ಮೈಸೂರು : ಬೈಕ್‌ನಲ್ಲಿ ಹೋಗುತ್ತಿದ್ದ ವ್ಯಕ್ತಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಮೈಸೂರು ಹೊರವಲಯದ ಬೆಲವತ್ತ ಗ್ರಾಮದಲ್ಲಿ ನಡೆದಿದೆ.
ಹನುಮಂತು (57) ಕೊಲೆಯಾದವರು. ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ದ್ವೇಷ ಹಿನ್ನೆಲೆ ಕೊಲೆ ಶಂಕೆ ವ್ಯಕ್ತವಾಗಿದೆ. ನೆನ್ನೆ ರಾತ್ರಿ ತಮ್ಮ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಕೃತ್ಯ ಎಸಗಿದ್ದಾರೆ. ಹನುಮಂತು ರಿಯಲ್ ಎಸ್ಟೇಟ್ ವೃತ್ತಿ ನಡೆಸುತ್ತಿದ್ದನು.
ತಮ್ಮ ಜಮೀನು ಮಾರಾಟ ಸಂಬಂಧ ಹನುಮಂತ ಕೆಲವರೊಂದಿಗೆ ವೈಮನಸ್ಯ ಹೊಂದಿದ್ದನು. ಆರೋಪಿ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.