Bengaluru 24°C
Ad

ಬೆಂಗಳೂರಿನಲ್ಲಿ ಮಹಿಳೆಯ ಹತ್ಯೆ ಪ್ರಕರಣ: ಅಶ್ರಫ್‌ ಸೇರಿದಂತೆ ನಾಲ್ವರ ಮೇಲೆ ಅನುಮಾನ

ಮಲ್ಲೇಶ್ವರದ ವೈಯಾಲಿಕಾವಲ್‌ನಲ್ಲಿ ಮಹಿಳೆಯ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಶ್ರಫ್‌ ಸೇರಿದಂತೆ ನಾಲ್ವರ ಮೇಲೆ ಕೊಲೆಯಾದ ಮಹಿಳೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ಮಲ್ಲೇಶ್ವರದ ವೈಯಾಲಿಕಾವಲ್‌ನಲ್ಲಿ ಮಹಿಳೆಯ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಶ್ರಫ್‌ ಸೇರಿದಂತೆ ನಾಲ್ವರ ಮೇಲೆ ಕೊಲೆಯಾದ ಮಹಿಳೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.

ಅಶ್ರಫ್‌, ಮುಕ್ತ, ಶಶಿಧರ್, ಸುನೀಲ್ ನಾಲ್ವರ ಹೆಸರನ್ನು ಕೊಲೆಯಾದ ಮಹಿಳೆ ಕುಟುಂಬಸ್ಥರು ಹೇಳಿದ್ದಾರೆ. ಮುಕ್ತ, ಶಶಿಧರ್‌, ಸುನೀಲ್ ಮೂವರು ಮೃತ ಮಹಾಲಕ್ಷ್ಮಿ ಸಹೋದ್ಯೋಗಿಗಳು.‌ ಕೆಲಸ ಮಾಡುವ ಕಡೆಯಲ್ಲಿ ಮಹಾಲಕ್ಷ್ಮಿ ಜಗಳ ಮಾಡಿಕೊಂಡಿದ್ದಳು.

ಮಹಾಲಕ್ಷ್ಮಿ ಜೊತೆ ಅಶ್ರಫ್‌ ಸಲುಗೆಯಿಂದ ಇದ್ದ. ಈತ ಉತ್ತರಾಖಂಡ ಮೂಲದವ. ಸಲೂನ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದ. ಈಗ ಮಹಾಲಕ್ಷ್ಮಿ ಕುಟುಂಬಸ್ಥರು ನಾಲ್ವರ ಮೇಲೆ ಅನುಮಾನ ಇದೆ ಎಂದಿದ್ದಾರೆ. ಮಹಾಲಕ್ಷ್ಮಿ ಮತ್ತು ನಾನು ಮದುವೆಯಾಗಿ 6 ವರ್ಷ ಆಗಿತ್ತು. ನಾನು ಮೊಬೈಲ್‌ ಶಾಪ್‌ ಇಟ್ಟುಕೊಂಡಿದ್ದೇನೆ. 9 ತಿಂಗಳ ಹಿಂದಷ್ಟೇ ಇಬ್ಬರೂ ಬೇರೆ ಬೇರೆಯಾಗಿದ್ದೆವು. ಮೊನ್ನೆ ಮಹಾಲಕ್ಷ್ಮಿ ಇದ್ದ ಮನೆ ಮಾಲೀಕರು ಕರೆ ಮಾಡಿ, ಮನೆಯಲ್ಲಿ ವಾಸನೆ ಬರುತ್ತಿದೆ ಎಂದು ಹೇಳಿದ್ದರು. ಬಂದು ನೋಡಿದಾಗ ದೇಹವನ್ನು ಪೀಸ್‌ ಪೀಸ್‌ ಮಾಡಿ ಫ್ರಿಡ್ಜ್‌ನಲ್ಲಿಟ್ಟಿರುವುದು ಗೊತ್ತಾಗಿದೆ.

ಅಶ್ರಫ್‌ ಎಂಬಾತನ ಮೇಲೆ ಅನುಮಾನ ಇದೆ. ಅವನ ವಿರುದ್ಧ ನಾನು ನೆಲಮಂಗಲದಲ್ಲಿ ದೂರು ಕೊಟ್ಟಿದ್ದೇನೆ. ಆತನೊಂದಿಗೆ ಮಹಾಲಕ್ಷ್ಮಿ ಸ್ನೇಹ ಹೊಂದಿದ್ದಳು. ನಾನು ಎಲ್ಲವನ್ನೂ ಪತ್ತೆಹಚ್ಚಿದ್ದೆ. ಅಶ್ರಫ್‌ ವಿಚಾರವಾಗಿ ಈಗ ನನಗೆ ಹೆಚ್ಚಿನ ಮಾಹಿತಿ ಗೊತ್ತಿಲ್ಲ. ಮಹಾಲಕ್ಷ್ಮಿ ಮತ್ತು ನನಗೆ ಒಬ್ಬಳು ಹೆಣ್ಣುಮಗಳಿದ್ದಾಳೆ. ಮಗಳು ಈಗ ನನ್ನ ಜೊತೆಯಲ್ಲೇ ಇದ್ದಾಳೆ. ತಿಂಗಳಿಗೊಮ್ಮೆ ಮಗಳನ್ನು ನೋಡಲು ಮಹಾಲಕ್ಷ್ಮಿ ನನ್ನ ಮೊಬೈಲ್‌ ಶಾಪ್‌ಗೆ ಬರುತ್ತಿದ್ದಳು. ಹತ್ಯೆಗೂ ಮುನ್ನ ಕೊನೆಯದಾಗಿ 25 ದಿನಗಳ ಹಿಂದೆ ಬಂದಿದ್ದಳು ಎಂದು ಮಹಾಲಕ್ಷ್ಮಿ ಪತಿ ಮಾಹಿತಿ ನೀಡಿದ್ದಾರೆ.

Ad
Ad
Nk Channel Final 21 09 2023