಾಂಡಾದಲ್ಲಿ 35 ವರ್ಷದ ನೀಚ ತಂದೆಯೊಬ್ಬ ತನ್ನ ಜೊತೆ ಲೈಂಗಿಕ ಕ್ರಿಯೆ ನಡೆಸಲು ನಿರಾಕರಿಸಿದ 13 ವರ್ಷದ ಮಗಳನ್ನು ದಾರುಣವಾಗಿ ಕೊಂದಿರುವ ಆಘಾತಕಾರಿ ಘಟನೆ ನಡೆದಿದೆ.

ತಂದೆಗೆ ಅಶ್ಲೀಲ ವಿಡಿಯೋ ನೋಡುವ ಚಟವಿತ್ತು ಇದರಿಂದ ತನ್ನ ಚಟ ತೀರಿಸಲು ಮಗಳ ಮೇಲೆಯೇ ಕಣ್ಣು ಹಾಕಿದ. ಅದಕ್ಕಾಗಿ ಆಕೆಯನ್ನು ಕಟ್ಟಿಗೆ ತರುವ ಹತ್ತಿರದ ಕಾಡಿಗೆ ಕರೆದೊಯ್ದ. ಅಲ್ಲಿ ಆಕೆಯ ಜೊತೆ ಲೈಂಗಿಕ ಸಂಬಂಧ ಹೊಂದಲು ಪ್ರಯತ್ನಿಸಿದಾಗ ಆಕೆ ಅದನ್ನು ನಿರಾಕರಿಸಿದ್ದಳು. ಇದರಿಂದ ಕೋಪಗೊಂಡ ಆತ ಆಕೆಯ ತಲೆಯನ್ನು ಬಂಡೆಗೆ ಅಪ್ಪಳಿಸಿ ಕೊಲೆ ಮಾಡಿ ಮನೆಗೆ ಮರಳಿದ್ದಾನೆ.

ಬಳಿಕ ಪೋಲಿಸರಿಗೆ ಹೆದರಿ ಸ್ವತಃ ಸ್ಟೇಷನ್‌ ಹೋಗಿ ಮಗಳು ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದಾನೆ. ಈ ಬಗ್ಗೆ ವಿಚಾರಣೆ ನಡೆಸಿದ ಪೊಲೀಸ್‌ ಸಿಸಿಟಿವಿಯನ್ನು ಪರಿಶೀಲಿಸಿದ್ದಾರೆ. ಅದರಲ್ಲಿ ಕಾಡಿಗೆ ಹೋಗುವಾಗ ತಂದೆ ಮಗಳ ಜೊತೆ ಇದ್ದರೆ, ವಾಪಾಸು ಬರುವಾಗ ತಂದೆ ಒಬ್ಬನೇ ಬಂದಿರುವುದು ಕಂಡುಬಂದಿದೆ. ಹಾಗಾಗಿ ಅನುಮಾನಗೊಂಡ ಪೊಲೀಸರು ತಂದೆಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆತ ಸತ್ಯ ಬಾಯ್ಬಿಟ್ಟಿದ್ದಾನೆ.

Ad
Ad
Nk Channel Final 21 09 2023
Ad